ಮಡಿಕೇರಿ, ಜೂ. ೨೧: ಕರ್ನಾಟಕ ಸರ್ಕಾರದ ಸ್ವಾಯತ್ತ ಸಂಸ್ಥೆಯಾದ ರಂಗಾಯಣವು ಭಾರತೀಯ ರಂಗ ಶಿಕ್ಷಣ ಕೇಂದ್ರ “ರಂಗ ಶಾಲೆಯನ್ನು ಕಳೆದ ೧೦ ವರ್ಷಗಳಿಂದ ನಡೆಸುತ್ತಿದೆ. ಪ್ರಸ್ತುತ ಒಂದು ವರ್ಷದ ರಂಗಶಿಕ್ಷಣದಲ್ಲಿ ಡಿಪ್ಲೊಮೋ ಕೋರ್ಸ್ ೨೦೨೨-೨೩ನೇ ಸಾಲಿನ ರಂಗ ಶಾಲೆಗೆ ಇಬ್ಬರು ರಂಗ ಶಿಕ್ಷಕರ ಅವಶ್ಯಕತೆಯಿದ್ದು ಈ ತಾತ್ಕಾಲಿಕ ಹುದ್ದೆಗಳಿಗೆ ಸಂದರ್ಶನದ ಮೂಲಕ ಆಯ್ಕೆ ಮಾಡಿಕೊಳ್ಳಲಾಗುವುದು.
ರಂಗಭೂಮಿಯಲ್ಲಿ ಅನುಭವವಿರುವ ಅಭ್ಯರ್ಥಿಗಳು ರಾಷ್ಟಿçÃಯ ನಾಟಕ ಶಾಲೆಯ ಪದವಿ, ರಾಜ್ಯದ ಯಾವುದೇ ರಂಗ ಶಿಕ್ಷಣ ಕೇಂದ್ರದಿAದ ರಂಗಶಿಕ್ಷಣ ಪದವಿ, ಡಿಪ್ಲೊಮೋ ಪಡೆದವರಾಗಿರಬೇಕು. ರಂಗಭೂಮಿ ಅನುಭವ, ರಂಗಶಿಕ್ಷಣದಲ್ಲಿ ಶಿಕ್ಷಕರಾಗಿ ದುಡಿದ ಅನುಭವ ಅಪೇಕ್ಷಣೀಯ. ಅರ್ಹತೆಯುಳ್ಳ ಆಸಕ್ತರು ಜುಲೈ ೮ ರೊಳಗೆ ಉಪ ನಿರ್ದೇಶಕರು, ರಂಗಾಯಣ, ವಿನೋಬ ರಸ್ತೆ, ಮೈಸೂರು-೫ ಈ ವಿಳಾಸಕ್ಕೆ ಅರ್ಜಿ ಸಲ್ಲಿಸಬಹುದು.
ಜನ್ಮ ದಿನಾಂಕ ದೃಢೀಕರಣ ಪತ್ರ, ಎನ್.ಎಸ್.ಡಿ.-ಡಿಪ್ಲೋಮೋ ಪ್ರಮಾಣಪತ್ರ, ರಂಗ ಶಿಕ್ಷಣ ಕೇಂದ್ರದ ಅನುಭವ ಪ್ರಮಾಣ ಪತ್ರ, ರಂಗಭೂಮಿ ಅನುಭವ ಕುರಿತ ಸ್ವವಿವರ ಪತ್ರ ಮತ್ತು ಆಧಾರ್ ಕಾರ್ಡ್ ಈ ದಾಖಲಾತಿ ಗಳೊಂದಿಗೆ ಜುಲೈ ೧೩ ರಂದು ಬೆಳಿಗ್ಗೆ ೧೦.೩೦ಕ್ಕೆ ಮೈಸೂರಿನ ರಂಗಾಯಣದಲ್ಲಿ ಸಂದರ್ಶನಕ್ಕೆ ಹಾಜರಾಗಲು ಕೋರಿದೆ.
ಅರ್ಜಿ ನಮೂನೆಯನ್ನು ರಂಗಾಯಣದ ವೆಬ್ಸೈಟ್ ತಿತಿತಿ.ಡಿಚಿಟಿgಚಿಥಿಚಿಟಿಚಿ.oಡಿg ನಿಂದ ಡೌನ್ಲೋಡ್ ಮಾಡಿಕೊಳ್ಳಬಹುದು. ಆಯ್ಕೆಯಾದ ಅಭ್ಯರ್ಥಿಗಳು ರಂಗಾಯಣದ ನಿಯಮ ಹಾಗೂ ಷರತ್ತುಗಳಿಗೆ ಬದ್ಧರಾಗಿರಬೇಕು ಎಂದು ಮೈಸೂರು ರಂಗಾಯಣದ ನಿರ್ದೇಶಕ ಅಡ್ಡಂಡ ಸಿ. ಕಾರ್ಯಪ್ಪ ತಿಳಿಸಿದ್ದಾರೆ.