ಮಡಿಕೇರಿ, ಜೂ. ೨೩: ‘ಅಗ್ನಿ ಪಥ/ಅಗ್ನಿವೀರ್’ ಯೋಜನೆ ಸರ್ವ ವಿಧದಿಂದಲೂ ಯುವಕರಿಗೆ ಸಹಕಾರಿಯಾಗಿದೆ ಎಂದು ಅಖಿಲ ಕರ್ನಾಟಕ ಮಾಜಿ ಸೈನಿಕರ ಸಂಘ ಅಭಿಪ್ರಾಯಪಟ್ಟಿದೆ.
ಈ ಕುರಿತು ಪತ್ರಿಕಾ ಪ್ರಕಟಣೆ ನೀಡಿರುವ ಸಂಘದ ಅಧ್ಯಕ್ಷ ಕೆ.ಪಿ.ಸೋಮಣ್ಣ ಹಾಗೂ ಪದಾಧಿಕಾರಿಗಳು; ಯೋಜನೆಯ ನಾಲ್ಕು ವರ್ಷಗಳ ಸೇವೆಯಲ್ಲಿ ಶಿಸ್ತು, ಕ್ರಮಬದ್ದ ಜೀವನ, ಕಷ್ಟ ಸಾಧ್ಯವಾದ ಕೆಲಸಗಳನ್ನುಮಾಡುವ ಸ್ಥೆöÊರ್ಯ, ಎಲ್ಲದಕ್ಕೂ ಮಿಗಿಲಾಗಿ ರಾಷ್ಟç ಪ್ರೇಮವನ್ನು ಕಲಿಸುತ್ತದೆ. ಈ ನಾಲ್ಕು ವರ್ಷಗಳಲ್ಲಿ ಅವರು ವಿದ್ಯೆಯನ್ನು ಮುಂದುವರೆಸಿ ಪದವಿ ಪಡೆದುಕೊಳ್ಳಬಹುದು.
ವಯಸ್ಸು ಹದಿನೇಳಕ್ಕೆ ಸೇರಿದರೆ ೨೩ಕ್ಕೆ ಹೊರಗಡೆ ಬರುತ್ತಾರೆ. ನೂರರಲ್ಲಿ ೨೫ರಷ್ಟು ಮಂದಿ ಸೇನೆಯಲ್ಲೇ ಇರುತ್ತಾರೆ, ಬಾಕಿ ೧೦ಮಂದಿಗೆ ಸರ್ಕಾರಿ ಉದ್ಯೋಗದಲ್ಲಿ ಭರ್ತಿ, ಬಾಕಿ ಇರುವ ೬೫ಮಂದಿ ಸ್ವಂತ ಉದ್ದಿಮೆ, ಖಾಸಗಿ ಸಂಸ್ಥೆಗಳಲ್ಲಿ ಅಧಿಕ ಬೇಡಿಕೆ ಇರುತ್ತದೆ. ಯಾರೂ ರಸ್ತೆಗೆ ಬೀಳುವುದಿಲ್ಲ. ಅದೂ ಅಲ್ಲದೆ ಈ ನೂರೂ ಜನರಿಗೆ ಸೇನೆಗೆ ಸೇರದಿದ್ದರೆ ಉದ್ಯೋಗ ಖಾತರಿ ಏನು ಎಂಬ ಪ್ರಶ್ನೆ ಇದೆ.
ಸೇವೆಯಲ್ಲಿರುವ ನಾಲ್ಕೂ ವರ್ಷ ಅಂದಾಜು ಹನ್ನೆರಡು ಲಕ್ಷಗಳ ಸಂಬಳ, ಊಟ ವಸತಿ, ಬಟ್ಟೆ, ಆಸ್ಪತ್ರೆ ಖರ್ಚು, ಏನಾದರು ಕರ್ತವ್ಯದಲ್ಲಿ ಅಂಗ ವಿವಿಹೀನತೆ/ ಮೃತ್ಯು ಹೊಂದಿದರೆ ಅದಕ್ಕೂ ಸಾಕಷ್ಟು ಪರಿಹಾರವಿದೆ. ಸೇನೆ ಬಿಡುವಾಗ ಹನ್ನೆರಡು ಲಕ್ಷ ಸಿಗಲಿದೆ. ಇಷ್ಟೂ ಇದ್ದೂ ಈ ಒಂದು ಯೋಜನೆಯನ್ನು ವಿರೋಧಿಸುವುದು ಎಷ್ಟು ಸರಿ? ಎಂದು ಪ್ರಶ್ನಿಸಿದ್ದಾರೆ.
ಸೇನೆಗೆ ಸೇರಿ ಹೊರಗಡೆ ಬಂದ ನಂತರ ಅವರು ಖಂಡಿತಾ ರಾಷ್ಟç ವಿರೋಧಿ ಚಟುವಟಿಕೆಗಳಲ್ಲಿ ತೊಡಗಿಸಿಕೊಳ್ಳಲಾರರು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.