ಗೋಣಿಕೊಪ್ಪಲು, ಜೂ. ೧೬: ಸಮಾಜ ಸೇವಕರು, ದಾನಿಗಳಾದ ಕದ್ದಣಿಯಂಡ ಹರೀಶ್ ಬೋಪಣ್ಣ ಅವರು ವೀರಾಜಪೇಟೆ ಸಮೀಪ ಬಿ.ಶೆಟ್ಟಿಗೇರಿ ಗ್ರಾ.ಪಂ.ಯ ಕುಟ್ಟಂದಿ ಕೆ.ಬಿ. ಪ್ರೌಢಶಾಲಾ ವಿದ್ಯಾರ್ಥಿಗಳಿಗೆ ಸುಮಾರು ೫೦೦ ನೋಟ್ ಪುಸ್ತಕವನ್ನು ವಿತರಿಸಿದರು.
ಬಿ.ಶೆಟ್ಟಿಗೇರಿ ಕಾಂಗ್ರೆಸ್ ಮುಖಂಡ ಹಾಗೂ ಗ್ರಾ.ಪಂ.ಸದಸ್ಯ ಕೊಲ್ಲೀರ ಬೋಪಣ್ಣ, ಶಾಲಾಭಿವೃದ್ಧಿ ಸಮಿತಿ ಅಧ್ಯಕ್ಷ ಕಡೇಮಾಡ ಪೊನ್ನಪ್ಪ, ನಿರ್ದೇಶಕರಾದ ಉಮೇಶ್ ಕೇಚಮಯ್ಯ, ಡೇವಿಡ್, ದಿನೇಶ್, ಚೇಂದAಡ ಜಗನ್, ಶಾಲಾ ಮುಖ್ಯೋಪಾಧ್ಯಾಯಿನಿ ದೀಪ ಮುಂತಾದವರು ಉಪಸ್ಥಿತರಿದ್ದರು.