ನಾವೆಲ್ಲಾ ಆರೋಗ್ಯವನ್ನು ಉತ್ತಮವಾಗಿ ಕಾಪಾಡಿಕೊಳ್ಳಲು ಯೋಗ ಹೆಚ್ಚು ಪರಿಣಾಮಕಾರಿ. ಯೋಗ ಮಾಡುವುದರಿಂದ ಆರೋಗ್ಯಕ್ಕೆ ಆಗುವ ಪ್ರಯೋಜನಗಳು ಮತ್ತು ಅದರ ವಿವಿಧ ಅಭ್ಯಾಸಗಳ ಬಗ್ಗೆ ಜಾಗೃತಿ ಮೂಡಿಸುವ ಉದ್ದೇಶದಿಂದ ಈ ದಿನವನ್ನು ಆಚರಿಸಲಾಗುತ್ತದೆ. ಇದನ್ನು ಅಭ್ಯಾಸ ಮಾಡುವು ದರಿಂದ ಪಡೆಯಬಹುದಾದ ದೈಹಿಕ, ಮಾನಸಿಕ ಮತ್ತು ಅಧ್ಯಾತ್ಮಿಕ ಪ್ರಯೋಜನಗಳ ಬಗ್ಗೆ ಜನರಿಗೆ ತಿಳಿಸುವುದು ಇದರ ಉದ್ದೇಶವಾಗಿದೆ.

ಯೋಗದ ಮೂಲವನ್ನು ಹುಡುಕಿಕೊಂಡು ಸಾಗಿದಾಗ ಭಗವಾನ್ ಶಿವನಲ್ಲಿಗೆ ಬಂದು ಸೇರುತ್ತದೆ. ಶಿವ ದೇವರು ‘ಆದಿ ಯೋಗಿ’ ಅಥವಾ ಯೋಗದ ಮೊದಲ ಗುರು ಎಂಬ ನಂಬಿಕೆ ಯಾಗಿದ್ದು, ಪ್ರಪಂಚದ ಎಲ್ಲ ಯೋಗಿಗಳಿಗೆ ಶಿಕ್ಷಕನೆಂದು ಹೇಳಲಾಗುತ್ತದೆ. ಯೋಗ ಭಾರತದ ಪ್ರಾಚೀನ ಸಾಂಪ್ರದಾಯಿಕ ಅಮೂಲ್ಯ ಕೊಡುಗೆಯಾಗಿದೆ.

ಯೋಗವು ಮನಸ್ಸು ಮತ್ತು ದೇಹ, ಚಿಂತನೆ ಮತ್ತು ಕ್ರಿಯೆ, ಸಂಯಮ ಮತ್ತು ಸಾರ್ಥಕತೆಯನ್ನು ಒಗ್ಗೂಡಿಸುತ್ತದೆ. ಯೋಗವು ಆರೋಗ್ಯ ಮತ್ತು ಯೋಗಕ್ಷೇಮದ ಸಮಗ್ರ ವಿಧಾನವಾಗಿದೆ.

ಯೋಗ ವ್ಯಾಯಾಮ ಮಾತ್ರವಲ್ಲದೆ ಪ್ರಕೃತಿಯ ಜೊತೆಗೆ ಏಕತೆಯ ಅರ್ಥವನ್ನು ಕಂಡು ಹಿಡಿಯಲು ನೆರವಾಗುತ್ತದೆ. ವಿಶ್ವಸಂಸ್ಥೆ ಯಿಂದ ಅಂರ‍್ರಾಷ್ಟಿçÃಯ ಯೋಗ ದಿನದ ಆಚರಣೆ ಹಾಗೂ ಅವಶ್ಯಕತೆಯನ್ನು ಭಾರತದ ಹಲವಾರು ಅಧ್ಯಾತ್ಮಿಕ ಗುರುಗಳು ಬೆಂಬಲಿಸಿದರು.

ಯೋಗದ ಗುರಿಯು ಕೇವಲ ದೇಹವನ್ನು ಸರಿಪಡಿಸುವುದು ಮಾತ್ರವಲ್ಲ ಮನಸ್ಸು, ದೇಹ ಮತ್ತು ಆತ್ಮ ಸೇರಿದ ಎಲ್ಲ ಮೂರು ಅಂಶಗಳನ್ನು ಶುದ್ಧೀಕರಿಸಲು ನೆರವಾಗುತ್ತದೆ. ಇದು ನಾವು ಮತ್ತು ಪ್ರಕೃತಿ ಮಾತೆಯ ಜೊತೆ ಸಂಪರ್ಕವನ್ನು ಕಲ್ಪಿಸುತ್ತದೆ. ಇದು ನಮ್ಮನ್ನು ನೈಜತೆಯೆಡೆಗೆ ಕೊಂಡೊಯ್ಯುತ್ತದೆ.

ನಿರಂತರ ಅಭ್ಯಾಸದ ಮೂಲಕ ದೇಹ ಮತ್ತು ಇಂದ್ರಿಯಗಳ ನಿಯಂತ್ರಣದೊAದಿಗೆ ಮಾನವ ಪ್ರಜ್ಞೆಯನ್ನು ಪರಿವರ್ತಿಸುತ್ತದೆ. ಪ್ರತಿಯೊಂದು ಜೀವಿಗೂ ಅದರ ಉಳಿವು, ಬೆಳವಣಿಗೆಗೆ ಬೇಕಾದ ವ್ಯವಸ್ಥೆ ಪ್ರಕೃತಿಯಲ್ಲಿಯೇ ಇದೆ. ಇದನ್ನೇ ಭಾರತೀಯ ಶಾಸ್ತç ಪುರಾಣಗಳೂ ಹೇಲಿವೆ. ಹಾಗಾಗಿಯೇ ಪ್ರಾಣಿ-ಪಕ್ಷಿಗಳು ಪ್ರತಿದಿನ ಸ್ನಾನಾದಿ ಕ್ರಿಯೆಗಳನ್ನು ಮಾಡದಿದ್ದರೂ ಪ್ರತಿದಿನ ಶುದ್ಧವಾಗಿಯೇ ಇರುತ್ತವೆ.

ಆರೋಗ್ಯವೆಂದರೆ ಕೇವಲ ದೇಹಕ್ಕೆ ಸಂಬAಧಿಸಿದ್ದು ಮಾತ್ರವಾಗಿರದೆ ಮನಸ್ಸಿಗೂ ಸಂಬAಧಪಟ್ಟಿದ್ದಾಗಿದೆ. ದೇಹ, ಮನಸ್ಸು ಎರಡೂ ಆರೋಗ್ಯದಿಂದ ಇದ್ದರೆ ಮಾತ್ರ ವ್ಯಕ್ತಿಯ ವ್ಯಕ್ತಿತ್ವ ವಿಕಸನ ಉಂಟಾಗುತ್ತದೆ. ಯೋಗವು ದೇಹ ಮತ್ತು ಮನಸ್ಸು ಎರಡನ್ನೂ ಏಕಕಾಲದಲ್ಲಿ ಆರೋಗ್ಯವಾಗಿಡುತ್ತದೆ. ದೈಹಿಕ, ಮಾನಸಿಕ, ಸಾಮಾಜಿಕ ಮತ್ತು ಅಧ್ಯಾತ್ಮಿಕ ಆರೋಗ್ಯದ ಪ್ರದೇಶಗಳಲ್ಲಿ ಎಂಟು ಹಂತದ ಬೆಳೆವಣಿಗೆಯನ್ನು ಒಳಗೊಂಡಿರುವ ಅಭ್ಯಾಸದ ವಿಧಾನವೇ ಯೋಗ. ದೇಹವು ದೈಹಿಕವಾಗಿ ಆರೋಗ್ಯಕರ ವಾಗಿದ್ದರೆ, ಮನಸ್ಸು ಸ್ಪಷ್ಟ ಕೇಂದ್ರೀಕೃತವಾಗಿರುತ್ತದೆ ಮತ್ತು ಒತ್ತಡವು ನಿಯಂತ್ರಣದಲ್ಲಿರುತ್ತದೆ. ಮನುಷ್ಯರ ಜೀವಕ್ಕೆ ಸಂಚಕಾರ ತರುತ್ತಿರುವ ವ್ಯಾಧಿಗಳಲ್ಲಿ ಮುಖ್ಯವಾಗಿ ರಕ್ತದೊತ್ತಡ, ನಿದ್ರಾಹೀನತೆ, ಮಾನಸಿಕ ಉದ್ವೇಗ, ಮಾನಸಿಕ ಅಸ್ಥಿರತೆ ಇವುಗಳಿಂದ ಮುಕ್ತಿ ಹೊಂದಲು, ಆರೋಗ್ಯವಂತ ರಾಗಿರಲು ಯೋಗಾಭ್ಯಾಸವು ಸಹಕಾರಿಯಾಗುತ್ತದೆ.

- ಮುಕ್ಕಾಟಿ ಹರಿಣಿ ಗಿರೀಶ್, ಮರಗೋಡು, ಮೊ. ೮೯೭೧೩೫೧೨೩೫