ಆಲೂರುಸಿದ್ದಾಪುರ, ಜೂ. ೨೦: ಇಂದಿನ ಸ್ಪರ್ಧಾತ್ಮಕ ದಿನದಲ್ಲಿ ಡಿಪ್ಲೊಮೋಕ್ಕಿಂತ ಐಟಿಐ ಶಿಕ್ಷಣಕ್ಕೆ ಹೆಚ್ಚಿನ ಉದ್ಯೋಗವಕಾಶಗಳಿವೆ ಎಂದು ಮಡಿಕೇರಿ ಶಾಸಕ ಎಂ.ಪಿ. ಅಪ್ಪಚ್ಚುರಂಜನ್ ಅಭಿಪ್ರಾಯಪಟ್ಟರು.

ಅವರು ಆಲೂರುಸಿದ್ದಾಪುರ ಸರಕಾರಿ ಕೈಗಾರಿಕಾ ತರಬೇತಿ ಕೇಂದ್ರದಲ್ಲಿ ಟಾಟಾ ಟೆಕ್ನಾಲಜಿ ಸಂಸ್ಥೆ ವತಿಯಿಂದ ರೂ. ೩೦ ಕೋಟಿ ವೆಚ್ಚದಲ್ಲಿ ಉನ್ನತೀಕರಣಗೊಳಿಸಿರುವ ತಾಂತ್ರಿಕ ಕೇಂದ್ರವನ್ನು ಉದ್ಘಾಟಿಸಿ ಮಾತನಾಡುತ್ತಿದ್ದರು.

ಕೇಂದ್ರ ಸರಕಾರ ಸರಕಾರಿ ಕೈಗಾರಿಕಾ ಕೇಂದ್ರವನ್ನು ಟಾಟಾ ಟೆಕ್ನಾಲಜಿ ಸಂಸ್ಥೆಯ ಸಹಭಾಗಿತ್ವದಲ್ಲಿ ಉನ್ನತೀಕರಣಗೊಳಿಸುತ್ತಿದೆ. ಟಾಟಾ ಟೆಕ್ನಾಲಜಿ ಸಂಸ್ಥೆಯ ಶೇ. ೭೦ ಮತ್ತು ಸರಕಾರದ ಶೇ. ೩೦ ಅನುದಾನದಲ್ಲಿ ಐಟಿಐ ಕೇಂದ್ರವನ್ನು ತಾಂತ್ರಿಕಾ ಕೇಂದ್ರವನ್ನಾಗಿ ಉನ್ನತೀಕರಣ ಗೊಳಿಸಲಾಗುತ್ತಿದ್ದು, ರಾಜ್ಯದಲ್ಲಿ ೧೫೦ ಸರಕಾರಿ ಐಟಿಐ ಕೇಂದ್ರವನ್ನು ಗುರುತಿಸಲಾಗಿದೆ. ಈ ದಿನ ಪ್ರಧಾನ ಮಂತ್ರಿ ನರೇಂದ್ರಮೋದಿ ಎಲ್ಲಾ ಉನ್ನತೀಕರಣಗೊಂಡಿರುವ ರಾಜ್ಯದ ಐಟಿಐ ಕೇಂದ್ರಗಳನ್ನು ಏಕಕಾಲದಲ್ಲಿ ಆನ್‌ಲೈನ್ ಮೂಲಕ ಲೋಕಾರ್ಪಣೆ ಗೊಳಿಸಲಿದ್ದಾರೆ ಎಂದರು.

ತಾAತ್ರಿಕಾ ಕೈಗಾರಿಕಾ ಕೇಂದ್ರ ಗಳಲ್ಲಿ ಅತ್ಯಾಧುನಿಕ ಉಪಕರಣಗಳು, ವಾಹನ,

(ಮೊದಲ ಪುಟದಿಂದ) ರೋಬೋಟ್ ಸೇರಿದಂತೆ ಸುಸಜ್ಜಿತ ಕಂಪ್ಯೂಟರ್ ಲ್ಯಾಬ್ ವ್ಯವಸ್ಥೆ ಇರುವುದರಿಂದ ವಿದ್ಯಾರ್ಥಿಗಳು ಟಾಟಾ ಟೆಕ್ನಾಲಜಿ ತಾಂತ್ರಿಕ ಕೋರ್ಸ್ಗಳಲ್ಲಿ ಆಸಕ್ತಿ, ಶ್ರದ್ಧೆಯಿಂದ ತರಬೇತಿ ಪಡೆದು ಪ್ರತಿಷ್ಠಿತ ಸಂಸ್ಥೆಗಳಲ್ಲಿ ಉದ್ಯೋಗವಕಾಶ ಪಡೆದುಕೊಳ್ಳು ವಂತೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಜಿ.ಪಂ. ಮಾಜಿ ಉಪಾಧ್ಯಕ್ಷೆ ಲೋಕೇಶ್ವರಿ ಗೋಪಾಲ್, ಗ್ರಾ.ಪಂ. ಅಧ್ಯಕ್ಷ ಮೋಹನ್‌ಕುಮಾರ್, ಉಪಾಧ್ಯಕ್ಷೆ ದಮಯಂತಿ, ಸದಸ್ಯ ಗಂಗಾಧರ್, ಐಟಿಐ ಕೇಂದ್ರದ ಪ್ರಬಾರ ಪ್ರಾಂಶುಪಾಲ ಯೋಗೇಶ್, ಪೊನ್ನಂಪೇಟೆ ಐಟಿಐ ಕೇಂದ್ರದ ಪ್ರಾಂಶುಪಾಲೆ ಶಶಿಕಲಾ, ಗ್ರಾ.ಪಂ. ಪಿಡಿಓ ಹರೀಶ್ ಮುಂತಾದವರು ಹಾಜರಿದ್ದರು.