ಮಡಿಕೇರಿ, ಜೂ. ೧೯: ಕರ್ನಾಟಕ ದಲಿತ ಸಂಘರ್ಷ ಸಮಿತಿ ಕೊಡಗು ಜಿಲ್ಲೆ, ಇದರ ನೂತನ ಕಚೇರಿಯ ಉದ್ಘಾಟನಾ ಕಾರ್ಯಕ್ರಮ ಮಡಿಕೇರಿ ಯಲ್ಲಿ ನಡೆಯಿತು. ಕಚೇರಿಯನ್ನು ಉದ್ಯಮಿ ದಾಮೋದರ್ ಉದ್ಘಾಟಿಸಿದರು.
ನಂತರ ನಡೆದ ಸಭಾ ಕಾರ್ಯಕ್ರಮವನ್ನು ಕೊಡಗು ಜಿಲ್ಲಾ ಸಹಮತ ವೇದಿಕೆಯ ಜಿಲ್ಲಾಧ್ಯಕ್ಷರಾದ ಟಿ.ಪಿ ರಮೇಶ್ ಉದ್ಘಾಟಿಸಿ ಮಾತನಾಡುತ್ತಾ ಈ ಸಂಘಟನೆ ಹಿಂದಿನಿAದಲೂ ಬಹಳ ಚಟುವಟಿಕೆಯಿಂದ ಕೂಡಿದೆ. ಈಗಿನ ಸಮಾಜದಲ್ಲಿ ಆಗುತ್ತಿರುವ ಸಮಸ್ಯೆಗಳಿಗೆ ನಾವೆಲ್ಲರೂ ಸೇರಿ ಪರಿಹರಿಸಲು ಹೋರಾಟ ಮಾಡಬೇಕು ಎಂದರು. ಮುಖ್ಯ ಅತಿಥಿಗಳಾಗಿ ಆಗಮಿಸಿದ ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಕೇಶವ ಕಾಮತ್ ಮಾತನಾಡಿ, ಜಿಲ್ಲೆಯ ಎಲ್ಲಾ ಗ್ರಾಮಗಳಿಗೂ ಸಂಘಟನೆ ಪ್ರಮುಖರು ತೆರಳಿ ಶಿಕ್ಷಕರು, ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಸನ್ಮಾನ ಮಾಡುತ್ತ, ಶಿಕ್ಷಣಕ್ಕೆ ಪ್ರೋತ್ಸಾಹ ನೀಡುತ್ತಾ ಬರುತ್ತಿದ್ದಾರೆ. ಈ ಮೂಲಕ ಜಿಲ್ಲೆಯಲ್ಲಿ ಶಿಕ್ಷಣದ ಬಗ್ಗೆ ಜಾಗೃತಿ ಮೂಡಿಸುತ್ತಿದ್ದಾರೆ ಎಂದರು.
ವಕೀಲರಾದ ಕೃಷ್ಣಮೂರ್ತಿ, ಉದ್ಯಮಿ ದಾಮೋದರ್ ಮಾತನಾಡಿದರು.
ವಿಭಾಗೀಯ ಸಂಚಾಲಕರಾದ ಎನ್. ವೀರಭದ್ರಯ್ಯ, ತಾಲೂಕು ಸಂಚಾಲಕರಾದ ದೀಪಕ್ ಪೊನ್ನಪ್ಪ ಮತ್ತಿತರರು ಹಾಜರಿದ್ದರು. ಸಂತೋಷ್ ಸಂಪಾಜೆ ನಿರೂಪಿಸಿದರು.