ಭಾಗಮಂಡಲ, ಜೂ. ೨೩: ಇಲ್ಲಿನ ಭಗಂಡೇಶ್ವರ ತೋಟಗಾರಿಕಾ ರೈತ ಉತ್ಪಾದಕರ ಕಂಪೆನಿ ವತಿಯಿಂದ ಸಿಂಗತ್ತೂರು ಜಾಗದಲ್ಲಿ ಗೋದಾಮು ಸಂಗ್ರಹ ಘಟಕ ಅಂಗಡಿ ಮಳಿಗೆ ಕಟ್ಟಡದ ಭೂಮಿ ಪೂಜೆ ಮತ್ತು ಶಂಕುಸ್ಥಾಪನಾ ಕಾರ್ಯಕ್ರಮ ಗುರುವಾರ ನೆರವೇರಿತು. ಕಂಪೆನಿಯ ಅಧ್ಯಕ್ಷ ಕೋಡಿ ಪೊನ್ನಪ್ಪ ಮಾತನಾಡಿ ಈ ಕಟ್ಟಡದಲ್ಲಿ ಸದಸ್ಯ ರೈತರ ಕೃಷಿ ಉತ್ಪನ್ನಗಳನ್ನು ಖರೀದಿಸುವುದು, ಶೇಖರಿಸುವುದು ಮೌಲ್ಯವರ್ಧಿಸುವುದು. ತನ್ನದೇ ಆದ ಬ್ರಾö್ಯಂಡಿAಗ್‌ನಲ್ಲಿ ಮಾರಾಟ ಮಾಡುವುದು ಮುಂತಾದ ಮಹತ್ವಾಕಾಂಕ್ಷೆಯನ್ನು ಹೊಂದಿದೆ. ರೈತರಿಗೆ ಸಕಾಲದಲ್ಲಿ ವಿತರಣೆ ಮಾಡಲು ಗೊಬ್ಬರ ಹಾಗೂ ಔಷಧಿ ಗೋದಾಮು, ಕೃಷಿ ಪರಿಕರಗಳ ಮಳಿಗೆ ಮುಂತಾದವುಗಳನ್ನು ಕಂಪೆನಿ ನಿರ್ಮಿಸಲಿದೆ ಎಂದು ಹೇಳಿದರು. ಉಪಾಧ್ಯಕ್ಷ ಕಿಶೋರ್ ಬಿ.ಎಂ. , ಕಂಪೆನಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಬಿ.ಎಸ್.ಬಿನ್ನಿ, ನಿರ್ದೇಶಕರಾದ ಹೆಚ್.ಜೆ. ಸತೀಶ್‌ಕುಮಾರ್, ಪಿ.ಸಿ. ವಿಠಲ, ಡಿ.ಎನ್ ಹರ್ಷ, ಬಿ.ಟಿ.ತಮ್ಮಯ್ಯ, ಬಿ.ಡಿ. ದೇವರಾಜ್, ಕೆ.ಬಿ.ಉಮೇಶ್, ಕೆ.ಯು.ನಾಗೇಂದ್ರ, ಎಸ್.ಎಂ. ವಾರಿಜ, ಬಿ.ಟಿ.ಪುಷ್ಪ, ಕೆ.ಪಿ.ದೇಚುಕುಮಾರಿ, ಕೊಡಗು ಜಿಲ್ಲಾ ತೋಟಗಾರಿಕಾ ಉಪನಿರ್ದೇಶಕ ಸಿ.ಎಂ.ಪ್ರಮೋದ್, ತೋಟಗಾರಿಕಾ ಅಧಿಕಾರಿ ಬಿ.ಡಿ.ವಸಂತ್, ಕೊಡಗು ಜಿಲ್ಲಾ ನಿರ್ಮಿತಿ ಕೇಂದ್ರದ ಯೋಜನಾ ವ್ಯವಸ್ಥಾಪಕ ಸಚಿನ್ ಹಾಗೂ ಎಂಜಿನಿಯರ್ ಕೆ.ಎಸ್.ಶಶಾಂಕ್, ಸ್ಥಳೀಯ ಪಂಚಾಯಿತಿ ಸದಸ್ಯರು ಪಾಲ್ಗೊಂಡಿದ್ದರು.