ಮಡಿಕೇರಿ, ಜೂ. ೨೧: ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಸರ್ವ ಸದಸ್ಯರ ಸಹಕಾರದಿಂದ ಶತಮಾನ ಭವನ ನಿರ್ಮಾಣವಾಗಿದ್ದು ಇದರ ಪ್ರಯೋಜನವನ್ನು ಸಮುದಾಯದ ಜನರು ಪಡೆದುಕೊಳ್ಳಬೇಕು ಎಂದು ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಅಧ್ಯಕ್ಷ ಎ. ಗೋಪಾಲಕೃಷ್ಣ ಹೇಳಿ ದರು. ಭಾನುವಾರ ಮಡಿಕೇರಿಯಲ್ಲಿ ನಡೆದ ನಿಧಿಯ ತ್ರೆöÊವಾರ್ಷಿಕ ಮಹಾಸಭೆಯ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಸದಸ್ಯರು ಹೆಚ್ಚಿನ ಸಂಖ್ಯೆಯಲ್ಲಿ ನಿಧಿಯ ಕಾರ್ಯಕ್ರಮಗಳಲ್ಲಿ ಪಾಲ್ಗೊಳ್ಳ ಬೇಕು. ಎಲ್ಲರ ಸಹಕಾರದಿಂದ ಸಮಾಜ ಬಾಂಧವರ ಬೆಳವಣಿಗೆ ಸಾಧ್ಯ ಎಂದರು. ಶತಮಾನೋತ್ಸವ ಸಮಿತಿ ಅಧ್ಯಕ್ಷ ಡಾ.ಎ.ರಾಜಾರಾಮ್ ಮಾತನಾಡಿ ಜಿಲ್ಲೆಯ ಬ್ರಾಹ್ಮಣತ್ವದ ಶಕ್ತಿಯನ್ನು ಪ್ರದರ್ಶಿಸಲು ಶತಮಾನೋತ್ಸವ ಕಾರ್ಯಕ್ರಮ ಯಶಸ್ವಿಯಾಗಿದೆ. ವಿಜೃಂಭಣೆಯ ಕಾರ್ಯಕ್ರಮವನ್ನು ನಡೆಸುವಲ್ಲಿ ಜನಾಂಗ ಬಾಂಧವರ ನೆರವು ಶ್ಲಾಘನೀಯ ಎಂದರು. ಶತಮಾನ ಭವನ ಕಟ್ಟಡ ನಿರ್ಮಾಣ ಸಮಿತಿ ಅಧ್ಯಕ್ಷ ಮುಳಿಯ ಕೇಶವ ಭಟ್ ಮಾತನಾಡಿ, ದಾನಿಗಳ ನೆರವಿನಿಂದ ಶತಮಾನ ಭವನ ನಿರ್ಮಾಣವಾಗಿದೆ. ಭವನದ ಅಡಿಪಾಯದ ಖರ್ಚು ೨೪ ಲಕ್ಷ ರೂ. ಗಳಾಗಿದ್ದು, ಸುಭದ್ರವಾಗಿದ್ದು, ಭವನವನ್ನು ಎರಡು ಅಂತಸ್ತುಗಳ ವರೆಗೆ ಏರಿಸಲು ಅವಕಾಶವಿದೆ. ಸಮಾಜದ ಯುವ ಜನರು ಮುಂದಿನ ಪೀಳಿಗೆಗೆ ಅನುಕೂಲವಾಗುವಂತೆ ಮತ್ತಷ್ಟು ಸುಸಜ್ಜಿತವಾಗಿಸಲು ಕಾರ್ಯೋನ್ಮುಖರಾಗಬೇಕು ಎಂದರು.

ಬ್ರಾಹ್ಮಣ ವಿದ್ಯಾಭಿವೃದ್ಧಿ ನಿಧಿಯ ಕಾರ್ಯಕಾರಿ ಸಮಿತಿ ಉಪಾಧ್ಯಕ್ಷ ರಾಮಚಂದ್ರ ಸಿ.ಮೂಗೂರು, ಗೌರವ ಕಾರ್ಯದರ್ಶಿ ಬಿ. ಕೆ. ಅರುಣ್ ಕುಮಾರ್, ಸಹ ಕಾರ್ಯದರ್ಶಿ ಭರತೇಶ್ ಖಂಡಿಗೆ, ಖಜಾಂಚಿ ಗೀತಾ ಗಿರೀಶ್, ನಿರ್ದೇಶಕರಾದ ಜಿ.ಡಿ.ಶಿವಶಂಕರ್, ಎ. ವಿ. ಮಂಜುನಾಥ್, ಸವಿತಾ ಕೆ. ಭಟ್, ಜಯಶೀಲಾ ಪ್ರಕಾಶ್ ಇದ್ದರು. ಅಧ್ಯಕ್ಷ ಎ. ಗೋಪಾಲಕೃಷ್ಣ ಸ್ವಾಗತಿಸಿ, ಗೌರವ ಕಾರ್ಯದರ್ಶಿ ಬಿ. ಕೆ. ಅರುಣ್ ಕುಮಾರ್ ವಂದಿಸಿದರು.

ವಾರ್ಷಿಕ ಮಹಾಸಭೆಯಲ್ಲಿ ೨೦೨೨-೨೩ ರ ಸಾಲಿನ ನೂತನ ಕಾರ್ಯಕಾರಿ ಮಂಡಳಿಗೆ ಸದಸ್ಯ ರನ್ನು ಆಯ್ಕೆ ಮಾಡಲಾಯಿತು. ಎ. ಗೋಪಾಲಕೃಷ್ಣ, ರಾಮಚಂದ್ರ ಸಿ. ಮೂಗೂರು, ಬಿ. ಕೆ. ಅರುಣ್ ಕುಮಾರ್, ಭರತೇಶ್ ಖಂಡಿಗೆ, ಗೀತಾ ಗಿರೀಶ್, ಜಿ. ಡಿ. ಶಿವಶಂಕರ್, ಎ. ವಿ. ಮಂಜುನಾಥ್, ಸವಿತಾ ಕೆ.ಭಟ್, ಜಯಶೀಲಾ ಪ್ರಕಾಶ್, ಪುರುಷೋತ್ತಮ, ಜಿ. ಆರ್. ರವಿಶಂಕರ್, ರಾಜಶೇಖರ, ಲಲಿತ ರಾಘವನ್, ಶ್ರೀಶಕುಮಾರ, ಜಗದೀಶ್ ಸೋಮಯಾಜಿ ಅವರನ್ನು ಆಯ್ಕೆ ಮಾಡಲಾಯಿತು.