ವೀರಾಜಪೇಟೆ, ಜೂ. ೨೦: ಕಾಫಿ ತೋಟದಲ್ಲಿ ಅಕ್ರಮವಾಗಿ ಮರಳು ಸಂಗ್ರಹಿಸಿ ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುವ ಸಂದರ್ಭ ಪೊಲೀಸರು ದಾಳಿ ನಡೆಸಿ ಲಾರಿ ಹಾಗೂ ಮರಳನ್ನು ವಶಕ್ಕೆ ಪಡೆದಿರುವ ಘಟನೆ ನಗರದ ನಿಸರ್ಗ ಬಡಾವಣೆ ಸಮೀಪ ನಡೆದಿದೆ.

ವೀರಾಜಪೇಟೆ ನಗರ ಪೊಲೀಸರು ರಾತ್ರಿ ವಾಹನ ತಪಾಸಣೆ ಮಾಡುವ ಸಂದರ್ಭ ಮಿನಿ ಟಿಪ್ಪರ್ ಲಾರಿಯಲ್ಲಿ ಬಿ.ಶೆಟ್ಟಿಗೇರಿಯ ತೋಟದಲ್ಲಿ ಅಕ್ರಮವಾಗಿ ಸಂಗ್ರಹಿಸಿರುವ ಮರಳನ್ನು ಮಾರಾಟ ಮಾಡುವ ಉದ್ದೇಶದಿಂದ ಸಾಗಾಟ ಮಾಡುತ್ತಿರುವುದು ತಿಳಿದು ಬಂದಿದೆ. ಇದೇ ಸಂದರ್ಭ ಲಾರಿ ಚಾಲಕ ಪರಾರಿಯಾಗಿದ್ದಾನೆ. ಮರಳು ಮತ್ತು ವಾಹನವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.

ತನಿಖೆ ವೇಳೆಯಲ್ಲಿ ಬಿ.ಶೆಟ್ಟಿಗೇರಿ

(ಮೊದಲ ಪುಟದಿಂದ) ಗ್ರಾಮದ ನಿವಾಸಿ ಜಗತ್ ಎಂಬವರಿಗೆ ಸೇರಿದ ಲಾರಿಯಾಗಿದೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬAಧಿಸಿದAತೆ ಲಾರಿಯ ಚಾಲಕ ಮತ್ತು ಮಾಲೀಕರ ಮೇಲೆ ವೀರಾಜಪೇಟೆ ನಗರ ಠಾಣೆಯಲ್ಲಿ ಗಣಿ ಮತ್ತು ಭೂ ವಿಜ್ಞಾನ ಕಾಯ್ದೆ, ಪರವಾನಿಗೆ ಇಲ್ಲದೆ ಮರಳು ಸಾಗಾಟ ಮತ್ತು ಕೆ.ಎಂ.ಎA.ಅರ್ ಮತ್ತು ಕೆ.ಎ.ಎಂ.ಎA.ಸಿ ಕಾಯ್ದೆ ಅನ್ವಯ ಪ್ರಕರಣಗಳು ದಾಖಲಾಗಿವೆ.

ಅಕ್ರಮ ಮರಳು ಪತ್ತೆ

ಬಿ.ಶೆಟ್ಟಿಗೇರಿ ಗ್ರಾಮದ ಕಾಫಿ ತೋಟದ ಮೇಲೆ ದಾಳಿ ನಡೆಸಿದಾಗ ತೋಟದ ಮಧ್ಯೆ ಭಾಗದಲ್ಲಿ ಸಾಗುವ ಕಿರು ತೋಡಿನಿಂದ ಅಕ್ರಮವಾಗಿ ಮರಳು ತೆಗೆದು ದಾಸ್ತಾನು ಇರಿಸಿರುವುದು ಕಂಡುಬAದಿದೆ. ಸುಮಾರು ೩೦ಕ್ಕೂ ಅಧಿಕ ಲೋಡ್ ಮರಳು ಕಂಡು ಬಂದಿದೆ. ಸಂಗ್ರಹವಾಗಿರುವ ಮರಳನ್ನು ವಶಕ್ಕೆ ಪಡೆಯಲಾಗಿದೆ, ಗೋಣಿಕೊಪ್ಪಲು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಮುಂದಿನ ಕಾನೂನು ಕ್ರಮ ಕೈಗೊಂಡಿದ್ದಾರೆ.

ವಿರಾಜಪೇಟೆ ಉಪವಿಭಾಗ ಡಿ.ವೈ.ಎಸ್ಪಿ ನಿರಂಜನ್ ರಾಜೇ ಅರಸ್ ಅವರ ಮಾರ್ಗದರ್ಶನದಲ್ಲಿ ವೀರಾಜಪೇಟೆ ವೃತ್ತ ನಿರೀಕ್ಷಕರಾದ ಶಿವರುದ್ರ ಅವರ ನಿರ್ಧೇಶನದ ಮೇರೆಗೆ ನಡೆದ ಕಾರ್ಯಾಚರಣೆಯಲ್ಲಿ ನಗರ ಠಾಣೆಯ ಠಾಣಾಧಿಕಾರಿ ಸಿ.ವಿ. ಶ್ರೀಧರ್, ಎ.ಎಸ್.ಐ ಮಾದಯ್ಯ, ಸಿಬ್ಬಂದಿಗಳಾದ ಗಿರೀಶ್, ಧರ್ಮ, ಸುಬ್ರಮಣಿ ಅವರುಗಳು ಕಾರ್ಯಚರಣೆಯಲ್ಲಿ ಭಾಗವಹಿಸಿದ್ದರು. -ಕಿಶೋರ್ ಕುಮಾರ್ ಶೆಟ್ಟಿ