ಮಡಿಕೇರಿ, ಜೂ. ೨೧: ಕೊಡಗು ಜಿಲ್ಲೆಯ ಕೃಷಿ ಇಲಾಖೆಯ ಕೃಷಿ ತಂತ್ರಜ್ಞಾನ ನಿರ್ವಹಣಾ ಸಂಸ್ಥೆ (ಎಟಿಎಂಎ) ಯೋಜನೆಯಡಿ ತಾಲೂಕು ತಾಂತ್ರಿಕ ವ್ಯವಸ್ಥಾಪಕರ ೧ ಹುದ್ದೆ ಹಾಗೂ ಸಹಾಯಕ ವ್ಯವಸ್ಥಾಪಕ ೧ ಹುದ್ದೆಯನ್ನು ಒಪ್ಪಂದದ ಆಧಾರದ ಮೇಲೆ ೨೦೨೨-೨೩ ನೇ ಸಾಲಿನ ಸೀಮಿತ ಅವಧಿಗೆ ಮಡಿಕೇರಿ ಹಾಗೂ ನಾಪೋಕ್ಲು ಹೋಬಳಿಗಳಿಗೆ ಸೇರಿದ ರೈತ ಸಂಪರ್ಕ ಕೇಂದ್ರಗಳಲ್ಲಿ ಖಾಲಿ ಇರುವ ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಲು ಅರ್ಜಿ ಆಹ್ವಾನಿಸಲಾಗಿದೆ. ತಾಲೂಕು ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಎಂಎಸ್ಸಿ (ಕೃಷಿ/ ತೋಟಗಾರಿಕೆ/ಮೀನುಗಾರಿಕೆ/ಅರಣ್ಯ/ರೇಷ್ಮೆ) ವಿದ್ಯಾರ್ಹತೆ ಹೊಂದಿದ್ದು ಕನಿಷ್ಟ ೨ ವರ್ಷ ಕೃಷಿ ವಿಸ್ತರಣಾ ಮತ್ತು ಸಂಬAಧಿತ ಚಟುವಟಿಕೆಯಲ್ಲಿ ಅನುಭವ ಹಾಗೂ ಎಮ್ಎಸ್ ಆಫೀಸ್ನಲ್ಲಿ ಪರಿಣಿತಿ ಹೊಂದಿರತಕ್ಕದ್ದು. ವಯಸ್ಸು ಗರಿಷ್ಠ ೪೫ ವರ್ಷ ಆಗಿದ್ದು, ಮಾಸಿಕ ರೂ. ೩೦ ಸಾವಿರ ಗೌರವ ಧನ ನೀಡಲಾಗುವುದು. ಸಹಾಯಕ ತಾಂತ್ರಿಕ ವ್ಯವಸ್ಥಾಪಕರ ಹುದ್ದೆಗೆ ಬಿಎಸ್ಸಿ/ಎಂಎಸ್ಸಿ (ಕೃಷಿ/ ತೋಟಗಾರಿಕೆ/ಮೀನುಗಾರಿಕೆ/ಅರಣ್ಯ/ರೇಷ್ಮೆ) ವಿದ್ಯಾರ್ಹತೆ ಹೊಂದಿದ್ದು ಕನಿಷ್ಟ ೧ ವರ್ಷ ಕೃಷಿ ವಿಸ್ತರಣಾ ಮತ್ತು ಸಂಬAಧಿತ ಚಟುವಟಿಕೆ ಯಲ್ಲಿ ಅನುಭವ ಹಾಗೂ ಎಮ್ಎಸ್ ಆಫೀಸ್ನಲ್ಲಿ ಪರಿಣಿತಿ ಹೊಂದಿರತಕ್ಕದ್ದು. ವಯಸ್ಸು ಗರಿಷ್ಠ ೪೫ ವರ್ಷ ಆಗಿದ್ದು, ಮಾಸಿಕ ರೂ. ೨೫ ಸಾವಿರ ಗೌರವ ಧನ ನೀಡಲಾಗುವುದು. ಹುದ್ದೆಗೆ ಅರ್ಹರಿರುವ ಅಭ್ಯರ್ಥಿಗಳು ತಾ. ೨೫ ರ ಒಳಗೆ ಕಚೇರಿ ವೇಳೆಯಲ್ಲಿ ಜಂಟಿ ಕೃಷಿ ನಿರ್ದೇಶಕರ ಕಚೇರಿ, ಕೊಡಗು ಜಿಲ್ಲೆ, ಮಡಿಕೇರಿ ಅವರಿಗೆ ಅರ್ಜಿಗಳನ್ನು ಸಲ್ಲಿಸಬಹುದು. ಹೆಚ್ಚಿನ ಮಾಹಿತಿಗೆ ಜಂಟಿ ಕೃಷಿ ನಿರ್ದೇಶಕರನ್ನು ಸಂಪರ್ಕಿಸುವAತೆ ಜಂಟಿ ಕೃಷಿ ನಿರ್ದೇಶಕರಾದ ಶಬಾನಾ ಎಂ.ಷೇಕ್ ಅವರು ತಿಳಿಸಿದ್ದಾರೆ.
ನೆಲದ ಹಾಸುಗಳ ಪರಿಕರಗಳನ್ನು ವಿತರಿಸಲು
೨೦೨೨-೨೩ನೇ ಸಾಲಿನಲ್ಲಿ ಅನುಸೂಚಿತ ಜಾತಿಗಳ ಉಪಯೋಜನೆ ಮತ್ತು ಬುಡಕಟ್ಟು ಉಪಯೋಜನೆ ಕಾಯ್ದೆ ೨೦೨೩ ರಡಿ ಬಳಕೆಯಾಗದೇ ಇರುವ ಮೊತ್ತ್ತದಡಿ ೨ ರಬ್ಬರ್ ನೆಲದ ಹಾಸುಗಳ ಪರಿಕರಗಳನ್ನು ವಿತರಿಸಲು ಪರಿಶಿಷ್ಟ ಜಾತಿಯ ೩, ಪರಿಶಿಷ್ಟ ಪಂಗಡದ ೧೦ ಫಲಾನುಭವಿಗಳಿಗೆ ಶೇ. ೯೦ ರಷ್ಟು ಸಹಾಯಧನದಡಿ (ಘಟಕ ವೆಚ್ಚ ರೂ.೬,೧೯೦ ಸಹಾಯಧನ ರೂ. ೫,೫೭೧ ಫಲಾನುಭವಿಗಳಿಗೆ ವಂತಿಗೆ ರೂ.೬೧೯) ಕಾರ್ಯಕ್ರಮವನ್ನು ಅನುಷ್ಟಾನ ಗೊಳಿಸಲು ಅರ್ಜಿ ಆಹ್ವಾನಿಸಲಾಗಿದೆ. ೨೦೨೨-೨೩ ನೇ ಸಾಲಿನಲ್ಲಿ ಪಶುಪಾಲನಾ ಮತ್ತು ಪಶುವೈದ್ಯಕೀಯ ಸೇವಾ ಇಲಾಖೆಯಿಂದ ೧೦,೬೦೦ ನಾಟಿ ಕೋಳಿ ಮರಿಗಳನ್ನು ಗ್ರಾಮೀಣ ಭಾಗದ ರೈತ ಮಹಿಳೆಯರಿಗೆ ಐದು ವಾರದ ತಲಾ ೨೦ ನಾಟಿ ಕೋಳಿಮರಿಗಳನ್ನು ಉಚಿತವಾಗಿ ವಿತರಿಸಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತ ಫಲಾನುಭವಿಗಳು ಸರ್ಕಾರದ ಮಾರ್ಗ ಸೂಚಿಯನ್ವಯ ಈ ಯೋಜನೆಯ ಪ್ರಯೋಜನವನ್ನು ಪೆಡೆದುಕೊಳ್ಳುವಂತೆ ಹಾಗೂ ಹೆಚ್ಚಿನ ಮಾಹಿತಿಗೆ ಸಹಾಯಕ ನಿರ್ದೇಶಕರು, ಪಶು ಆಸ್ಪತ್ರೆ ಮಡಿಕೇರಿ ೯೪೪೮೬೪೭೨೭೬, ವೀರಾಜಪೇಟೆ ೯೧೪೧೦೯೩೯೯೬, ಪೊನ್ನಂಪೇಟೆ ೯೪೪೯೦೮೧೩೪೩, ಸೋಮವಾರಪೇಟೆ ೯೪೪೮೬೫೫೬೬೦, ಕುಶಾಲನಗರ-೮೯೫೧೪೦೪೦೨೫ ಇವರನ್ನು ಸಂಪರ್ಕಿಸಬಹುದು. ಅರ್ಜಿಗಳನ್ನು ಭರ್ತಿ ಮಾಡಿ ಜುಲೈ ೧೦ ರೊಳಗೆ ಸಂಬAಧಿಸಿದ ಸಹಾಯಕ ನಿರ್ದೇಶಕರ ಕಚೇರಿಗೆ ಸಲ್ಲಿಸುವಂತೆ ಪಶುಪಾಲನಾ ಮತ್ತು ಪಶು ವೈದ್ಯಕೀಯ ಇಲಾಖೆಯ ನಿರ್ದೇಶಕ ಡಾ. ಪಿ. ಸುರೇಶ್ ಭಟ್ ತಿಳಿಸಿದ್ದಾರೆ.