*ಗೋಣಿಕೊಪ್ಪ, ಜೂ. ೨೧: ರೂ. ೨.೬೫ ಕೋಟಿ ಅನುದಾನದಲ್ಲಿ ತಿತಿಮತಿ, ಮಾಯಮುಡಿ, ನಿಟ್ಟೂರು ಪಂಚಾಯಿತಿ ವ್ಯಾಪ್ತಿಯ ಕಾಲೋನಿಗಳ ಸಂಪರ್ಕಕ್ಕೆ ರಸ್ತೆ ಅಭಿವೃದ್ಧಿ ನಡೆಯಲಿದೆ ಎಂದು ರಾಜ್ಯ ಸರ್ಕಾರಿ ಜಮೀನು ಸಂರಕ್ಷಣಾ ಸಮಿತಿ ಅಧ್ಯಕ್ಷ, ಶಾಸಕ ಕೆ.ಜಿ. ಬೋಪಯ್ಯ ಮಾಹಿತಿ ನೀಡಿದರು. ತಿತಿಮತಿ ಗ್ರಾಮ ಪಂಚಾಯಿತಿ ವ್ಯಾಪ್ತಿಯಲ್ಲಿ ೮೫ ಲಕ್ಷದಲ್ಲಿ ಕೊಪ್ಪ ನಾಯಿಮಣ್ಣು ಕಾಲೋನಿಯ ರಸ್ತೆ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಿ ಮಾತನಾಡಿದರು. ಗಿರಿಜನ ಕಾಲೋನಿಗಳ ಸಂಪರ್ಕದ ಕಾಂಕ್ರಿಟ್ ರಸ್ತೆ ನಿರ್ಮಾಣಕ್ಕೆ ಕಾವೇರಿ ನೀರಾವರಿ ನಿಗಮದಿಂದ ಅನುದಾನ ಒದಗಿಸ ಲಾಗಿದೆ. ಈ ವ್ಯವಸ್ಥೆಯಲ್ಲಿ ಕಾಲೋನಿ ಗಳ ಅಭಿವೃದ್ಧಿ ಮತ್ತು ಕಾಲೋನಿಗಳ ಸಂಪರ್ಕ ಬೆಸೆಯುವ ರಸ್ತೆಗಳ ಅಭಿವೃದ್ಧಿ ನಡೆಯಬೇಕಾಗಿದೆ. ಈ ಹಿನ್ನೆಲೆ ಕಾವೇರಿ ನೀರಾವರಿ ಇಲಾಖೆಯ ವತಿಯಿಂದ ಅನುದಾನ ವನ್ನು ಒದಗಿಸಿ ಹಂತ ಹಂತವಾಗಿ ರಸ್ತೆ ಅಭಿವೃದ್ಧಿ ಕಾರ್ಯ ನಡೆಸ ಲಾಗುತ್ತಿದೆ. ಇದೇ ರೀತಿಯಲ್ಲಿ ಮಾಯಮುಡಿ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಮಾರಿಯಮ್ಮ ಮತ್ತು ಕನ್ನಂಬಾಡಿಯಮ್ಮ ದೇವಸ್ಥಾನಕ್ಕೆ ಹೋಗುವ ದಾರಿಯಲ್ಲಿನ ಆಶಾಕಿರಣ ಕಾಲೋನಿಗೆ ೮೫ ಲಕ್ಷವನ್ನು ಒದಗಿಸ ಲಾಗಿದ್ದು, ೧೧೦ ಮೀಟರ್ ಉದ್ದ ಮತ್ತು ೩.೭೫ ಮೀ. ಅಗಲದಲ್ಲಿ ರಸ್ತೆ ನಿರ್ಮಾಣವಾಗಲಿದೆ ಎಂದು ತಿಳಿಸಿದರು. ನಿಟ್ಟೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಜಾಗಲೆ, ತಟ್ಟೆಕೆರೆ ಮಲ್ಲೂರು ಪಾಲದಳದ ತಾಣಚ್ಚಿರ ಕಾಶಿ ಕಾರ್ಯಪ್ಪ ರಸ್ತೆಯ ಪಾಲದಳ ತಟ್ಟೆಕೆರೆ ಕಾಲೋನಿಗೆ ೯೫ ಲಕ್ಷದಲ್ಲಿ ೧೩೫೦ ಮೀ. ಉದ್ದ ಮತ್ತು ೩ ಅಗಲದ ಕಾಂಕ್ರಿಟ್ ರಸ್ತೆ ನಿರ್ಮಾಣವಾಗಲಿದೆ ಎಂದು ಈ ಸಂದರ್ಭ ಮಾಹಿತಿ ನೀಡಿದರು.
ಭೂಮಿಪೂಜೆಯಲ್ಲಿ ತಿತಿಮತಿ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಆಶಾ, ಉಪಾಧ್ಯಕ್ಷೆ ವಿಜಯ, ಸದಸ್ಯ ಎನ್.ಎನ್. ಅನೂಪ್‌ಕುಮಾರ್, ಶ್ಯಾಮಲ, ಶೇಖರ, ಪೊನ್ನು, ದೇವರ ಪುರ ಗ್ರಾ.ಪಂ. ಸದಸ್ಯ ಮಣಿಕಂಠ, ಬಿಜೆಪಿ ಜಿಲ್ಲಾ ಖಜಾಂಚಿ ಚೆಪುö್ಪಡೀರ ಮಾಚಯ್ಯ, ತಿತಿಮತಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ರಾಮಕೃಷ್ಣ, ಕಾವೇರಿ ನೀರಾವರಿ ನಿಗಮದ ಇಂಜಿನಿಯರ್ ನವೀನ್, ಗೌತಮ್, ಸಹಾಯಕ ಇಂಜಿನಿಯರ್ ಶಿವ ಕುಮಾರ್, ಶಾಸಕರ ಆಪ್ತ ಕಾರ್ಯ ದರ್ಶಿ ಮಲ್ಲಂಡ ಮಧು ದೇವಯ್ಯ, ಸೇರಿದಂತೆ ಇನ್ನಿತರರು ಹಾಜರಿದ್ದರು.