ಮಡಿಕೇರಿ, ಜೂ. ೨೩: ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ‘ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರ’ದ ವತಿಯಿಂದ ನವದೆಹಲಿಯ ವಿಶ್ವವಿದ್ಯಾನಿಲಯದ ಧನಸಹಾಯ ಆಯೋಗದವರು ನಡೆಸಲಿರುವ ಕಿರಿಯ ಶಿಷ್ಯವೇತನ ಸಂಶೋಧಕರ ಸಹಾಯಕರ (ಜೆಆರ್‌ಎಫ್) ಮತ್ತು ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ರಾಷ್ಟç ಮಟ್ಟದ ಅರ್ಹತಾ ಪರೀಕ್ಷೆ (ಯುಜಿಸಿ-ನೆಟ್)ಗೆ ಮತ್ತು ಕರ್ನಾಟಕ ಸರ್ಕಾರವು ನಡೆಸಲಿರುವ ರಾಜ್ಯ ಮಟ್ಟದ ಪದವಿ ಕಾಲೇಜು ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ (ಕೆ-ಸೆಟ್)ಗೆ ೪೫ ದಿನಗಳ ತರಬೇತಿ ಶಿಬಿರ ನಡೆಯಲಿದೆ.

ಆಸಕ್ತರು ತಾ. ೨೮ ರೊಳಗೆ ಮೈಸೂರಿನಲ್ಲಿರುವ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಆವರಣದಲ್ಲಿರುವ ಕರಾಮುವಿ ಸ್ಪರ್ಧಾತ್ಮಕ ಪರೀಕ್ಷಾ ತರಬೇತಿ ಕೇಂದ್ರದ ಕಚೇರಿಯಲ್ಲಿ ಬೆಳಿಗ್ಗೆ ೧೦ ಗಂಟೆಯಿAದ ಸಂಜೆ ೫ ಗಂಟೆಯೊಳಗೆ ತಮ್ಮ ಹೆಸರನ್ನು ನೋಂದಾಯಿಸಿಕೊಳ್ಳಬಹುದು. ಹೆಚ್ಚಿನ ವಿವರಗಳಿಗೆ ದೂ.ಸಂ. ೦೮೨೧-೨೫೧೫೯೪೪ ನ್ನು ಸಂಪರ್ಕಿಸಬಹುದು ಎಂದು ಕರಾಮುವಿ ಕುಲಸಚಿವರಾದ ಪ್ರೊ. ಆರ್.ರಾಜಣ್ಣ ಅವರು ತಿಳಿಸಿದ್ದಾರೆ.