ಕಣಿವೆ, ಜೂ. ೨೩: ಕುಶಾಲನಗರದ ಸರ್ಕಾರಿ ಪಿಯು ಕಾಲೇಜು ಪ್ರಾಂಗಣ ಮೂಲಭೂತ ಸೌಕರ್ಯಗಳಿಲ್ಲದೆ ನಲುಗಿದೆ. ಪಟ್ಟಣದ ತಗ್ಗು ಪ್ರದೇಶದಲ್ಲಿರುವ ಕಾಲೇಜಿನ ಸುತ್ತ ಅತೀ ಅಗತ್ಯವಾದ ತಡೆಗೋಡೆ ಇಲ್ಲದ ಪರಿಣಾಮ ಸಾರ್ವಜನಿಕರು ಹಾಗೂ ಕೆಲವು ಪುಂಡ - ಪೋಕರಿಗಳು ಕಾಲೇಜಿನ ಕಿಟಕಿಗಳ ಗಾಜುಗಳನ್ನೆಲ್ಲ ಒಡೆದು ಹಾನಿ ಮಾಡಿದ್ದಾರೆ.

ಕಾಲೇಜಿನ ಸುತ್ತಲು ಅಗತ್ಯವಾದ ತಡೆಗೋಡೆ ಇಲ್ಲದ ಕಾರಣ ವರ್ಷದ ಎಲ್ಲಾ ದಿನಗಳಲ್ಲೂ ವಿವಿಧ ಕ್ರೀಡೆಗಳಲ್ಲಿ ನಿರತ ಯುವಕರ ಗುಂಪು ಈ ಕಾಲೇಜು ಪ್ರಾಂಗಣದ ಜಾಗವನ್ನು ಮನಬಂದAತೆ ಬಳಕೆ ಮಾಡುತ್ತಿದೆ. ಕೆಲವು ಪುಂಡರು ಕಾಲೇಜು ಹಾಗೂ ಪ್ರೌಢ ಶಾಲಾ ವಿಭಾಗದ ಕಟ್ಟಡಗಳ ಕಿಟಕಿ ಬಾಗಿಲುಗಳನ್ನು ಹಾನಿ ಮಾಡಿದ್ದಾರೆ.

ಆದ್ದರಿಂದ ಮೈದಾನಕ್ಕೆ ಸಾರ್ವಜನಿಕರ ಪ್ರವೇಶಕ್ಕೆ ನಿರ್ಬಂಧ ಹೇರಬೇಕಿದೆ. ಒಂದು ವೇಳೆ ತಡೆಗೋಡೆ ನಿರ್ಮಾಣಗೊಂಡಲ್ಲಿ ಮೈದಾನವನ್ನು ಬಳಸುವವರಿಗೆ ಷರತ್ತುಗಳನ್ನು ವಿಧಿಸಿ ನೀಡಬಹುದಾಗಿದೆ. ಹಾಗಾದಾಗ ಸಾರ್ವಜನಿಕ ಆಸ್ತಿ ಪಾಸ್ತಿಗಳ ಹಾನಿಯು ತಪ್ಪುತ್ತದೆ.

ಹಳ್ಳಿಗಾಡು ಮಕ್ಕಳ ಆಶಾಕಿರಣ

ಕುಶಾಲನಗರದ ಈ ಸರ್ಕಾರಿ ಪಿಯು ಕಾಲೇಜು ಕುಶಾಲನಗರ ತಾಲೂಕು ಸೇರಿದಂತೆ ಸುತ್ತಲಿನ ಹತ್ತಾರು ಗ್ರಾಮಗಳ ಅದರಲ್ಲೂ ನೆರೆಯ ಮೈಸೂರು ಜಿಲ್ಲೆಯ ಗಡಿ ಗ್ರಾಮಗಳ ಬಡ ಮಕ್ಕಳ ಪಾಲಿಗೆ ಈ ಕಾಲೇಜು ಪ್ರಮುಖ ಆಶಾಕಿರಣವಾಗಿದೆ.

ಖಾಯಂ ಉಪನ್ಯಾಸಕರೇ ಇಲ್ಲ

ಕಾಲೇಜಿನಲ್ಲಿ ಕಳೆದ ಐದು ವರ್ಷಗಳಿಂದ ಖಾಯಂ ಉಪನ್ಯಾಸಕರೇ ಇಲ್ಲದೇ ಅತಿಥಿ ಉಪನ್ಯಾಸಕರನ್ನು ನೇಮಕ ಮಾಡಿಕೊಂಡು ಮಕ್ಕಳಿಗೆ ಪಾಠ ಪ್ರವಚನ ನೀಡಲಾಗುತ್ತಿದೆ. ಅರ್ಥಶಾಸ್ತçದ ಇಬ್ಬರು ಉಪನ್ಯಾಸಕರು, ಸಮಾಜ ವಿಜ್ಞಾನ ಹಾಗೂ ರಾಜ್ಯ ಶಾಸ್ತç ವಿಷಯಕ್ಕೆ ತಲಾ ಓರ್ವ ಉಪನ್ಯಾಸಕರು, ವಾಣಿಜ್ಯ ವಿಭಾಗದ ಇಬ್ಬರು ಉಪನ್ಯಾಸಕರು, ಓರ್ವ ಕಚೇರಿ ಗುಮಾಸ್ತರು, ಇಬ್ಬರು ಡಿ ಗ್ರೂಪ್ ನೌಕರರ ಹುದ್ದೆಗಳು ಖಾಲಿ ಇವೆ. ಅಷ್ಟಕ್ಕೂ ಅತೀ ಅಗತ್ಯವಾಗಿ ರಾತ್ರಿ ಪಾಳಿಯ ನೌಕರರೊಬ್ಬರ ಅಗತ್ಯವಿದೆ ಎಂದು ಕಾಲೇಜು ಪ್ರಾಂಶುಪಾಲ ಸತೀಶ್ ಬಾಬು ಹೇಳುತ್ತಾರೆ.

ಕಾಲೇಜಿನಲ್ಲಿ ಅತ್ಯಧಿಕ ಅಂದರೆ ಮೊದಲ ಹಾಗೂ ದ್ವಿತೀಯ ಪಿಯು ವಿಭಾಗದಲ್ಲಿ ಒಟ್ಟು ೭೦೦ ವಿದ್ಯಾರ್ಥಿಗಳು ಪ್ರವೇಶ ಪಡೆದಿದ್ದಾರೆ. ಈ ಪೈಕಿ ಬಾಲಕಿಯರು ೩೬೦ ಹಾಗೂ ಬಾಲಕರು ೩೪೦ ಸಂಖ್ಯೆಯಲ್ಲಿದ್ದಾರೆ. ಆದ್ದರಿಂದ ಈ ಸರ್ಕಾರಿ ಕಾಲೇಜಿನ ಮೇಲೆ ಸರ್ಕಾರಕ್ಕೆ ಹೆಚ್ಚಿನ ಬದ್ಧತೆ ಬೇಕಿದೆ.

ಕ್ಷೇತ್ರದ ಜನಪ್ರತಿನಿಧಿಗಳು ಈ ಬಗ್ಗೆ ಗಮನ ಹರಿಸಿ ವಿದ್ಯಾರ್ಥಿಗಳಿಗೆ ಆಗುತ್ತಿರುವ ಅನಾನುಕೂಲಗಳನ್ನು ಸರಿಪಡಿಸಲು ಮುಂದಾಗಬೇಕಿದೆ.

- ಕೆ.ಎಸ್. ಮೂರ್ತಿ