ಗೋಣಿಕೊಪ್ಪ, ಜೂ.೨೦: ಆನೆ ದಾಳಿಗೆ ಬಲಿಯಾದ ಮಾಯಮುಡಿ ಗ್ರಾ.ಪಂ. ವ್ಯಾಪ್ತಿಯ ಮಾರಿಯಮ್ಮ ಕಾಲೋನಿ ನಿವಾಸಿ ಚಾಮು ಮನೆಗೆ ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಅವರು ಭೇಟಿ ನೀಡಿದರು.ತರ ಕುಟುಂಬದವರೊAದಿಗೆ ಸಾಂತ್ವನದ ನುಡಿಗಳನ್ನಾಡಿ ಆತ್ಮಸ್ಥೆöÊರ್ಯ ತುಂಬಿದರು. ಶಿಕ್ಷಣ ಬಹು ಪ್ರಮುಖವಾಗಿದ್ದು, ಶಿಕ್ಷಣ ಪಡೆಯುವಂತೆ ಚಾಮುವಿನ ಮಕ್ಕಳಿಗೆ ಸಲಹೆ ನೀಡಿದ ಶಾಸಕರು ತಿಥಿ ಕರ್ಮಾಂತರಗಳ ವೆಚ್ಚಕ್ಕೆಂದು ಸ್ವಂತ ಹಣವನ್ನು ಚಾಮುವಿನ ಪತ್ನಿಗೆ ನೀಡಿದರು.

ಈ ಸಂದರ್ಭ ಗ್ರಾಮ ಪಂಚಾಯಿತಿ ಸದಸ್ಯರುಗಳಾದ ಚೆಪುö್ಪಡೀರ ಪ್ರದೀಪ್, ನಾರಾಯಣ, ಬಿಜೆಪಿ ಹಿರಿಯ ಮುಖಂಡ ಕಾಳಪಂಡ ಸುಧೀರ್ ಹಾಗೂ ಹಾಡಿ ನಿವಾಸಿಗಳು ಇದ್ದರು.