ಶನಿವಾರಸಂತೆ, ಜೂ. ೧೮: ಪಟ್ಟಣದ ಟೌನ್ ಫೀಡರ್‌ನಲ್ಲಿ ತುರ್ತು ಕಾರ್ಯದ ನಿಮಿತ್ತ ತಾ. ೧೯ ಹಾಗೂ ೨೦ ರಂದು ಬೆಳಿಗ್ಗೆ ೯ ರಿಂದ ಸಂಜೆ ೭ ಗಂಟೆವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.

ಶನಿವಾರಸಂತೆ ಟೌನ್ ಫೀಡರ್ ವ್ಯಾಪ್ತಿಗೆ ಒಳಪಡುವ ಗುಡುಗಳಲೆ, ಹೆಮ್ಮನೆ, ಬಿದರೂರು, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಗುಂಡೂರಾವ್ ಬಡಾವಣೆ, ತ್ಯಾಗರಾಜ್ ಕಾಲೋನಿ, ಚಿಕ್ಕಕೊಳತ್ತೂರು, ಮಾದ್ರೆ, ಶೆಟ್ಟಿಗನಹಳ್ಳಿ ಗ್ರಾಮಗಳಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಸಾರ್ವಜನಿಕರು ಸಹಕರಿಸುವಂತೆ ಸೆಸ್ಕ್ ಶಾಖಾ ಕಚೇರಿ ಕಿರಿಯ ಸಂಪರ್ಕಾಧಿಕಾರಿ ಹೇಮಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.