ಮಡಿಕೇರಿ, ಜೂ. ೨೨: ಪ್ರಸಕ್ತ ಸಾಲಿಗೆ ಜುಲೈ ಆವೃತ್ತಿಯ ಸ್ನಾತಕ (ಬಿಎ, ಬಿಕಾಂ, ಬಿ ಲಿಬ್, ಬಿಬಿಎ, ಬಿಎಸ್ಸಿ, ಬಿಸಿಎ), ಸ್ನಾತಕೋತ್ತರ (ಎಂಎ, ಎಂಕಾA, ಎಂಬಿಎ, ಎಂಲಿಬ್, ಎಂಎಸ್ಸಿ) ಹಾಗೂ ಡಿಪ್ಲೋಮಾ ಮತ್ತು ಸರ್ಟಿಫಿಕೇಟ್ ಕೋರ್ಸ್ಗಳಿಗೆ ಶೈಕ್ಷಣಿಕ ಸಾಲಿನ ಪ್ರವೇಶಾತಿ ಆರಂಭವಾಗಿದೆ.

ಮೈಸೂರಿನ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ಮಡಿಕೇರಿ ಪ್ರಾದೇಶಿಕ ಕೇಂದ್ರವನ್ನು ಸ್ಥಾಪಿಸುವುದರ ಮೂಲಕ ವಿದ್ಯಾರ್ಥಿಗಳಿಗೆ ಶಿಕ್ಷಣ ನೀಡಲು ಪ್ರಯತ್ನಿಸುತ್ತಿದ್ದು, ಈ ಅವಕಾಶವನ್ನು ಎಲ್ಲಾ ಉದ್ಯೋಗ ಆಕಾಂಕ್ಷಿಗಳು ಬಳಸಿಕೊಳ್ಳಲು ತಿಳಿಸಿದೆ. ವಿದ್ಯಾರ್ಥಿಗಳು ಮನೆಯಲ್ಲಿ ಅಥವಾ ಯಾವುದೇ ಕೆಲಸ ನಿರ್ವಹಿಸಿಕೊಂಡು ಕಾಲೇಜುಗಳಿಗೆ ಹೋಗದೆ ತೆರೆದ ಶಿಕ್ಷಣದ ಮೂಲಕ ಪದವಿಯನ್ನು ಪಡೆಯಬಹುದು.

ಮೈಸೂರಿನ ಕರಾಮುವಿ ಮಾತ್ರ ರಾಜ್ಯದಲ್ಲಿ ದೂರ ಶಿಕ್ಷಣ ನೀಡುವ ಏಕ ಮಾತ್ರ ವಿಶ್ವವಿದ್ಯಾನಿಲಯವಾಗಿರುತ್ತದೆ. ಯುಜಿಸಿ ನಿಯಮಾವಳಿ ಪ್ರಕಾರ ಪೂರ್ಣಾವಧಿಯಲ್ಲಿ ಭೌತಿಕ ಶಿಕ್ಷಣ (ಖeguಟಚಿಡಿ) ಒಂದು ಕೋರ್ಸ್ ಮತ್ತು ದೂರಶಿಕ್ಷಣದಲ್ಲಿ (ಔಠಿeಟಿ Uಟಿiveಡಿsiಣಥಿ) ಇನ್ನೊಂದು ಕೋರ್ಸ್ ಅನ್ನು ಏಕಕಾಲದಲ್ಲಿ ಮಾಡಲು ಅವಕಾಶವಿದೆ. ಪ್ರವೇಶಾತಿಗೆ ಅರ್ಜಿ ಸಲ್ಲಿಸಲು ಪ್ರಾರಂಭ ತಾ. ೨೦ ಆಗಿದೆ. ಹೆಚ್ಚಿನ ಮಾಹಿತಿಗೆ ಕರಾಮುವಿ, ಪ್ರಾದೇಶಿಕ ಕೇಂದ್ರ ಮಡಿಕೇರಿ, ಸರಕಾರಿ ಜೂನಿಯರ್ ಕಾಲೇಜು ಆವರಣ ಹಳೆ ಪ್ರಾಥಮಿಕ ಶಾಲಾ ಕಟ್ಟಡ ಮಡಿಕೇರಿ-೫೭೧೨೦೧, ದೂರವಾಣಿ: ೮೦೭೩೩೪೨೩೧೦/೭೬೧೮೭೬೩೬೫೪ ನ್ನು ಸಂಪರ್ಕಿಸಬಹುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯದ ಮಡಿಕೇರಿ ಪ್ರಾದೇಶಿಕ ಕೇಂದ್ರದ ಪ್ರಾದೇಶಿಕ ನಿರ್ದೇಶಕಿ ಸ್ಮಿತಾ ಸುಬ್ಬಯ್ಯ ತಿಳಿಸಿದ್ದಾರೆ.