ನಾಪೋಕ್ಲು, ಜೂ. ೨೦: ಅಕ್ರಮವಾಗಿ ದನದ ಮಾಂಸವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯೊಬ್ಬನನ್ನು ನಾಪೋಕ್ಲು ಪೊಲೀಸರು ಬಂಧಿಸಿದ್ದಾರೆ.ಕೊಟ್ಟಮುಡಿ ಗ್ರಾಮದ ಟಿ.ಎ. ಮೊಯಿದು (೩೨) ಎಂಬಾತನೇ ಬಂಧಿತ ಆರೋಪಿ. ಸಂತೆಯ ದಿನವಾದ ಸೋಮವಾರ ಆರೋಪಿ ಬೇತು ಗ್ರಾಮದ

(ಮೊದಲ ಪುಟದಿಂದ) ಕಾರೇಕಾಡು ರಸ್ತೆಯ ಜಂಕ್ಷನ್ ಬಳಿ ಪ್ಲಾಸ್ಟಿಕ್ ಬಕೇಟಿನಲ್ಲಿ ದನದ ಮಾಂಸವನ್ನು ಮಾರಾಟ ಮಾಡುತ್ತಿದ್ದ. ಸಂಶಯಗೊAಡ ಪೊಲೀಸರು ಪರಿಶೀಲಿಸಿದಾಗ ಬಕೇಟಿನಲ್ಲಿ ತಲಾ ೧ ಕೆ.ಜಿ.ಯ ೨೦ ಮಾಂಸದ ಪ್ಯಾಕೇಟ್‌ಗಳು ಗೋಚರಿಸಿದ್ದು, ಆರೋಪಿಯನ್ನು ಠಾಣಾಧಿಕಾರಿ ಸದಾಶಿವರವರು ಬಂಧಿಸಿ ಮುಂದಿನ ಕ್ರಮ ಕೈಗೊಂಡಿದ್ದಾರೆ. ಕಾರ್ಯಾಚರಣೆಯಲ್ಲಿ ಪೊಲೀಸ್ ಸಿಬ್ಬಂದಿಗಳಾದ ಶರತ್ ಕುಮಾರ್,ಪಂಚಲಿAಗಪ್ಪ ಮತ್ತು ನಾಗರಾಜï ಚಾ¯ಕ ಶರೀಪ್ ಪಾಲ್ಗೊಂಡಿದ್ದರು.