ದಶಕದ ಹಿಂದಿನ ಮಾತು... ಪೂರ್ವ ಸ್ಲಾವಿಕ್, ಬಾಲ್ಟಿಕ್ ಮತ್ತು ಫಿನ್ನಿಕ್ ಜನರು ಕೀವ್ ಎಂಬ ನಗರ ವನ್ನು ರಾಜಧಾನಿಯನ್ನಾಗಿ ಮಾಡಿಕೊಂಡು ಸಮ್ಮಿಳಿತವಾಗಿ ವಾಸಿಸುತ್ತಿದ್ದರು. ಇಂದಿನ ಆಧುನಿಕ ಉಕ್ರೇನ್, ರಷ್ಯಾ ಹಾಗೂ ಬೆಲಾರೂಸ್ ದೇಶಗಳಲ್ಲಿರುವ ಜನರ ಪೂರ್ವಜರು ಹೆಚ್ಚು-ಕಡಿಮೆ ಏಕ ರೀತಿಯ ಸಂಪ್ರದಾಯದಲ್ಲೇ ಬದುಕುತ್ತಿದ್ದರು. ಇದನ್ನು ‘ಕೀವ್ ರೂಸ್' ಪ್ರದೇಶವೆಂದೇ ಹೇಳಲಾಗುತ್ತಿತ್ತು. ಈ ಪ್ರದೇಶವು ಸುಮಾರು ೧೦ ಹಾಗೂ ೧೧ನೇ ಶತಮಾನಗಳಲ್ಲಿ ಒಂದು ಶಕ್ತಿಶಾಲಿ ಪ್ರದೇಶವಾಗಿ ಹೊರಹೊಮ್ಮಿತ್ತು.
ಕ್ರೆöÊಸ್ತ ಧರ್ಮದ ಬೆಳವಣಿಗೆ
ಕ್ರಿ.ಶ. ೯೮೮ರಲ್ಲಿ ಕೀವ್ ನ ಜನಪ್ರಿಯ ರಾಜಕುಮಾರನಾಗಿದ್ದ ವ್ಲಾಡಿಮಿರ್ (ಅಥವಾ ವೊಲೊಡಿಮಿರ್) ದಿ ಗ್ರೇಟ್ ಎಂಬಾತನು ಕ್ರೆöÊಸ್ತ ಧರ್ಮವನ್ನು ಇಲ್ಲಿನ ಅಧಿಕೃತ ಧರ್ಮವನ್ನಾಗಿ ಘೋಷಣೆ ಮಾಡಿದ್ದ. ನಂತರ ಈ ಪ್ರದೇಶವು ೧೦೧೯-೫೪ರ ವರೆಗೆ ಯರೋಸ್ಲಾವ್ ದಿ ವೈಸ್ ಎಂಬ ರಾಜನ ಆಳ್ವಿಕೆಗೆ ಒಳಪಟ್ಟಿತ್ತು. ಇದು ಕೀವ್ ರೂಸ್ ಸಂಸ್ಥಾನದ ಪ್ರಭಾವವಿದ್ದ ಉತ್ತುಂಗದ ಅವಧಿಯಾಗಿತ್ತು.
ತದನಂತರ, ಈ ಪ್ರದೇಶದ ಪ್ರಭಾವ ಕ್ರಮೇಣವಾಗಿ ಕಡಿಮೆಯಾಗುತ್ತ ಬಂದಿತು. ಇದಕ್ಕೆ ಮುಖ್ಯ ಕಾರಣ, ಮಂಗೋಲಿಯಾದ ಗೋಲ್ಡನ್ ಹೋರ್ಡ್ ಆಕ್ರಮಣಕಾರರಿಂದ ಬೈಜಂಟೈನ್ ಸಾಮ್ರಾಜ್ಯದ ಅವನತಿ ಯಾದದ್ದು.
ಇದರಿಂದ ಆ ಪ್ರದೇಶದಲ್ಲಿ ವ್ಯಾಪಾರ ಕ್ಷೀಣಿಸಿತು ಹಾಗೂ ಕೀವ್ ರೂಸ್ ಪ್ರದೇಶದ ಪ್ರಭಾವ ಕುಗ್ಗತೊಡಗಿತು ಮತ್ತು ಮಂಗೋಲ್ ಖಾನರ ಆಕ್ರಮಣಗಳಿಂದಾಗಿ ಕೀವ್ ರೂಸ್ ಸಣ್ಣ ಸಣ್ಣ ಪ್ರದೇಶಗಳಾಗಿ ವಿಭಜಿಸಲ್ಪಟ್ಟವು. ಆದರೂ, ೧೫ನೇ ಶತಮಾನದಲ್ಲಿ ಕೀವ್ ರೂಸ್ ಪ್ರದೇಶದ ದೊಡ್ಡ ಭಾಗಗಳು ಒಂದಾಗಿ ಸೇರಿಸಲ್ಪಟ್ಟು ಲಿಥುವಾನಿಯಾ ಎಂಬ ಪ್ರದೇಶ ಪ್ರವರ್ಧಮಾನಕ್ಕೆ ಬಂದಿತು.
ಆಗ ಯುರೋಪಿನಲ್ಲೇ ದೊಡ್ಡ ದೇಶ
ಇನ್ನೊಂದೆಡೆ ಲುಬ್ಲಿನ್ ಮತ್ತು ಪೊಲ್ಯಾಂಡ್ ಸಾಮ್ರಾಜ್ಯಗಳು ಒಂದಾದವು. ತದನಂತರ ೧೫೬೯ರಲ್ಲಿ ಪೊಲ್ಯಾಂಡ್ ಮತ್ತು ಲಿಥುವಾನಿಯಾ ಒಟ್ಟಾಗಿ ಸೇರಿ ಪಾಲಿಶ್-ಲಿಥುವೇನಿಯನ್ ಕಾಮನ್ವೆಲ್ತ್ ದೇಶದ ರಚನೆ ಮಾಡಿದವು. ಅಂದಿನ ಸಮಯದಲ್ಲಿ ಯುರೋಪ್ ಖಂಡದಲ್ಲೇ ಇದೊಂದು ದೊಡ್ಡ ದೇಶವಾಗಿತ್ತು. ಇಂದಿನ ಆಧುನಿಕ ಉಕ್ರೇನ್ ದೇಶದ ಇತಿಹಾಸವನ್ನು ಕೆದಕಿದಾಗ ಅದು ನಮ್ಮನ್ನು ಇತಿಹಾಸದ ಈ ಅವಧಿಗೆ ಕರೆದುಕೊಂಡು ಹೋಗುತ್ತದೆ.
ರಷ್ಯಾ ಸೇರ್ಪಡೆಯಾಗಿದ್ದು
೧೭ನೇ ಶತಮಾನದ ಸಮಯದಲ್ಲಿ ಈ ಪ್ರದೇಶದಲ್ಲಿ ಆಳುತ್ತಿದ್ದ ಸಾಮ್ರಾಜ್ಯವೆಂದರೆ ಪಾಲಿಶ್ ಸಮುದಾಯ. ಇದೇ ಸಮಯದಲ್ಲಿ ಬೋಹ್ದನ್ ಖೆಲ್ನಿಸ್ಕಿ ಎಂಬ ಬಂಡಾಯಗಾರರ ನೇತೃತ್ವದಲ್ಲಿ ಕೊಸ್ಯಾಕಿಗಳೆಂಬ ಪಂಗಡದವರು ಪಾಲಿಶ್ಗಳ ವಿರುದ್ಧ ತಿರುಗಿ ಎದ್ದರು. ಇದರ ಪರಿಣಾಮವಾಗಿ ಅವರು ಪಾಲಿಶರನ್ನು ಮಣಿಸಿ ತಮ್ಮದೆ ಆದ ಸ್ವತಂತ್ರ ಉಕ್ರೇನಿಯನ್ ಕೊಸ್ಯಾಕ್ ಹೆಟ್ಮನೇಟ್ ಎಂಬ ಸಾಮ್ರಾಜ್ಯ ಸ್ಥಾಪಿಸಿದರು. ಇದೇ ಈಗಿನ ಸೆಂಟ್ರಲ್ ಉಕ್ರೇನ್ ಎಂದು ಕರೆಯಲ್ಪಡುತ್ತದೆ.
ರಷ್ಯಾ ಜೊತೆ ವಿಲೀನ
ಇದಾದ ಶತಮಾನದ ನಂತರ ರಷ್ಯಾದ ರಾಣಿ ಕ್ಯಾಥರೀನ್ ದಿ ಗ್ರೇಟ್ (೧೭೬೨-೯೬) ಹೆಟ್ಮನ್ ಆಡಳಿತ ರದ್ದುಗೊಳಿಸಿ ಅಂದಿನ ಎಲ್ಲ ಉಕ್ರೇನಿಯನ್ ಸಮುದಾಯವನ್ನು ರಷ್ಯಾದಲ್ಲಿ ವಿಲೀನಗೊಳಿಸಿದಳು.
ರಷ್ಯಾದ ಬಿಗಿಯಾದ ನೀತಿಯನ್ನು ಹೇರಿದ ಕಾರಣ ಉಕ್ರೇನಿಯನ್ ಸೇರಿದಂತೆ ಇತರ ಚಿಕ್ಕ ಪುಟ್ಟ ಸಮುದಾಯಗಳ ಸಂಸ್ಕೃತಿ, ಆಚರಣೆ ಹಾಗೂ ಭಾಷೆಗಳು ದಬ್ಬಲ್ಪಟ್ಟವು. ಹಾಗಿದ್ದರೂ ಹಲವಾರು ಉಕ್ರೇನಿಯನ್ನರು ಈ ಸ್ಥಿತಿಯಲ್ಲೂ ಸಹ ಅದ್ಭುತವಾಗಿ ಬೆಳೆದು ರಷ್ಯಾದ ಇತರ ಭಾಗಗಳಲ್ಲಿ ಹೋಗಿ ನೆಲೆಸಿದರು.
ವಿಶ್ವಯುದ್ಧದಲ್ಲಿ ರಷ್ಯಾದ ಪರ ಹೋರಾಟ
ಪರಿಸ್ಥಿತಿ ಹೇಗಾಯಿತೆಂದರೆ ಬಹು ಸಂಖ್ಯೆಯಲ್ಲಿ ಉಕ್ರೇನಿಯನ್ನರು ರಷ್ಯಾದ ಭಾಗವೇ ಆಗಿ ಹೋಗಿಬಿಟ್ಟರು. ಅಂತೆಯೇ ಒಂದನೇ ವಿಶ್ವ ಯುದ್ಧದ ಸಂದರ್ಭದಲ್ಲಿ ಮೂರೂವರೆ ದಶಲಕ್ಷಕ್ಕೂ ಹೆಚ್ಚು ಉಕ್ರೇನಿಯನ್ನರು ರಷ್ಯಾದ ಪರವಾಗಿ ಯುದ್ಧ ಮಾಡಿದ್ದರು. ಈ ಯುದ್ಧದಿಂದ ಜಂರಾರಿಸ್ಟ್ ಹಾಗೂ ಒಟ್ಟೊಮನ್ ಈ ಎರಡೂ ಸಾಮ್ರಾಜ್ಯಗಳು ಅವನತಿ ಹೊಂದಿದವು.
ಉಕ್ರೇನಿಯನ್ ರಾಷ್ಟಿçÃಯ ಚಳುವಳಿ
೧೯೧೭ರಲ್ಲಿ ಉಕ್ರೇನಿಯನ್ ರಾಷ್ಟಿçÃಯ ಚಳುವಳಿಯು ಪ್ರವರ್ಧಮಾನಕ್ಕೆ ಬರತೊಡಗಿತು ಹಾಗೂ ಇದರ ಪ್ರಭಾವದಿಂದಾಗಿ ಹಲವೆಡೆ ಉಕ್ರೇನಿಯನ್ ಸಮುದಾಯಗಳು ಹೊರಹೊಮ್ಮತೊಡಗಿದವು. ೧೯೧೭ರ ಅಕ್ಟೋಬರ್ ಕ್ರಾಂತಿಯಲ್ಲಿ ಸ್ವತಂತ್ರ ಉಕ್ರೇನ್ ಗಣರಾಜ್ಯ ಎಂದು ಹೇಳಲಾಯಿತಾದರೂ ಒಳಗೊಳಗೇ ಇತರ ಸಮುದಾಯಗಳ ಮಧ್ಯೆ ಅಂತರ್ಯುದ್ಧ ನಡೆಯುತ್ತಲೇ ಇದ್ದವು. ಕೊನೆಗೆ ೧೯೨೨ರಲ್ಲಿ ಉಕ್ರೇನ್ ಯೂನಿಯನ್ ಆಫ್ ಸೋವಿಯತ್ ಸೋಶಿಯಾಲಿಸ್ಟ್ ರಿಪಬ್ಲಿಕ್ಸ್ (ಯುಎಸ್ಎಸ್ಆರ್) ಭಾಗವಾಗಿ ಸೇರಿಕೊಂಡಿತು.
ಸೋವಿಯತ್ ಒಕ್ಕೂಟದ ಪತನ
ಈ ನಡುವೆ ೧೯೯೧ ರಲ್ಲಿ ಯುಎಸ್ಎಸ್ಆರ್ ಒಕ್ಕೂಟ ದೇಶವು ಪತನವಾಯಿತು. ವಿಭಿನ್ನ ಸ್ವತಂತ್ರ ರಾಷ್ಟçಗಳಾಗಿ ಸ್ಫೋಟಗೊಂಡಿತು. ಈ ಪತನಕ್ಕೂ ಮುಂಚಿನಿAದಲೇ ಉಕ್ರೇನ್ ಸ್ವಾತಂತ್ರ್ಯದ ಬಗ್ಗೆ ಕೂಗು ಕೇಳಿಸುತ್ತಲೇ ಇತ್ತು. ೧೯೯೦ರಲ್ಲೇ ಮೂರು ಲಕ್ಷ ಉಕ್ರೇನಿಯನ್ನರು ಮಾನವ ಸರಪಳಿಯನ್ನು ನಿರ್ಮಿಸಿ ಸ್ವಾತಂತ್ರ್ಯಕ್ಕೆ ಬೆಂಬಲ ನೀಡಿದ್ದರು.
೧೯೯೧ ಆಗಸ್ಟ್ ೨೪ ರಲ್ಲಿ ಆಗಿನ ಸೋವಿಯತ್ ಅಧ್ಯಕ್ಷ ಮಿಖಾಯಿಲ್ ಗೋರ್ಬಚೇವ್ ಅವರನ್ನು ಕಿತ್ತು ಕಮ್ಯೂನಿಸ್ಟ್ ಅಧಿಕಾರವನ್ನು ಮತ್ತೆ ತರುವ ಪ್ರಯತ್ನ ವಿಫಲವಾದ ನಂತರ ಉಕ್ರೇನ್ ತನ್ನ ದೇಶದ ಸ್ವಾತಂತ್ರ್ಯ ಕಾಯ್ದೆಯನ್ನು ಅಳವಡಿಸಿಕೊಂಡಿತು.
ತದನAತರ ಸಂಸತ್ತಿನ ಮುಖ್ಯಸ್ಥನಾಗಿದ್ದ ಲಿಯೊನಿಡ್ ಕ್ರಾವ್ಚುಕ್ ಅವರನ್ನು ಉಕ್ರೇನಿನ ಪ್ರಥಮ ಅಧ್ಯಕ್ಷರನ್ನಾಗಿ ಆಯ್ಕೆ ಮಾಡಲಾಯಿತು. ೧೯೯೧ ಡಿಸೆಂಬರ್ ತಿಂಗಳಿನಲ್ಲಿ ಬೆಲಾರೂಸ್, ರಷ್ಯಾ ಹಾಗೂ ಉಕ್ರೇನ್ ದೇಶಗಳು ಅಧಿಕೃತವಾಗಿ ಸೋವಿಯತ್ ಒಕ್ಕೂಟವನ್ನು ವಿಸರ್ಜಿಸಿ ಕಾಮನ್ವೆಲ್ತ್ ಆಫ್ ಇಂಡಿಪೆAಡೆAಟ್ ಸ್ಟೇಟ್ಸ್ (ಸಿಐಎಸ್) ಅನ್ನು ಸ್ಥಾಪನೆ ಮಾಡಿದವು.
ಆದರೆ, ಉಕ್ರೇನ್ನ ಸಂಸತ್ತಿಗೆ ಮಾನ್ಯತೆ ಅಥವಾ ಪ್ರವೇಶವನ್ನು ಎಂದಿಗೂ ಸಿಐಎಸ್ ಅನುಮೋದಿಸಲಿಲ್ಲ, ಆದ್ದರಿಂದ ಉಕ್ರೇನ್ ಕಾನೂನುಬದ್ಧವಾಗಿ ಸಿಐಎಸ್ನ ಸದಸ್ಯತ್ವ ಪಡೆಯಲು ಸಾಧ್ಯವಾಗಲಿಲ್ಲ.
ನಕಲಿ ದೇಶ ಎಂದಿದ್ದ ಪುಟಿನ್
ರಷ್ಯಾವು ಉಕ್ರೇನ್ ಮೇಲೆ ಆಕ್ರಮಣ ಮಾಡುವ ಮೂರು ದಿನಗಳ ಮೊದಲು, ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ರಷ್ಯಾದ ಈ ನೈಋತ್ಯ ನೆರೆ ರಾಷ್ಟçವನ್ನು ಉದ್ದೇಶಿಸಿ ಯಾವುದೇ ಇತಿಹಾಸ, ಗುರುತು ಅಥವಾ "ನೈಜ ರಾಜ್ಯತ್ವದ ಸ್ಥಿರ ಸಂಪ್ರದಾಯಗಳು" ಇಲ್ಲದ ನಕಲಿ ದೇಶ ಎಂದು ಜರೆದಿದ್ದರು.
ಪುಟಿನ್ ಪ್ರಕಾರ, ಆಧುನಿಕ ಉಕ್ರೇನ್ ಅನ್ನು ಸಂಪೂರ್ಣವಾಗಿ ರಷ್ಯಾದಿಂದ ರಚಿಸಲಾಗಿದೆ.