ಮಡಿಕೇರಿ, ಜೂ. ೨೩: ವಿದ್ಯಾರ್ಥಿಗಳಲ್ಲಿ ವ್ಯಕ್ತಿತ್ವ ವಿಕಸನ ಹಾಗೂ ಸಂವಹನ ಜ್ಞಾನ ವೃದ್ಧಿಸುವ ಉದ್ದೇಶದಿಂದ ಕರ್ನಾಟಕ ಕೌಶಲ್ಯಾಭಿವೃದ್ಧಿ ನಿಗಮ, ಮಹೀಂದ್ರಾ ಐಂಡ್ ಮಹೀಂದ್ರಾ ಗ್ರೂಪ್ ಹಾಗೂ ನಾಂದಿ ಫೌಂಡೇಶನ್ ಸಹಯೋಗದೊಂದಿಗೆ ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನಲ್ಲಿ ವಿದ್ಯಾರ್ಥಿನಿಯರಿಗೆ ಒಂದು ವಾರದ ಸಾಫ್ಟ್ಸ್ಕಿಲ್ ಕಾರ್ಯಾಗಾರವನ್ನು ಆಯೋಜಿಸಲಾಗಿತ್ತು.

ಮಹೀಂದ್ರಾ ಐಂಡ್ ಮಹೀಂದ್ರಾ ಸಮೂಹದ ನಾಂದಿ ಫೌಂಡೇಶನ್‌ನ ತರಬೇತುದಾರರಾದ ಸುರೇಶ್ ಶಾಸ್ತಿç ಅವರು ಉದ್ಯೋಗಕ್ಕಾಗಿ ಸಂದರ್ಶನ ಎದುರಿಸುವುದು, ಸಮಯ ಪರಿಪಾಲನೆ, ಹಣಕಾಸು ನಿರ್ವಹಣೆ, ತಾರ್ಕಿಕ ಚಿಂತನಾ ಕೌಶಲ್ಯ ಹಾಗೂ ಸಾಮಾಜಿಕ ಜಾಲತಾಣಗಳ ಜಾಗರೂಕ ಬಳಕೆಯ ಕುರಿತು ಕಾರ್ಯಾಗಾರ ನಡೆಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲ ಡಾ. ಚೌರೀರ ಜಗತ್ ತಿಮ್ಮಯ್ಯ ವಹಿಸಿದ್ದರು. ಕೌಶಲ್ಯಾಭಿವೃದ್ಧಿ ಸಂಯೋಜಕ ರವಿಶಂಕರ್ ಎಂ.ಎನ್., ವಾಣಿಜ್ಯ ವಿಭಾಗದ ಉಪನ್ಯಾಸಕರಾದ ಡಾ. ಶೈಲಶ್ರೀ ಕೆ., ಪ್ರಸಾದ್ ಎಸ್.ಪಿ., ನಿಸರ್ಗ ಕೆ.ಪಿ., ಸ್ವಸ್ಥಿಕಾ ಎ. ಉಪಸ್ಥಿತರಿದ್ದರು.