ಸುಂಟಿಕೊಪ್ಪ, ಜೂ. ೨೩: ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ೨೦೨೨-೨೦೨೭ನೇ ಸಾಲಿನ ತಾಲೂಕು ಘಟಕ, ಜಿಲ್ಲಾ ಘಟಕ ಹಾಗೂ ರಾಜ್ಯ ಘಟಕದ ಚುನಾವಣೆ ನಡೆಯಲಿದೆ.
ತಾಲೂಕು ಘಟಕದ ನಿರ್ದೇಶಕರ ಚುನಾವಣೆಗೆ ತಾ. ೨೭ ರಿಂದ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಆರಂಭವಾಗಲಿದ್ದು, ತಾ. ೩೦ ರಂದು ನಾಮಪತ್ರ ಸಲ್ಲಿಕೆಗೆ ಕೊನೆ ದಿನವಾಗಿದೆ. ಜುಲೈ ೧ ರಂದು ನಾಮಪತ್ರ ಪರಿಶೀಲನೆಯಾಗಲಿದ್ದು, ಜುಲೈ ೩ ರಂದು ಬೆಳಿಗ್ಗೆ ೯ ರಿಂದ ೪ ಗಂಟೆವರೆಗೆ ಚುನಾವಣೆ ನಡೆಯಲಿದ್ದು, ೪.೩೦ರ ನಂತರ ಮತ ಎಣಿಕೆ ಆಗಲಿದೆ.
ತಾಲೂಕು ಘಟಕದ ಅಧ್ಯಕ್ಷರ ಮತ್ತು ೬ ಪದಾಧಿಕಾರಿಗಳ ಆಯ್ಕೆಗೆ ಜುಲೈ ೫ ರಂದು ನಾಮಪತ್ರ ಸಲ್ಲಿಸಬಹುದು. ೬ ರಂದು ನಾಮಪತ್ರ ಸಲ್ಲಿಸಲು ಕೊನೆ ದಿನವಾಗಿದೆ. ಜುಲೈ ೯ ರಂದು ಬೆಳಿಗ್ಗೆ ೧೦ ರಿಂದ ಸಂಜೆ ೪ ಗಂಟೆವರೆಗೆ ಚುನಾವಣೆ ನಡೆಯಲಿದೆ ನಂತರ ಎಣಿಕೆ ನಡೆಯಲಿದೆ.
ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ೫ ಪದಾಧಿಕಾರಿಗಳ ಚುನಾವಣೆ ಜುಲೈ ೧೨ ರಿಂದ ೧೩ ರ ಸಂಜೆ ೫ ಗಂಟೆವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರ ಪರಿಶೀಲನೆ ನಂತರ ಅರ್ಹ ಅಭ್ಯರ್ಥಿಗಳ ಪಟ್ಟಿ ಪ್ರಕಟಿಸಲಾಗುವುದು. ಚುನಾವಣೆ ಜುಲೈ ೧೭ ರಂದು ಬೆಳಿಗ್ಗೆ ೧೦ ರಿಂದ ೪ ಗಂಟೆವರೆಗೆ ನಡೆಯಲಿದ್ದು, ಮತದಾನದ ನಂತರ ಎಣಿಕೆ ಮಾಡಲಾಗುವುದು.
ರಾಜ್ಯ ಸಂಘದ ಅಧ್ಯಕ್ಷರು, ಉಪಾಧ್ಯಕ್ಷರು, ಪ್ರಧಾನ ಕಾರ್ಯದರ್ಶಿ, ಖಜಾಂಚಿ, ಸಹಕಾರ್ಯದರ್ಶಿ ಮತ್ತು ಸಂಘಟನಾ ಕಾರ್ಯದರ್ಶಿ ಸ್ಥಾನಕ್ಕೆ ಜುಲೈ ೧೨ ರಂದು ನಾಮಪತ್ರ ಸಲ್ಲಿಕೆಗೆ ಆರಂಭವಾಗಲಿದ್ದು, ೧೩ ರ ಸಂಜೆ ೪ ಗಂಟೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶವಿದೆ. ಜುಲೈ ೧೭ ರಂದು ಚುನಾವಣೆ ನಡೆಯಲಿದ್ದು ಸಂಜೆ ೪ ರ ನಂತರ ಮತ ಎಣಿಕೆ ನಡೆಯಲಿದೆ.
ಕೊಡಗು ಜಿಲ್ಲೆಯಲ್ಲಿ ಸರಕಾರಿ ಅನುದಾನಿತ ಪ್ರೌಢಶಾಲೆಗಳ ಸಹ ಶಿಕ್ಷಕರುಗಳ ಮತದಾರರ ಪಟ್ಟಿಯಲ್ಲಿರುವ ಮತದಾನ ಮಾಡಲು, ಚುನಾವಣೆಯಲ್ಲಿ ಸ್ಪರ್ಧಿಸಲು ಅರ್ಹರಾಗಿರುತ್ತಾರೆ ಎಂದು ಕೊಡಗು ಜಿಲ್ಲಾ ಘಟಕದ ಅಧ್ಯಕ್ಷ ಸಿ.ಟಿ. ಸೋಮಶೇಖರ್ ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ.