ಭಾಗಮಂಡಲ, ಜೂ. ೨೧: ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಭಾಗಮಂಡಲ ಅರಣ್ಯ ವಲಯದ ವ್ಯಾಪ್ತಿಯ ಕೋರಂಗಾಲ ಗ್ರಾಮದ ಅಟಲ್ ಬಿಹಾರಿ ವಾಜಪೇಯಿ ಶಾಲೆಯ ಆವರಣದಲ್ಲಿ ಮತ್ತು ತಲಕಾವೇರಿಯ ಭೂಕುಸಿತ ಪ್ರದೇಶ(ಗಜಗಿರಿ ಬೆಟ್ಟ)ದಲ್ಲಿ ಬೀಜ ಬಿತ್ತನೆ ಅಭಿಯಾನದ ನಿಮಿತ್ತ ಬೀಜ ಬಿತ್ತನೆಯನ್ನು ಮಾಡಲಾಯಿತು. ತಲಕಾವೇರಿ ಕ್ಷೇತ್ರದಲ್ಲಿ ಪ್ರವಾಸಿಗರು ಬಳಸಿ ಬಿಸಾಡಿದ ಪ್ಲಾಸ್ಟಿಕನ್ನು ಇಲಾಖಾ ಸಿಬ್ಬಂದಿಗಳು ಸ್ವಚ್ಛಗೊಳಿಸುವ ಮೂಲಕ ಜನರಲ್ಲಿ ಪರಿಸರದ ಬಗ್ಗೆ ಜಾಗೃತಿ ಮೂಡಿಸಿದರು. ವಲಯ ಅಣ್ಯಾಧಿಕಾರಿ ಕೊಟ್ರೇಶ್ ಕೆ. ಅವರು ಮಾತನಾಡಿ, ಪರಿಸರದ ಮಹತ್ವ ತಿಳಿಹೇಳಿದರು ಮತ್ತು ಭಾಗಮಂಡಲ ಗ್ರಾಮ ಪಂಚಾಯಿತಿ ಉಪಾಧ್ಯಕ್ಷರು ಸತೀಶ್ ಕುಮಾರ್, ಸದಸ್ಯರು ನಾಗೇಶ್ ಮತ್ತು ಪಂಚಾಯತ್ ಅಭಿವೃದ್ಧಿ ಅಧಿಕಾರಿ ನಂದ, ಭಾಗಮಂಡಲ ವಲಯದ ಮತ್ತು ತಲಕಾವೇರಿ ವನ್ಯಜೀವಿ ವಲಯ ಸಿಬ್ಬಂದಿಗಳು ಭಾಗವಹಿಸಿದ್ದರು.