ಮಡಿಕೇರಿ, ಜೂ. ೨೦: ಮಡಿಕೇರಿಯಲ್ಲಿರುವ ಇಸಿಹೆಚ್‌ಎಸ್ ಪಾಲಿ ಕ್ಲಿನಿಕ್‌ನಲ್ಲಿ ತಾ. ೨೩ ರಿಂದ ೨೫ರ ವರೆಗೆ ವೈದ್ಯರು ಲಭ್ಯವಿರುವುದಿಲ್ಲ. ತಾ. ೩೦ ರಂದು ಮಾಸಿಕ ಲೆಕ್ಕ ತಪಾಸಣೆಯ ಪ್ರಯುಕ್ತ ಔಷಧಿಗಳ ವಿತರಣೆ ಇರುವುದಿಲ್ಲ. ತುರ್ತು ಚಿಕಿತ್ಸೆಗೆ ವೈದ್ಯರು ಲಭ್ಯವಿರುತ್ತಾರೆ.

ಮಾಜಿ ಸೈನಿಕರು ಮತ್ತು ಅವರ ಅವಲಂಬಿತರು ತಮ್ಮ ೬೪ ಕೆಬಿ ಹೊಸ ಕಾರ್ಡುಗಳನ್ನು ಆದಷ್ಟು ಬೇಗ ತಮ್ಮ ಪಾಲಿ ಕ್ಲಿನಿಕ್‌ನಿಂದ ಪಡೆದುಕೊಳ್ಳಬೇಕಾಗಿ ಕೋರಲಾಗಿದೆ.

ಹೆಚ್ಚಿನ ಮಾಹಿತಿಗಾಗಿ ೦೮೨೭೨-೨೨೦೦೨೪ ಈ ದೂರವಾಣಿ ಸಂಖ್ಯೆಗೆ ಕರೆ ಮಾಡಬಹುದು. ಒಂದು ತಿಂಗಳ ಒಳಗಡೆ ತಮ್ಮ ಕಾರ್ಡುಗಳನ್ನು ಪಡೆದುಕೊಳ್ಳದಿದ್ದಲ್ಲಿ ಕಾರ್ಡುಗಳನ್ನು ಮರಳಿ ಬೆಂಗಳೂರಿಗೆ ಕಳುಹಿಸಲಾಗುವುದು ಎಂದು ಪ್ರಕಟಣೆ ತಿಳಿಸಿದೆ.