ಗೋಣಿಕೊಪ್ಪಲು, ಜೂ.೨೩: ಬಡಜನರ ಆಶೋತ್ತರಗಳನ್ನು ಈಡೇರಿಸಲು ಇಲಾಖಾ ಅಧಿಕಾರಿ ಗಳು ಸಮನ್ವಯತೆಯಿಂದ ಕೆಲಸ ಮಾಡಿದರಷ್ಟೆ ಸಾಧ್ಯ. ಈ ನಿಟ್ಟಿನಲ್ಲಿ ತಕ್ಷಣದಿಂದಲೆ ಅಧಿಕಾರಿಗಳು ಆದಿವಾಸಿಗಳು ವಾಸಿಸುವ ಪ್ರದೇಶದಲ್ಲಿ ಹಲವು ವರ್ಷಗಳಿಂದ ಇರುವ ಸಮಸ್ಯೆಗಳ ಬಗ್ಗೆ ಕೂಡಲೇ ಸ್ಪಂದಿಸು ವಂತೆ ಕರ್ನಾಟಕ ರಾಜ್ಯ ಪಶ್ಚಿಮ ಘಟ್ಟಗಳ ಸಂರಕ್ಷಣಾ ಕಾರ್ಯಪಡೆ ಸಮಿತಿ ಅಧ್ಯಕ್ಷ ಶಾಂತೆಯAಡ ರವಿಕುಶಾಲಪ್ಪ ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.
ತಿತಿಮತಿ ಆಶ್ರಮ ಶಾಲೆಯಲ್ಲಿ ಚೆಸ್ಕಾಂ, ಐಟಿಡಿಪಿ, ಅಂಬೇಡ್ಕರ್ ನಿಗಮ, ವಾಲ್ಮಿಕಿ ಅಭಿವೃದ್ಧಿ ನಿಗಮ ಹಾಗೂ ವಿವಿಧ ಗಿರಿಜನ ಮುಖಂಡ ರೊಂದಿಗೆ ಸಭೆ ನಡೆಸಿದ ರವಿಕುಶಾಲಪ್ಪ ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಸೂಚನೆ ನೀಡಿ ವಿವಿಧ ಹಾಡಿಗಳಲ್ಲಿ ನೆನೆಗುದಿಗೆ ಬಿದ್ದಿರುವ ಯೋಜನೆಗಳಿಗೆ ತಕ್ಷಣ ಕಾಯಕಲ್ಪ ನೀಡಬೇಕು. ಗಂಗಾ ಕಲ್ಯಾಣ ಯೋಜನೆಯಡಿ ಗಿರಿಜನರು ಕೊರೆಸಿಕೊಂಡ ಕೊಳವೆ ಬಾವಿಗೆ ವಿದ್ಯುತ್ ನೀಡಲು ಕ್ರಮ ಕೈಗೊಳ್ಳ ಬೇಕೆಂದು ಸ್ಥಳದಲ್ಲಿದ್ದ ಚೆಸ್ಕಾಂನ ಇಇ ಅಶೋಕ್‌ರವರಿಗೆ ನಿರ್ದೇಶನ ನೀಡಿದರು.
ಈ ವೇಳೆ ಮಾಹಿತಿ ಒದಗಿಸಿದ ವಾಲ್ಮಿಕಿ ಅಭಿವೃದ್ಧಿ ನಿಗಮದ ಜಿಲ್ಲಾ ಅಧಿಕಾರಿ ಚಂದ್ರಶೇಖರ್ ಜಿಲ್ಲೆಯಲ್ಲಿ ಗಂಗಾ ಕಲ್ಯಾಣಾ ಯೋಜನೆಯಡಿ ೩೯ ಗಿರಿಜನ ಫಲಾನುಭವಿಗಳಿದ್ದು, ೯ ಫಲಾನುಭವಿಗಳ ಯೋಜನೆಯನ್ನು ಸಂಪೂರ್ಣಗೊಳಿಸಲು ೬೮ ಲಕ್ಷದ ಅನುದಾನ ಅವಶ್ಯಕತೆ ಇರುತ್ತದೆ. ಈಗಾಗಲೇ ಈ ಸಂಬAಧ ನಿಗಮದ ಕೇಂದ್ರ ಕಚೇರಿಗೆ ಪ್ರಸ್ಥಾವನೆ ಸಲ್ಲಿಸಲಾಗಿದೆ ಹಣ ಬಿಡುಗಡೆಯಾದಲ್ಲಿ ೯ ಫಲಾನುಭವಿಗಳಿಗೆ ನೀಡಿದ ಯೋಜನೆಯು ಅಂತಿಮಗೊಳ್ಳಲಿದೆ ಎಂಬ ಮಾಹಿತಿ ಒದಗಿಸಿದರು.
ಈ ವೇಳೆ ಸ್ಥಳದಿಂದಲೇ ವಾಲ್ಮಿಕಿ ಅಭಿವೃದ್ಧಿ ನಿಗಮದ ಮುಖ್ಯಸ್ಥರಿಗೆ ದೂರವಾಣಿ ಮೂಲಕ ಮಾತನಾಡಿದ ರವಿಕುಶಾಲಪ್ಪ ತಕ್ಷಣವೇ ಹಣ ಬಿಡುಗಡೆ ಮಾಡಬೇಕೆಂದು ಮನವಿ ಮಾಡಿದರು. ದೂರವಾಣಿ ಕರೆಗೆ ಸ್ಪಂದಿಸಿದ ನಿಗಮದ ವ್ಯವಸ್ಥಾಪಕರು ಕೂಡಲೇ ಅನುದಾನ ಬಿಡುಗಡೆ ಮಾಡುವುದಾಗಿ ಭರವಸೆ ನೀಡಿದರು. ಸಭೆಯು ಮುಕ್ತಾಯಗೊಳ್ಳುತ್ತಿ ದ್ದಂತೆಯೇ ೬೨ ಲಕ್ಷ ಅನುದಾನವನ್ನು ಬಿಡುಗಡೆ ಮಾಡಿರುವುದಾಗಿ ದೂರವಾಣಿ ಮೂಲಕ ಬೆಂಗಳೂರಿನ ಕೇಂದ್ರ ಕಚೇರಿಯಿಂದ ರವಿಕುಶಾಲಪ್ಪ ಅವರಿಗೆ ಮಾಹಿತಿ ಒದಗಿಸಿದರು. ಸ್ಥಳದಲ್ಲಿದ್ದ ಚೆಸ್ಕಾಂ ಹಿರಿಯ ಅಧಿಕಾರಿ ಗಳಾದ ಇಇರವರಿಗೆ ಕೂಡಲೇ ನೆನೆಗುದಿಯಲ್ಲಿರುವ ಕಾಮಗಾರಿಯನ್ನು ವಾರದೊಳಗೆ ಪೂರ್ಣಗೊಳಿಸಿ ವರದಿ ನೀಡುವಂತೆ ಸೂಚನೆ ನೀಡಿದರು. ಅಲ್ಲದೆ ಮಾಲ್ದಾರೆ ವ್ಯಾಪ್ತಿಯಲ್ಲಿ ಗಂಗಾ ಕಲ್ಯಾಣಾ ಯೋಜನೆಯಡಿ ೩೦ ಫಲಾನುಭವಿಗಳ ಸ್ಥಳ ಪರಿಶೀಲನೆ ನಡೆಸಿ ಅಂದಾಜು ಪಟ್ಟಿ ತಯಾರಿಸಿ ಕೂಡಲೇ ಉಳಿದ ಕಾಮಗಾರಿಯನ್ನು ಕೈಗೆತ್ತಿಕೊಳ್ಳಲು ಸೂಚನೆ ನೀಡಿದರು.
ಕೆಲವು ಹಾಡಿಗಳಲ್ಲಿ ರಸ್ತೆ ಸೇರಿದಂತೆ ಮುಂತಾದ ಕಾಮಗಾರಿ ಗಳನ್ನು ನಡೆಸಲು ಅರಣ್ಯ ಇಲಾಖಾಧಿಕಾರಿಗಳು ಅವಕಾಶ ಕಲ್ಪಿಸುತ್ತಿಲ್ಲ. ಹೀಗಾಗಿ ಗಿರಿಜನರ ಪ್ರಗತಿ ಸಾಧಿಸಲು ಸಾಧ್ಯವಾಗುತ್ತಿಲ್ಲವೆಂದು ಗಿರಿಜನ ಕಲ್ಯಾಣಾಧಿಕಾರಿ ಪೊನ್ನಂಪೇಟೆಯ ಗುರುಶಾಂತಪ್ಪ ಅಧ್ಯಕ್ಷರ ಗಮನ ಸೆಳೆದರು.
ಈ ವೇಳೆ ಸ್ಥಳದಲ್ಲಿದ್ದ ನಾಗರಹೊಳೆ ಅರಣ್ಯ ವಲಯದ ಎಸಿಎಫ್ ಗೋಪಾಲ್ ಹಾಗೂ ಹುಣಸೂರು ವನ್ಯಜೀವಿ ವಿಭಾಗದ ಎಸಿಎಫ್ ಸತೀಶ್‌ಕುಮಾರ್‌ರವರಿಗೆ ಸೂಚನೆ ನೀಡಿ, ಆದಿವಾಸಿಗಳನ್ನು ಗೌರವದಿಂದ ಕಾಣುವುದು ನಮ್ಮ ಜವಾಬ್ದಾರಿ ಇಂದಿಗೂ ಇವರಿಗೆ ಮನೆ ನಿರ್ಮಿಸಲು ಹಾಗೂ ನಿರ್ಮಿಸಿರುವ ಮನೆಗಳಿಗೆ ವಿದ್ಯುತ್ ನೀಡಲು ಸಾಧ್ಯವಿಲ್ಲ. ಮುಂದಕ್ಕೆ ಈ ರೀತಿಯ ಸಮಸ್ಯೆಗಳು ಎದುರಾಗಬಾರದು ಅಧಿಕಾರಿಗಳು ಇಚ್ಚಾಶಕ್ತಿ ತೋರಿಸಿ ಎಲ್ಲಾರಂತೆ ಆದಿವಾಸಿಗಳು ನಮ್ಮವರೆಂದು ಭಾವಿಸಿ ಇರುವ ವ್ಯವಸ್ಥೆಯ ಅಡಿಯಲ್ಲಿ ಅವರಿಗೆ ಬೇಕಾದ ಮೂಲಭೂತ ಸೌಕರ್ಯ ಗಳನ್ನು ಒದಗಿಸಲು ಕ್ರಮಕೈಗೊಳ್ಳಬೇಕು. ಅಗತ್ಯವಿದ್ದಲ್ಲಿ ಹಿರಿಯ ಅಧಿಕಾರಿಗ ಳೊಂದಿಗೆ ನಾನೇ ಸಂಪರ್ಕಿಸಿ ಸಮಸ್ಯೆಗೆ ಪರಿಹಾರ ತಿಳಿಸುತ್ತೇನೆ ಎಂದು ಸೂಚಿಸಿದರು.
ನಾಗರಹೊಳೆಯ ೨೧೩ ಫಲಾನುಭವಿಗಳಿಗೆ ವಿದ್ಯುತ್ ಸಂಪರ್ಕ ಕಲ್ಪಿಸಲು ಚೆಸ್ಕಾಂ ಅಧಿಕಾರಿಗಳಿಗೆ ಅಧ್ಯಕ್ಷರು ಸೂಚನೆ ನೀಡಿದರು. ಈ ವೇಳೆ ಮಧ್ಯ ಪ್ರವೇಶಿಸಿ ಮಾತನಾಡಿದ ಎಸಿಎಫ್ ಗೋಪಾಲ್ ನಾಗರಹೊಳೆ ವ್ಯಾಪ್ತಿಯಲ್ಲಿ ಸೋಲಾರ್ ಮೂಲಕ ವಿದ್ಯುತ್ ನೀಡಲು ನಮ್ಮ ಅಭ್ಯಂತರ ವಿಲ್ಲ ಆದರೆ ವಿದ್ಯುತ್ ಸಂಪರ್ಕ ಮಾಡಲು ಅನುಮತಿ ಪಡೆಯಲು ಮೇಲಾಧಿಕಾರಿಗಳಿಗೆ ಪತ್ರ ಬರೆಯ ಬೇಕು. ಅಲ್ಲಿಂದ ಅನುಮತಿ ಬಂದ ನಂತರ ವಿದ್ಯುತ್ ನೀಡಬಹುದೆಂದು ಸಮಜಾಯಿಷಿಕೆ ನೀಡಿದರು.
ನಾಗರಹೊಳೆ ಆಶ್ರಮ ಶಾಲೆಗೆ ೩ ಕೊಠಡಿಗಳನ್ನು ಹೆಚ್ಚುವರಿಯಾಗಿ ನಿರ್ಮಿಸಿಕೊಡಲು ಗಿರಿಜನ ಕಲ್ಯಾಣಾಧಿಕಾರಿ ಗುರುಶಾಂತಪ್ಪ ಅಧ್ಯಕ್ಷರಲ್ಲಿ ಮನವಿ ಮಾಡಿದರು. ಈ ಬಗ್ಗೆ ಸರ್ಕಾರಕ್ಕೆ ಕೂಡಲೇ ಪತ್ರ ಬರೆದು ಅನುಮತಿಯೊಂದಿಗೆ ಕೊಠಡಿ ನಿರ್ಮಿಸಲುಕ್ರಮ ಕೈಗೊಳ್ಳುವಂತೆ ಎಸಿಎಫ್‌ರವರಿಗೆ ಸೂಚನೆ ನೀಡಿದರು.
ಹಾಡಿಯ ಮುಖಂಡ ಪಿ.ಸಿ. ರಾಮು ಮಾತನಾಡಿ ಚೀನಿಹಡ್ಲು, ಆಯಿರಸುಳಿಗೆ ಇಲಾಖೆ ವತಿಯಿಂದ ಮನೆಗಳಿಗೆ ಹಾಕಿರುವ ಸೋಲಾರ್ ಲೈಟ್ ೧ ಗಂಟೆ ಮಾತ್ರ ಉರಿಯುತ್ತಿವೆ. ಇದರಿಂದ ವಿದ್ಯುತ್ ನೀಡಲು ಅವಕಾಶ ಕಲ್ಪಿಸಬೇಕೆಂದು ಅಧ್ಯಕ್ಷರಲ್ಲಿ ಮನವಿ ಮಾಡಿದರು. ಈ ಬಗ್ಗೆ ಪರಿಶೀಲಿಸಿ ಕ್ರಮಕೈಗೊಳ್ಳುವುದಾಗಿ ಗೋಣಿಕೊಪ್ಪ ಚೆಸ್ಕಾಂನ ಎಇಇ ತಿಳಿಸಿದರು.
ಸಭೆಯಲ್ಲಿಚೆಸ್ಕಾಂ, ಐಟಿಡಿಪಿ, ಅಂಬೇಡ್ಕರ್ ನಿಗಮ, ವಾಲ್ಮಿಕಿ ಅಭಿವೃದ್ಧಿ ನಿಗಮ ಹಾಗೂ ವಿವಿಧ ಗಿರಿಜನ ಮುಖಂಡರು ಸಭೆಯಲ್ಲಿ ಉಪಸ್ಥಿತರಿದ್ದರು.
-ಹೆಚ್.ಕೆ.ಜಗದೀಶ್