ಕಣಿವೆ, ಜೂ. ೧೮: ಕುಶಾಲನಗರದ ಹೃದಯ ಭಾಗದ ರಾಷ್ಟಿçÃಯ ಹೆದ್ದಾರಿ ಅಂಚಿನಲ್ಲಿ ಇರುವ ಜಾಮಿಯ ಮಸೀದಿ ಬಳಿಯ ಸಾರ್ವಜನಿಕ ಚರಂಡಿ ಯೊಳಗೆ ಶನಿವಾರ ಮಧ್ಯಾಹ್ನ ನೀರು ತುಂಬಿ ತುಳುಕಿ ಹೆದ್ದಾರಿಯಲ್ಲಿ ಹರಿಯಿತು. ಇದನ್ನು ಕಂಡ ಹೆದ್ದಾರಿ ಜನÀರು ಅಯ್ಯೋ ಮಳೆ ಇಲ್ಲ ಏನಿಲ್ಲ ಎಲ್ಲಿಂದ ಬಂತು ಇಷ್ಟೊಂದು ಪ್ರಮಾಣದ ನೀರು ಎಂದು ಪ್ರಶ್ನಿಸುತ್ತಾ ಅಚ್ಚರಿಗೆ ಒಳಗಾದರು.

ಸಾರ್ವಜನಿಕರಿಗೆ ಪೂರೈಸುವ ಕುಡಿಯುವ ನೀರಿನ ಬೃಹತ್ ಪೈಪು ಒಡೆದರೂ ಈ ಪ್ರಮಾಣದ ನೀರು ಹೋಗಲ್ಲವಲ್ಲ ಎಂಬುದು ಕುತೂಹಲಕ್ಕೆ ಕಾರಣವಾಯಿತು.

ಆದರೆ ಈ ನೀರು ಕುಶಾಲನಗರದ ಜಲಮಂಡಳಿಯ ನೀರು ಸಂಗ್ರಹಗಾರದ ತೊಟ್ಟಿಯ ನೀರು. ಜಲಮಂಡಳಿ ಸಿಬ್ಬಂದಿಗಳು ಆಗಿಂದಾಗ್ಗೆ ನೀರು ಸಂಗ್ರಹಗಾರ ತೊಟ್ಟಿಗಳನ್ನು ಸ್ವಚ್ಛಗೊಳಿಸುವಾಗ ತಳಭಾಗದ ಕಲುಷಿತ ನೀರನ್ನು ಚರಂಡಿಯಲ್ಲಿ ಹರಿಸುತ್ತಾರೆ.

ಆದರೆ, ಹೆದ್ದಾರಿ ಬದಿಯ ಚರಂಡಿಯಲ್ಲಿ ಕಸ ತ್ಯಾಜ್ಯ ಸಿಲುಕಿ ಕಟ್ಟಿಕೊಂಡದ್ದರಿAದ ನೀರು ಹರಿಯಲಾಗದೇ ಚರಂಡಿಯ ಮೇಲಿಂದ ಚಿಮ್ಮಿ ಹೆದ್ದಾರಿಯ ಮೇಲೆ ಹರಿಯಿತು. ಇದು ಕೆಲಕಾಲ ಅಚ್ಚರಿ ಮೂಡಿಸಿತು.