*ಗೋಣಿಕೊಪ್ಪ, ಜೂ. ೨೧: ತಂತ್ರಜ್ಞಾನಗಳನ್ನು ಬಳಸಿ ರೈತರು ಸುಧಾರಿತ ಕೃಷಿ ಪದ್ಧತಿಗೆ ಮುಂದಾಗ ಬೇಕೆಂದು ಜಿಲ್ಲಾ ಸಹಾಯಕ ಕೃಷಿ ನಿರ್ದೇಶಕ ಮುತ್ತುರಾಜ್ ಸಲಹೆ ನೀಡಿದರು.

ಗೋಣಿಕೊಪ್ಪ ಕೆವಿಕೆ ಸಭಾಂಗಣ ದಲ್ಲಿ ಪಬ್ಲಿಕ್ ಅಫೇರ್ಸ್ ಫೌಂಡೇಶನ್ ಬೆಂಗಳೂರು ಸಂಸ್ಥೆಯು ನಬಾರ್ಡ್ ಸಂಸ್ಥೆಯ ಸಹಯೋಗದಲ್ಲಿ ಮೊಬೈಲ್ ಆಧಾರಿತ ಅಪ್ಲಿಕೇಶನ್‌ಗಳು, ನಾವೀನ್ಯತೆಗಳು, ಸ್ಮಾರ್ಟ್ ಕೃಷಿ ಪದ್ಧತಿ ಮತ್ತು ಅಸ್ತಿತ್ವದಲ್ಲಿರುವ ಪರಿವರ್ತಕ ಕೃಷಿ ತಂತ್ರಜ್ಞಾನ ಕುರಿತು ತರಬೇತಿ ಯಲ್ಲಿ ಅವರು ಮಾಹಿತಿ ನೀಡಿದರು.

ಕೃಷಿ ಇಲಾಖೆ ವತಿಯಿಂದ ಹಲವು ತಂತ್ರಜ್ಞಾನ ಆಧಾರಿತ ಆ್ಯಪ್‌ಗಳು ಇವೆ. ಅವುಗಳನ್ನು ರೈತರು ಬಳಸಿಕೊಂಡು ಸಮಗ್ರ ಸಾವಯವ ಬೇಸಾಯಕ್ಕೆ ಒತ್ತು ನೀಡಬೇಕು ಎಂದರು.

ರಾಸಾಯನಿಕ ಗೊಬ್ಬರಗಳ ಬಳಕೆಯಿಂದ ಮಾಲಿನ್ಯವು ಕೂಡ ಹೆಚ್ಚುತ್ತದೆ ಆದ್ದರಿಂದ ನಾವು ಸಾವಯವ ಗೊಬ್ಬರಗಳ ಬಳಕೆ ಹೆಚ್ಚಿಸಬೇಕು. ರೈತರ ಆರ್ಥಿಕ ಸ್ಥಿತಿಯ ಅಭಿವೃದ್ಧಿಗೆ ತಂತ್ರಜ್ಞಾನಗಳ ಬಳಕೆ ಅತ್ಯಗತ್ಯ ಎಂದು ತಿಳಿಸಿದರು.

ಕೃಷಿ ಇಲಾಖೆಯಿಂದ ಸೌಲಭ್ಯ ಪಡೆಯಲು ಆರ್‌ಟಿಸಿ ಬಹಳ ಮುಖ್ಯವಾಗಿದೆ. ಆದರೆ, ಕೊಡಗು ಜಿಲ್ಲೆಯಲ್ಲಿ ಹೆಚ್ಚಿನ ರೈತರ ಭೂಮಿಯು ಜಂಟಿ ಖಾತೆಯನ್ನು ಹೊಂದಿರುವುದರಿAದ ಸರಕಾರಿ ಸೌಲಭ್ಯಗಳನ್ನು ಒದಗಿಸಲು ಸಾಧ್ಯವಾಗುತ್ತಿಲ್ಲ ಇದರಿಂದ ಆರ್.ಟಿ.ಸಿಯಲ್ಲಿರುವ ದೋಷಗಳು ಸರಿಪಡಿಸಬೇಕು ಎಂದು ಹೇಳಿದರು.

ಕೃಷಿ ವಿಜ್ಞಾನ ಕೇಂದ್ರದ ಮುಖ್ಯಸ್ಥ ಡಾ. ಸಾಜು ಜಾರ್ಜ್ ಮಾತನಾಡಿ, ಕೃಷಿ ಇಲಾಖೆಗೆ ಸಂಬAಧಿಸಿದAತೆ ಬಹಳಷ್ಟು ಆ್ಯಪ್‌ಗÀಳು ನಮ್ಮ ಮೊಬೈಲ್ ಪ್ಲೇ ಸ್ಟೋರ್ ನಲ್ಲಿ ಲಭ್ಯವಿದೆ. ಅದರ ಬಳಕೆ ಬಗ್ಗೆ ಸರಿಯಾದ ಅರಿವು ರೈತರಿಗೆ ಇರಬೇಕು. ತರಬೇತಿಗಳನ್ನು ನೀಡಿದರೆ ಸಾಲದು ತರಬೇತಿಯಿಂದ ಮುಂದೆ ಏನು ಮಾಡಬಹುದೆಂಬ ಕಾರ್ಯಯೋಜನೆಯನ್ನು ಕೂಡ ತಯಾರು ಮಾಡಬೇಕಾಗುತ್ತದೆ ಎಂದು ಹೇಳಿದರು.

ಕಾಫಿ ಬೋರ್ಡ್ ಉಪ ನಿರ್ದೇಶಕಿ ಡಾ. ಶ್ರೀದೇವಿ ಮಾತನಾಡಿ, ತುಂಬಾ ಕಷ್ಟಪಟ್ಟು ದುಡಿಯುವ ಬದಲು ತಂತ್ರಜ್ಞಾನವನ್ನು ಬಳಸಿ ಬುದ್ಧಿವಂತಿಕೆಯಿAದ ಕೆಲಸ ಮಾಡಬೇಕು. ಚತುರ ಕೃಷಿ ಪದ್ಧತಿಯಿಂದ ಹವಾಮಾನ ವೈಪರಿತ್ಯಗಳಿಂದ ಆಗುವ ಹಾನಿಯನ್ನು ತಡೆಗಟ್ಟಬಹುದು. ಕೀಟ ಅಥವಾ ರೋಗಬಾಧೆಯನ್ನು ಡ್ರೋನ್‌ಗಳ ಸಹಾಯದೊಂದಿಗೆ ನಿಭಾಯಿಸಬಹುದು ಎಂದರು.

ಸAಶೋಧನ ಇಂಜಿನಿಯರ್ ಶ್ರೀನಿವಾಸ ಪಾಟೀಲ ಡಾ. ಅವಿನಾಲಪ್ಪ ಹಟ್ಟಿ, ಲೀಡ್ ಬ್ಯಾಂಕ್ ನಿವೃತ್ತ ವ್ಯವಸ್ಥಾಪಕÀ ಆರ್. ಕೆ ಬಾಲಚಂದ್ರ, ಸಂಪನ್ಮೂಲ ವ್ಯಕ್ತಿಗಳಾಗಿ ತರಬೇತಿಯನ್ನು ನಡೆಸಿಕೊಟ್ಟರು.

ನಬಾರ್ಡ್ ಜಿಲ್ಲಾ ಅಭಿವೃದ್ಧಿ ವ್ಯವಸ್ಥಾಪಕ ರಮೇಶ್ ಬಾಬು, ಬೆಂಗಳೂರು ಪಬ್ಲಿಕ್ ಅಫೇರ್ಸ್ ಫೌಂಡೇಶನ್ ನಿರ್ದೇಶಕಿ ಅನ್ನಪೂರ್ಣ, ಹರೀಶ ಎ, ಇಂದ್ರ ಪಿ. ಇದ್ದರು.