ಶನಿವಾರಸAತೆ, ಜೂ. ೨೩: ಕೊಡ್ಲಿಪೇಟೆ ಪಟ್ಟಣದ ಸಾರ್ವಜನಿಕ ರಸ್ತೆಯಲ್ಲಿ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುತ್ತಿದ್ದ ಮೂವರು ಚಾಲಕರುಗಳಿಗೆ ಸೋಮವಾರಪೇಟೆ ನ್ಯಾಯಾಲಯ ಒಟ್ಟು ೩೬ ಸಾವಿರ ದಂಡ ವಿಧಿಸಿದೆ.

ಕೊಡ್ಲಿಪೇಟೆ ರಸ್ತೆಯಲ್ಲಿ ಮದ್ಯ ಸೇವನೆ ಮಾಡಿ ವಾಹನ ಚಾಲನೆ ಮಾಡುತ್ತಿದ್ದಾಗ ಮದ್ಯ ಸೇವನೆ ಮಾಡಿರುವುದು ಪತ್ತೆಯಾಗಿದ್ದು, ಮೂರು ವಾಹನಗಳನ್ನು ವಶಪಡಿಸಿಕೊಂಡ ಪೊಲೀಸರು ನ್ಯಾಯಾಲಯಕ್ಕೆ ವರದಿ ಸಲ್ಲಿಸಿದ್ದರು. ಚಾಲಕರು ನ್ಯಾಯಾಲಯಕ್ಕೆ ಹಾಜರಾಗಿದ್ದು, ನ್ಯಾಯಾಲಯ ಮಾರುತಿ ಓಮಿನಿ ಚಾಲಕನಿಗೆ ರೂ. ೧೦ ಸಾವಿರ ದಂಡ, ಓರ್ವ ಬೈಕ್ ಸವಾರನಿಗೆ ರೂ. ೧೦,೫೦೦, ಇನ್ನೋರ್ವ ಬೈಕ್ ಸವಾರನಿಗೆ ರೂ. ೧೫,೫೦೦ ದಂಡ ವಿಧಿಸಿದೆ.

ಕಾರ್ಯಾಚರಣೆಯಲ್ಲಿ ಪೊಲೀಸ್ ವೃತ್ತ ನಿರೀಕ್ಷಕ ಎಸ್. ಪರಶಿವಮೂರ್ತಿ, ಸಿಬ್ಬಂದಿಗಳಾದ ಡಿಂಪಲ್, ಪರಮೇಶ್, ಸತೀಶ್, ಕುಮಾರ್ ಇತರರು ಪಾಲ್ಗೊಂಡಿದ್ದರು.