ಸೋಮವಾರಪೇಟೆ, ಜೂ. ೧೬: ಜಿಲ್ಲೆಯಲ್ಲಿ ೨೪೦೦ ಕನ್ನಡ ಸಾಹಿತ್ಯ ಪರಿಷತ್ ಸದಸ್ಯರಿದ್ದು, ಜುಲೈನಿಂದ ನೂತನ ಸದಸ್ಯತ್ವ ಆಂದೋಲನಕ್ಕೆ ಚಾಲನೆ ನೀಡಲಾಗುವುದು ಎಂದು ಕ.ಸಾ.ಪ. ಜಿಲ್ಲಾಧ್ಯಕ್ಷ ಎಂ.ಪಿ.ಕೇಶವ ಕಾಮತ್ ಹೇಳಿದರು.

ಇಲ್ಲಿನ ಸಾಹಿತ್ಯ ಭವನದಲ್ಲಿ ನಡೆದ ಶಾಂತಳ್ಳಿ ಹೋಬಳಿ ಪದಾಧಿಕಾರಿಗಳ ಆಯ್ಕೆ ಸಭೆಯಲ್ಲಿ ಭಾಗವಹಿಸಿ ಮಾತನಾಡಿದ ಅವರು, ಗ್ರಾಮೀಣ ಭಾಗದಲ್ಲಿ ಕನ್ನಡಪರ ಕಾರ್ಯಕ್ರಮಗಳು ಹೆಚ್ಚು ನಡೆಯಬೇಕು. ಕನ್ನಡ ಸಾಹಿತ್ಯ ಪರಿಷತ್ ಸದಸ್ಯರು ವಿಕೇಂದ್ರೀಕರಣಗೊAಡು ಗ್ರಾಮಗಳಲ್ಲಿ ವ್ಯಾಪಿಸಬೇಕು. ಈ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲೂ ಕಸಾಪ ಘಟಕಗಳನ್ನು ರಚಿಸಲು ಕ್ರಮವಹಿಸಲಾಗಿದೆ ಎಂದರು.

ಶಾಂತಳ್ಳಿ ಹೋಬಳಿ ಘಟಕದ ನೂತನ ಸಾಲಿನ ಅಧ್ಯಕ್ಷರಾಗಿ ಸಿ.ಎಸ್.ನಾಗರಾಜ್ ಅವಿರೋಧವಾಗಿ ಆಯ್ಕೆಯಾದರು. ಗೌರವ ಕಾರ್ಯದರ್ಶಿಗಳಾಗಿ ಜಗದೀಶ್ ಹಾಗು ಸುರೇಖಾ, ಖಜಾಂಜಿಯಾಗಿ ಸುರೇಶ್ ನೇಮಕಗೊಂಡರು.

ಕ.ಸಾ.ಪ. ಮಾಜಿ ಅಧ್ಯಕ್ಷ ಟಿ.ಪಿ. ರಮೇಶ್, ಜಿಲ್ಲಾ ಗೌರವ ಕಾರ್ಯದರ್ಶಿಗಳಾದ ಎಸ್.ಐ. ಮುನೀರ್ ಅಹಮದ್, ರೇವತಿ ರಮೇಶ್, ವಿ.ಟಿ. ಮಂಜುನಾಥ್, ಶ್ರೀಧರ್ ಹೂವಲ್ಲಿ, ತಾಲೂಕು ಕಸಾಪ ಅಧ್ಯಕ್ಷ ಎಸ್. ಡಿ. ವಿಜೇತ್, ಕಾರ್ಯದರ್ಶಿಗಳಾದ, ಎ.ಪಿ. ವೀರರಾಜ್, ಜ್ಯೋತಿ ಅರುಣ್, ವಿ.ಕೆ. ಮಂಜುನಾಥ್, ಜೆ.ಸಿ.ಶೇಖರ್, ಪ್ರಕಾಶ್, ಪ್ರಸನ್ನ, ರಾಘವೇಂದ್ರ ಇನ್ನಿತರರು ಇದ್ದರು.