ವೀರಾಜಪೇಟೆ, ಜೂ. ೧೮: ಪಟ್ಟಣ ಪಂಚಾಯಿತಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಹಲವು ದಿನಗಳಿಂದ ಖಾಲಿ ಉಳಿದಿದ್ದು, ಆ ಸ್ಥಾನಕ್ಕೆ ಚುನಾವಣೆ ನಡೆಸಲು ೨ ಬಾರಿ ಸಭೆ ಕರೆದು ಒಂದು ಬಾರಿ ಸಭೆಗೆ ಆಡಳಿತ ಪಕ್ಷ ಸದಸ್ಯರು ಹಾಗೂ ಅಧ್ಯಕ್ಷರು ಹಾಜರಾಗಿರಲಿಲ್ಲ. ಸಭೆಯನ್ನು ಮುಖ್ಯಾಧಿಕಾರಿ ಅಧ್ಯಕ್ಷೆ ಕೋರ್ಟ್ ಕೆಲಸ ನಿಮಿತ್ತ ಸಭೆಗೆ ಹಾಜರಾಗುತ್ತಿಲ್ಲ ಎಂದು ತಿಳಿಸಿ ಸಭೆಯನ್ನು ರದ್ದುಗೊಳಿಸಿದ್ದರು.

ಮತ್ತೆ ಅದೇ ಸಭೆಯನ್ನು ಜೂನ್ ೯ ರಂದು ಕರೆಯಲಾಗಿತ್ತು. ಆ ದಿನ ಕೂಡಾ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನ ಚುನಾವಣಾ ವಿಚಾರ ಕಾರ್ಯ ಸೂಚಿಯಲ್ಲಿ ಕೊನೆಯ ಸ್ಥಾನದಲ್ಲಿದೆ ಎನ್ನುವ ಕಾರಣದ ಜೊತೆಗೆ ವಿಪಕ್ಷಗಳು ತಮ್ಮ ಅಸಮಾಧಾನ ವ್ಯಕ್ತಪಡಿಸಿದ ಕಾರಣ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಸುಶ್ಮಿತಾ ಮಹೇಶ್ ಸಭೆಯನ್ನು ರದ್ದುಗೊಳಿಸಿದ್ದರು.

ಇದೀಗ ಮುಂದಿನ ಸಾಮಾನ್ಯ ಸಭೆಗೆ ದಿನಾಂಕ ನಿಗದಿಯಾಗಿದ್ದು ಸಭೆಯ ಕಾರ್ಯಸೂಚಿಯಲ್ಲಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಚುನಾವಣೆಯ ವಿಚಾರವನ್ನು ಅಜೆಂಡಾದಿAದ ಕೈಬಿಡಲಾಗಿದೆ ಎನ್ನುವ ವಿಚಾರ ತಿಳಿದ ವಿಪಕ್ಷಗಳು ಜಿಲ್ಲಾಧಿಕಾರಿಯನ್ನು ಭೇಟಿ ಮಾಡಿ ವೀರಾಜಪೇಟೆ ಪಟ್ಟಣ ಪಂಚಾಯಿತಿ ಸಾಮಾನ್ಯ ಸಭೆಯಲ್ಲಿ ನಡೆಯುತ್ತಿರುವ ವಿದ್ಯಮಾನಗಳನ್ನು ಗಮನಕ್ಕೆ ತಂದರು. ಸ್ಥಾಯಿ ಸಮಿತಿಯ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಸದ ಬಗ್ಗೆಯೂ ಜಿಲ್ಲಾಧಿಕಾರಿ ಅವರಿಗೆ ವಿವರಿಸಲಾಯಿತು. ಮುಂದಿನ ಸಾಮಾನ್ಯ ಸಭೆಯಲ್ಲಿ ಸ್ಥಾಯಿ ಸಮಿತಿ ಚುನಾವಣಾ ವಿಚಾರವನ್ನು ಕೈಬಿಟ್ಟಿರುವ ಬಗ್ಗೆಯೂ ಗಮನಕ್ಕೆ ತರುವ ಮೂಲಕ, ಮುಖ್ಯಾಧಿಕಾರಿ ಆಡಳಿತ ಪಕ್ಷದ ಕೈಗೊಂಬೆಯAತೆ ವರ್ತನೆ ಮಾಡುತ್ತಿರುವ ಬಗ್ಗೆ ತಿಳಿಸಿ, ಮುಖ್ಯಾಧಿಕಾರಿ ಸ್ಥಾಯಿ ಸಮಿತಿ ಅಧ್ಯಕ್ಷ ಸ್ಥಾನದ ಚುನಾವಣೆ ನಡೆಸುವಂತೆ ಮನವಿಯನ್ನು ಸಲ್ಲಿಸಲಾಯಿತು.

ಮನವಿ ಆಲಿಸಿದ ಜಿಲ್ಲಾಧಿಕಾರಿ, ಮುನ್ಸಿಪಲ್ ಕೌನ್ಸಿಲ್ ಕಾಯ್ದೆಯ ಪ್ರಕಾರ ಕ್ರಮ ವಹಿಸಲಾಗುವುದು. ಈ ವಿಚಾರವಾಗಿ ಮುಖ್ಯಾಧಿಕಾರಿ ಅವರ ಜೊತೆಗೂ ಮಾತನಾಡಿ ಮಾಹಿತಿ ಪಡೆಯುತ್ತೇನೆ ಎಂದರು.

ಜಿಲ್ಲಾಧಿಕಾರಿ ಭೇಟಿಯ ವೇಳೆ, ಪಟ್ಟಣ ಪಂಚಾಯಿತಿ ವಿಪಕ್ಷ ಸದಸ್ಯರುಗಳಾದ ಮತಿನ್ ಎಸ್. ಹೆಚ್, ಮೊಹಮ್ಮದ್ ರಾಫಿ, ರಾಜೇಶ್ ಡಿ.ಪಿ, ರಂಜಿ ಪೂಣಚ್ಚ, ಅಗಸ್ಟೀನ್, ರಜನಿಕಾಂತ್ ಹಾಜರಿದ್ದರು.