*ಗೋಣಿಕೊಪ್ಪ, ಜೂ. ೨೧: ಹಿರಿಯ ಸರಕಾರಿ ಪ್ರಾಥಮಿಕ ಶಾಲೆಗೆ ಐವತ್ತು ಸಾವಿರ ರೂಪಾಯಿಗಳ ದತ್ತಿ ನಿಧಿಯನ್ನು ನಿವೃತ್ತ ಶಿಕ್ಷಕಿ ಇಂದಿರಮ್ಮ ಅವರು, ದಿ. ಗೌರಮ್ಮ ಅಕ್ಕಿ ರಾಮಪ್ಪ ಅವರ ಸ್ಮರಣಾರ್ಥವಾಗಿ ನೀಡಿದ್ದಾರೆ.

ಉತ್ತಮ ಸಾಧನೆ ಮಾಡಿದ ವಿದ್ಯಾರ್ಥಿಗೆ ದತ್ತಿ ನಿಧಿಯ ಬಡ್ಡಿ ಹಣದಲ್ಲಿ ನಗದು ಬಹುಮಾನ ನೀಡಲು ತೀರ್ಮಾನಿಸಲಾಗಿದೆ. ಈ ಬಗ್ಗೆ ನಿವೃತ್ತ ಉಪನಿರ್ದೇಶಕಿ ಶ್ಯಾಮಲ ಅವರಿಂದ ಪ್ರಮಾಣ ಪತ್ರವನ್ನು ಶಾಲೆಯ ಮುಖ್ಯೋಪಾಧ್ಯಾಯ ಕುಮಾರ ಹೆಚ್.ಕೆ. ಸ್ವೀಕರಿಸಿದ್ದಾರೆ. ಈ ಸಂದರ್ಭ ಶಾಲೆಯ ಶಿಕ್ಷಕರು ಸಿಬ್ಬಂದಿ ವರ್ಗದವರು ಹಾಜರಿದ್ದರು.