ಮಡಿಕೇರಿ, ಜೂ. ೧೯: ಕೊಡಗು ಜಿಲ್ಲೆಗೆ ಅತ್ಯಗತ್ಯ ವಾಗಿರುವ ಹೆಚ್ಚುವರಿ ೪೫೦ ಹಾಸಿಗೆಗಳ ಸಾಮರ್ಥ್ಯ ಹೊಂದಿರವ ಸುಸಜ್ಜಿತ ಆಸ್ಪತ್ರೆ ಕಟ್ಟಡ ನಿರ್ಮಾಣ ಪ್ರಗತಿಯಲ್ಲಿದ್ದು ಶೀಘ್ರದಲ್ಲಿಯೇ ಆಸ್ಪತ್ರೆಯು ಸಾರ್ವಜನಿಕರ ಸೇವೆಗೆ ಲಭ್ಯವಾಗಲಿದೆ ಎಂದು ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಡೀನ್ ಡಾ. ಕಳ್ಳಿಚಂಡ ಕಾರ್ಯಪ್ಪ ಅವರು ಮಾಹಿತಿ ನೀಡಿದ್ದಾರೆ. ರಾಜ್ಯ ಸರಕಾರದ ಆಯವ್ಯಯದಲ್ಲಿ ಘೋಷಣೆ ಮಾಡಿದಂತೆ ರೂ. ೧೦೦ ಕೋಟಿ ವೆಚ್ಚದಲ್ಲಿ ೪೫೦ ಹಾಸಿಗೆ ಸಾಮರ್ಥ್ಯದ ಆಸ್ಪತ್ರೆ ನಿರ್ಮಾಣ ಕಾಮಗಾರಿಗೆ ಹಸಿರು ನಿಶಾನೆ ದೊರಕಿತ್ತು. ೨೦೨೦ ಜನವರಿ ೨೮ ರಂದು ಆಗಿನ ರಾಜ್ಯದ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರು ಕಟ್ಟಡ ನಿರ್ಮಾಣಕ್ಕೆ ಶಿಲಾನ್ಯಾಸ ನೆರವೇರಿಸಿದ್ದರು.
ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯ ಬೋಧಕ ಆಸ್ಪತ್ರೆಯ ‘ಎ’ ಬ್ಲಾಕ್ ಆವರಣದಲ್ಲಿ ೩೦೦ ಹಾಸಿಗೆಗಳು ಸೇರಿದಂತೆ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆ ಆವರಣದಲ್ಲಿ (ಬಿ ಬ್ಲಾಕ್) ೧೫೦ ಹಾಸಿಗೆಗಳ ಸಾಮರ್ಥ್ಯದ ಒಟ್ಟು ೨ ಕಟ್ಟಡಗಳ ನಿರ್ಮಾಣ ಕಾಮಗಾರಿ ಸದ್ಯದಲ್ಲಿಯೇ ಪೂರ್ಣಗೊಳ್ಳಲಿದೆ. ‘ಎ’ ಬ್ಲಾಕ್‌ನಲ್ಲಿನ ಕಟ್ಟಡ ಕಾಮಗಾರಿ ಶೇ. ೬೦ ರಷ್ಟು ಹಾಗೂ ‘ಬಿ’ ಬ್ಲಾಕ್‌ನಲ್ಲಿ ಶೇ.೮೦ ರಷ್ಟು ಕಾಮಗಾರಿ ಪೂರ್ಣ ಗೊಂಡಿರುವುದಾಗಿ ಕಾರ್ಯಪ್ಪ ಅವರು ಮಾಹಿತಿ ನೀಡಿದ್ದಾರೆ. ಬೆಂಗಳೂರಿನ ಖಾಸಗಿ ಸಂಸ್ಥೆ ನಿರ್ಮಾಣ ಕಾರ್ಯಕ್ಕೆ ಟೆಂಡರ್ ಪಡೆದಿದ್ದು, ಒಟ್ಟು ರೂ.೯೫ ಕೋಟಿ ಯೋಜನೆಯ ಕಾಮಗಾರಿಗೆ ಸರಕಾರದಿಂದ ಇದುವರೆಗೆ ರೂ.೭೦ ಕೋಟಿಯಷ್ಟು ಬಿಡುಗಡೆಯಾಗಿದೆ.ಏನೇನಿರಲಿವೆ..?: ನೂತನವಾಗಿ ನಿರ್ಮಾಣವಾಗಲಿರುವ ಆಸ್ಪತ್ರೆಯಲ್ಲಿ ಅತ್ಯಾಧುನಿಕ ಶಸ್ತçÀ ಚಿಕಿತ್ಸಾ ಕೊಠಡಿಗಳು, ತೀವ್ರ ನಿಗಾ ಘಟಕ, ಐ.ಸಿ.ಯು ವಾರ್ಡ್ಗಳು, ಸುಸಜ್ಜಿತ ವಾರ್ಡ್ಗಳು, ಸಿ.ಎಸ್.ಎಸ್.ಡಿ ಘಟಕ, ಮರಣೋತ್ತರ ಪರೀಕ್ಷೆ ಘಟಕ, ಲಿಫ್ಟ್, ಪಾರ್ಕಿಂಗ್, ಕೇಂದ್ರ ಉಗ್ರಾಣ, ಔಷಧಿ ಘಟಕ, ಅತ್ಯಾಧುನಿಕ ಪ್ರಯೋಗಾಲಯ ಗಳು, ಜಿರಿಯಾಟ್ರಿಕ್ಸ್ ವಾರ್ಡ್, ಸ್ತಿçà ಮತ್ತು ಪ್ರಸೂತಿ ರೋಗ ವಿಭಾಗ, ಮಕ್ಕಳ ವಿಭಾಗ, ವೈದ್ಯಕೀಯ ವಿಭಾಗ, ಶಸ್ತç ಚಿಕಿತ್ಸಾ ವಿಭಾಗ, ಕೀಲು ಮತ್ತು ಮೂಳೆ ವಿಭಾಗ, ನ್ಯಾಯ ವೈದ್ಯ ಶಾಸ್ತç ವಿಭಾಗ, ಅರವಳಿಕೆ ವಿಭಾಗ, ಮನೋ ಶಾಸ್ತç ವಿಭಾಗ, ಇ.ಎನ್.ಟಿ, ನೇತ್ರ ಚಿಕಿತ್ಸಾ ವಿಭಾಗಗಳು ಸೇವೆ ಒದಗಿಸಲಿವೆ.
೧೫೦ ಎಮ್.ಬಿ.ಬಿ.ಎಸ್. ಪದವೀಧರರು
ಕೊಡಗು ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯನ್ನು ೨೦೧೩-೧೪ ನೇ ಸಾಲಿನಲ್ಲಿ ಸ್ಥಾಪಿಸಿದ್ದು, ೨೦೧೬-೧೭ನೇ ಇಸವಿ ಯಲ್ಲಿ ಕಾಲೇಜು ಪ್ರಾರಂಭವಾಯಿತು. ಪ್ರಸ್ತುತ ವರ್ಷ ಕಾಲೇಜು ಪ್ರಾರಂಭ ವಾಗಿ ೫ ವರ್ಷಗಳು ಕಳೆದಿದ್ದು, ಮೊದಲ ಪದವಿ ಪ್ರದಾನ ಕಾರ್ಯ ಕ್ರಮ ಮೇ ತಿಂಗಳಿನಲ್ಲಿ ನೆರವೇರಿತು. ಒಟ್ಟು ೧೫೦ ವಿದ್ಯಾರ್ಥಿಗಳು ಎಮ್.ಬಿ.ಬಿ.ಎಸ್ ಪದವಿ ಪಡೆದು ನಿರ್ಗಮಿಸಿದ್ದಾರೆ. ಪ್ರಸ್ತುತ ಕಾಲೇಜಿನಲ್ಲಿ ೭೫೦ ಎಂ.ಬಿ.ಬಿ.ಎಸ್ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರೊಂದಿಗೆ ೨೫ ಸ್ನಾತಕೋತ್ತರ ಸೀಟು, ೧೨೦ ಸೀಟು ಅರೆ ವೈದ್ಯಕೀಯ ಕೋರ್ಸ್, ೧೦೦ ಸೀಟು ಬಿ.ಎಸ್.ಸಿ ನರ್ಸಿಂಗ್ ಕೋರ್ಸ್, ೭ ಸಿ.ಪಿ.ಎಸ್ ವೈದ್ಯಕೀಯ ಕೋರ್ಸ್ ಹಾಗೂ ೧೧೦ ಸೀಟು ಅಲೈಡ್ ಸೈನ್‌ಸಸ್ ಕೋರ್ಸ್ಗಳನ್ನು ನೀಡಲಾಗುತ್ತಿದೆ.
ಹುದ್ದೆಗಳ ಭರ್ತಿಗೆ ಕ್ರಮ
ವೈದ್ಯಕೀಯ ವಿಜ್ಞಾನಗಳ ಸಂಸ್ಥೆಯಲ್ಲಿ
(ಮೊದಲ ಪುಟದಿಂದ) ಪ್ರಾಧ್ಯಾಪಕರ ಹುದ್ದೆ - ೫, ಸಹ ಪ್ರಾಧ್ಯಾಪಕರ ಹುದ್ದೆ - ೬, ಸಹಾಯಕ ಪ್ರಾಧ್ಯಾಪಕರ ಹುದ್ದೆ - ೧೬, ಸೀನಿಯರ್ ರೆಸಿಡೆಂಟ್ ಹುದ್ದೆ - ೬, ಜೂನಿಯರ್ ರೆಸಿಡೆಂಟ್ ಹುದ್ದೆ - ೩೮, ಟ್ಯೂಟರ್ ಹುದ್ದೆ - ೧೦ ಖಾಲಿ ಇದ್ದು, ಇವುಗಳನ್ನು ಭರ್ತಿ ಮಾಡುವ ಸಲುವಾಗಿ ಈಗಾಗಲೇ ನೇರ ಸಂದರ್ಶನ ನಡೆಸಲಾಗಿದ್ದು, ಸೀನಿಯರ್ ಹಾಗೂ ಜೂನಿಯರ್ ರೆಸಿಡೆಂಟ್ ಮತ್ತು ಟ್ಯೂಟರ್ ಹುದ್ದೆಗಳನ್ನು ಕಡ್ಡಾಯ ಗ್ರಾಮೀಣ ಸೇವೆ ಮುಖಾಂತರ ಸರಕಾರದಿಂದ ಕೌನ್ಸಿಲಿಂಗ್ ಮುಖಾಂತರ ಭರ್ತಿಮಾಡಲಾಗುವುದಾಗಿ ಕಾರ್ಯಪ್ಪ ಅವರು ತಿಳಿಸಿದ್ದಾರೆ.
ವೇತನದಲ್ಲಿ ವಿಳಂಬ
ಕಾಲೇಜು ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಸಿಬ್ಬಂದಿ, ವೈದ್ಯರುಗಳಿಗೆ ಮಾಸಿಕ ವೇತನ ಪಾವತಿ ತಡವಾಗುತ್ತಿರುವುದು, ಬಹಳಷ್ಟು ಮಂದಿಗೆ ವೇತನ ಪಾವತಿಯಾಗದಿರುವ ಸಂಬAಧ ಪ್ರತಿಕ್ರಿಯಿಸಿದ ಡೀನ್ ಡಾ.ಕಾರ್ಯಪ್ಪ ಅವರು, ೨೦೨೨-೨೩ನೇ ಸಾಲಿನಲ್ಲಿ ಎಲ್ಲಾ ವೈದ್ಯಕೀಯ ಕಾಲೇಜು ಮತ್ತು ಅಧೀನ ಆಸ್ಪತ್ರೆಗಳನ್ನು ಊಖಒS (ಊumಚಿಟಿ ಖesouಡಿಛಿe ಒಚಿಟಿಚಿgemeಟಿಣ Sಥಿsಣem)ಗೆ ಒಳಪಡಿಸಿದ್ದು ಇದರಿಂದಾಗಿ ರಾಜ್ಯ ಸರಕಾರದಿಂದ ನೇರವಾಗಿ ರಾಜ್ಯಮಟ್ಟದಲ್ಲಿಯೇ ವೇತನ ಬಿಡುಗಡೆಯಾಗಲಿದ್ದು, ಸಮಸ್ಯೆ ಬಗೆಹರಿಯಲಿದೆ ಎಂದರು. ವೈದ್ಯಕೀಯ ಸಂಸ್ಥೆಯಲ್ಲಿ ಕಾರ್ಯನಿರ್ವಹಿಸುವ ಸಿಬ್ಬಂದಿಗಳ ವೇತನ ಮತ್ತು ವಿದ್ಯಾರ್ಥಿಗಳ ಶಿಷ್ಯ ವೇತನಕ್ಕಾಗಿ ರೂ.೫೦೮೪.೨೭ ಲಕ್ಷ ವಾರ್ಷಿಕವಾಗಿ ಖರ್ಚಾಗುತ್ತಿರುವುದಾಗಿ ಅವರು ಮಾಹಿತಿ ನೀಡಿದ್ದಾರೆ.
-ವರದಿ: ಪ್ರಜ್ವಲ್ ಜಿ.ಆರ್.