ಸುಂಟಿಕೊಪ್ಪ, ಜೂ. ೨೦: ಯುವಕರ ಗುಂಪೊAದು ಲಾರಿ ಚಾಲಕನಿಗೆ ಬ್ಲೇಡಿನಿಂದ ಇರಿದು ಪರಾರಿಯಾಗಿರುವ ಘಟನೆ ನಡೆದಿದೆ.

ಲಾರಿ ಚಾಲಕ ಪಿ.ಕೆ. ಶಶಿ ಮತ್ತು ಪ್ರಶಾಂತ್ ಎಂಬವರು ಬಾನುವಾರ ರಾತ್ರಿ ೯.೩೦ರ ಸಮಯದಲ್ಲಿ ಉಲುಗುಲಿ ರಸ್ತೆಯ ಬಂಡಿಮಾಳದ ಬಸಪ್ಪ ವಕೀಲರ ಮನೆಯ ಮುಂಭಾಗದಲ್ಲಿ ತಮ್ಮ ಲಾರಿಯನ್ನು ನಿಲ್ಲಿಸಿ ಮನೆಗೆ ತೆರಳುವ ಸಂದರ್ಭ ಅದೇ ದಾರಿಯಲ್ಲಿ ೪ ರಿಂದ ೫ ಜನ ಯುವಕರು ಆಗಮಿಸಿದ್ದಾರೆ. ಅದರಲ್ಲಿ ಒಬ್ಬಾತ ಶಶಿಗೆ ಪರಿಚಯವಿದ್ದು, ಮಾತನಾಡಿಸಿದಾಗ ದಿನೇಶ ಎಂಬಾತ ವಿನಾಕಾರಣ ಜಗಳ ತೆಗೆದು ಶಶಿಯ ಮುಖದ ಮೇಲೆ ಬ್ಲೇಡಿನಿಂದ

(ಮೊದಲ ಪುಟದಿಂದ) ಇರಿದು ಗಾಯಗೊಳಿಸಿದ್ದಾನೆ. ಬಿಡಿಸಲು ಬಂದ ಪ್ರಶಾಂತನ ಮೇಲೂ ಹಲ್ಲೆ ನಡೆಸಿ, ಕೊಲೆ ಬೆದರಿಕೆ ಹಾಕಿ ದಿನೇಶ ಹಾಗೂ ಸಂಗಡಿಗರು ಪರಾರಿಯಾಗಿದ್ದಾರೆ.

ಗಾಯಗೊಂಡಿರುವ ಶಶಿ ಹಾಗೂ ಪ್ರಶಾಂತ್ ಮಡಿಕೇರಿ ಜಿಲ್ಲಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತಿದ್ದು, ಸುಂಟಿಕೊಪ್ಪ ಠಾಣೆ ಪೊಲೀಸರು ಆಸ್ಪತ್ರೆಗೆ ತೆರಳಿ ಮೊಕದ್ದಮೆ ದಾಖಲಿಸಿಕೊಂಡು ಆರೋಪಿಗಳ ಪತ್ತೆಗೆ ಬಲೆ ಬೀಸಿದ್ದಾರೆ.

ಸುಂಟಿಕೊಪ್ಪ ಪಟ್ಟಣದಲ್ಲಿ ಯುವಕರು ಮಾದಕ ವಸ್ತುಗಳ ಸೇವನೆಯಲ್ಲಿ ತೊಡಗಿಸಿಕೊಂಡು ಪಾನಮತ್ತರಾಗಿ ಸಮಾಜದ ಸ್ವಾಸ್ಥö್ಯ ಕೆಡಿಸುತ್ತಾ, ಸಾರ್ವಜನಿಕರ ನೆಮ್ಮದಿಯನ್ನು ಹಾಳು ಮಾಡುತ್ತಿದ್ದಾರೆ. ಇವರಿಗೆ ರಾತ್ರಿ ವೇಳೆ ಮಾರುಕಟ್ಟೆ ಆಶ್ರಯ ತಾಣವಾಗಿದೆ. ಇಂತಹ ಘಟನೆ ಸುಂಟಿಕೊಪ್ಪದಲ್ಲಿ ಪದೇ ಪದೇ ಮರುಕಳಿಸುತ್ತಿದ್ದು ಪೊಲೀಸ್ ಇಲಾಖೆ ಇದಕ್ಕೆ ಕಡಿವಾಣ ಹಾಕಬೇಕೆಂದು ಸುಂಟಿಕೊಪ್ಪ ನಾಗರಿಕರು ಒತ್ತಾಯಿಸಿದ್ದಾರೆ.