ಶನಿವಾರಸಂತೆ, ಜೂ. ೧೯: ಆಂತರಿಕ ಸೌಂದರ್ಯ ಹೆಚ್ಚಿಸಿಕೊಳ್ಳಲು ಯೋಗ ಅತ್ಯಗತ್ಯವಾಗಿದ್ದು, ಆಸನಗಳಂತೆಯೇ ಧ್ಯಾನ, ಏಕಾಗ್ರತೆ, ನಿಷ್ಠೆ, ಪರಿಶುದ್ಧತೆಯೂ ಯೋಗವೇ ಆಗಿದೆ ಎಂದು ತೆಂಕಲಗೋಡು ಬೃಹನ್ಮಠದ ಚೆನ್ನಸಿದ್ಧೇಶ್ವರ ಶಿವಾಚಾರ್ಯ ಸ್ವಾಮೀಜಿ ಅಭಿಪ್ರಾಯಪಟ್ಟರು.
ಪಟ್ಟಣದ ಸಹಕಾರ ಬ್ಯಾಂಕ್ ಸಭಾಂಗಣದಲ್ಲಿ ನಡೆಯುತ್ತಿರುವ ಯೋಗ ಕೇಂದ್ರದಲ್ಲಿ ವಿಶ್ವ ಯೋಗ ದಿನಾಚರಣೆ ಪ್ರಯುಕ್ತ ನಡೆದ ಶಿಬಿರಾರ್ಥಿಗಳಿಗೆ ಪ್ರವಚನ ಹಾಗೂ ಮಾರ್ಗದರ್ಶನ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಯೋಗ ಗುರು ಶ್ರೀ ಮಂಜುನಾಥೇಶ್ವರ ಇಂಜಿನಿಯರ್ ವರ್ಕ್ಸ್ನ ಮಾಲೀಕ ಎ.ಡಿ. ಮೋಹನ್ ಕುಮಾರ್ ಮಾತನಾಡಿ, ಪತಂಜಲಿ ಮಹರ್ಷಿ ವಿಶ್ವಕ್ಕೆ ಪರಿಚಯಿಸಿದ ಅಷ್ಟಾಂಗ ಮಾರ್ಗಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ವಾಮೀಜಿಯ ವರನ್ನು ಸನ್ಮಾನಿಸಿ ಗೌರವಿಸಲಾಯಿತು. ಇಂಜಿನಿಯರ್ ಸೋಮಣ್ಣ, ಶಿಕ್ಷಕರಾದ ಜಯಸ್ವಾಮಿ, ಕೆ.ಪಿ. ಜಯಕುಮಾರ್, ಸವಿತಾ, ಸುಚಿತ್ರಾ, ವೀಣಾ ಚಿದಾನಂದ್, ಬೆಳೆಗಾರ ಬಿ.ಎಸ್. ಪ್ರತಾಪ್, ಪ್ರಕಾಶ್ಚಂದ್ರ ಹಾಗೂ ಯೋಗ ಶಿಬಿರಾರ್ಥಿಗಳು ಹಾಜರಿದ್ದರು.