ಕುಶಾಲನಗರ, ಜೂ. ೧೭: ಕುಶಾಲನಗರ ಪಟ್ಟಣದ ಒಳಚರಂಡಿ ಕಾಮಗಾರಿಗಳನ್ನು ಮೇ ಅಂತ್ಯದೊಳಗೆ ಲೋಕಾರ್ಪಣೆ ಗೊಳಿಸಲಾಗುವ ಭರವಸೆ ಮತ್ತೆ ಹುಸಿಯಾಗಿದೆ. ಕುಶಾಲನಗರ ಪಟ್ಟಣದ ಸ್ವಚ್ಛತೆ ಮತ್ತು ಕಾವೇರಿ ನದಿ ಸಂರಕ್ಷಣೆ ಉದ್ದೇಶ ಹೊತ್ತ ಯೋಜನೆ ಕಳೆದ ೮ ವರ್ಷಗಳಿಂದ ಪೂರ್ಣ ಗೊಳ್ಳದೆ ಇಡೀ ಪಟ್ಟಣ ಸೇರಿದಂತೆ ಜೀವನದಿ ಕಾವೇರಿ ಕಲುಷಿತವಾಗಿ ಪರಿವರ್ತನೆಗೊಳ್ಳುತ್ತಿರುವ ಆತಂಕಕಾರಿ ಬೆಳವಣಿಗೆ ಮತ್ತೆ ಮುಂದುವರಿದಿದೆ.

"ಶಕ್ತಿ" ಪತ್ರಿಕೆಯಲ್ಲಿ ಜನವರಿ ೨೫ರಲ್ಲಿ ಪ್ರಕಟಗೊಂಡ ವಿಶೇಷ ವರದಿಗೆ ಪ್ರತಿಕ್ರಿಯಿಸಿದ ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ಮಡಿಕೇರಿ ಉಪ ವಿಭಾಗದ ಸಹಾಯಕ ಕಾರ್ಯಪಾಲಕ ಅಭಿಯಂತರರ ಸ್ಪಷ್ಟನೆಯ ಭರವಸೆಯು ಅನುಪಾಲನ ವರದಿ ಇನ್ನೂ ಈಡೇರದೆ ಪಟ್ಟಣದ ಜನತೆ ಮತ್ತೆ ಯೋಜನೆ ಪೂರ್ಣಗೊಳ್ಳಲು ಕಾಯುವಂತಾಗಿದೆ.

ಕುಶಾಲನಗರ ಪಟ್ಟಣಕ್ಕೆ ಒಳಚರಂಡಿ ವ್ಯವಸ್ಥೆ ಕಲ್ಪಿಸುವ ಯೋಜನೆಗೆ ೨೦೧೨ ರಲ್ಲಿ ಆಡಳಿತಾತ್ಮಕ ಅನುಮೋದನೆ ದೊರೆತಿತ್ತು. ಯೋಜನೆಯ ವೆಚ್ಚ ಕೂಡ ಕೋಟಿಗಟ್ಟಲೆ ರೂ.ಗಳಿಗೆ ಏರುತ್ತಿದೆ.

ಕರ್ನಾಟಕ ನಗರ ನೀರು ಸರಬರಾಜು ಮತ್ತು ಒಳಚರಂಡಿ ಮಂಡಳಿ ವತಿಯಿಂದ ಕೈಗೆತ್ತಿಕೊಳ್ಳಲಾದ ಈ ಬಹುಕೋಟಿ ಯೋಜನೆಯ ಮೊದಲನೇ ಹಂತದ ನಿರ್ಮಾಣ ಮಾಡುವ ಕಾಮಗಾರಿ ಇನ್ನೂ ಪೂರ್ಣಗೊಂಡಿಲ್ಲ.

ಯೋಜನೆಯ ಬೃಹತ್ ಪ್ರಮಾಣದ ಸಾಮರ್ಥ್ಯದ ಮಲಿನ ನೀರು ಶುದ್ಧೀಕರಣ

(ಮೊದಲ ಪುಟದಿಂದ) ಘಟಕ ಇನ್ನೂ ಪೂರ್ಣಗೊಂಡಿಲ್ಲ. ಹೆದ್ದಾರಿ ರಸ್ತೆ ವ್ಯಾಪ್ತಿಯಲ್ಲಿ ಹಲವೆಡೆ ಇನ್ನೂ ಪೈಪ್‌ಗಳನ್ನು ಅಳವಡಿಸಿಲ್ಲ. ಮಲಿನ ನೀರು ಶುದ್ಧೀಕರಣ ಘಟಕಗಳು ಆಗಿಲ್ಲ. ಯೋಜನೆಗೆ ಅವಶ್ಯವಿರುವ ೧೧ ಕೆವಿ ವಿದ್ಯುತ್ ಸಂಪರ್ಕ ಕಾಮಗಾರಿ ಕೂಡ ನಡೆದಿಲ್ಲ.

ಜೊತೆಗೆ ಎರಡನೇ ಹಂತದ ಕಾಮಗಾರಿ ಪ್ರಾರಂಭಗೊAಡು ಬಹುತೇಕ ಒಂದು ವರ್ಷ ಸಲ್ಲುತ್ತಿದ್ದು, ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದೆ.

ಈ ಹಿಂದೆ "ಶಕ್ತಿ"ಯಲ್ಲಿ ವರದಿಯಾದ ಬೆನ್ನಲ್ಲೇ ಮಂಡಳಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು (ಮೊದಲ ಪುಟದಿಂದ) ಘಟಕ ಇನ್ನೂ ಪೂರ್ಣಗೊಂಡಿಲ್ಲ. ಹೆದ್ದಾರಿ ರಸ್ತೆ ವ್ಯಾಪ್ತಿಯಲ್ಲಿ ಹಲವೆಡೆ ಇನ್ನೂ ಪೈಪ್‌ಗಳನ್ನು ಅಳವಡಿಸಿಲ್ಲ. ಮಲಿನ ನೀರು ಶುದ್ಧೀಕರಣ ಘಟಕಗಳು ಆಗಿಲ್ಲ. ಯೋಜನೆಗೆ ಅವಶ್ಯವಿರುವ ೧೧ ಕೆವಿ ವಿದ್ಯುತ್ ಸಂಪರ್ಕ ಕಾಮಗಾರಿ ಕೂಡ ನಡೆದಿಲ್ಲ.

ಜೊತೆಗೆ ಎರಡನೇ ಹಂತದ ಕಾಮಗಾರಿ ಪ್ರಾರಂಭಗೊAಡು ಬಹುತೇಕ ಒಂದು ವರ್ಷ ಸಲ್ಲುತ್ತಿದ್ದು, ಕೆಲಸ ನಿಧಾನಗತಿಯಲ್ಲಿ ನಡೆಯುತ್ತಿದೆ.

ಈ ಹಿಂದೆ "ಶಕ್ತಿ"ಯಲ್ಲಿ ವರದಿಯಾದ ಬೆನ್ನಲ್ಲೇ ಮಂಡಳಿ ಅಧಿಕಾರಿಗಳು ಸ್ಪಷ್ಟನೆ ನೀಡಿದ್ದು ಕುಶಾಲನಗರದ ಬೈಚನಹಳ್ಳಿ ತಾವರೆಕೆರೆ ಬಳಿಯಿಂದ ಗುಮ್ಮನ ಕೊಲ್ಲಿ ತನಕ ಸುಮಾರು ೪.೫ ಕಿಲೋಮೀಟರ್ ಉದ್ದಕ್ಕೆ ಕಾವೇರಿ ನದಿಯ ಅಂಚಿನಲ್ಲಿ ಪೈಪುಗಳನ್ನು ಅಳವಡಿಸಲಾಗಿದ್ದು ಪ್ರವಾಹ ಹಿನ್ನೆಲೆಯಲ್ಲಿ ಕಾಮಗಾರಿ ಪರಿಕರಗಳು ಬಹುತೇಕ ನದಿ ಪಾಲಾದ ದೃಶ್ಯ ಕಾಣಬಹುದು.

ಈ ನಡುವೆ ಯೋಜನೆಯನ್ನು ಪರಿಶೀಲನೆ ನಡೆಸಲು ಸ್ಥಳಕ್ಕೆ ಭೇಟಿ ನೀಡಿದ ಅಧಿಕಾರಿಗಳು ಈ ಯೋಜನೆ ಸದ್ಯದಲ್ಲಿ ಪೂರ್ಣಗೊಳ್ಳಲಿದೆ ಎನ್ನುವ ಭರವಸೆಯನ್ನು ಕೂಡ ನೀಡಿದ್ದರು. ಕುಶಾಲನಗರ ಪಟ್ಟಣ ಪಂಚಾಯಿತಿಯ ಆಡಳಿತ ಮಂಡಳಿ ಮಾರ್ಚ್ ತಿಂಗಳಲ್ಲಿ ಒಳಚರಂಡಿ ಅಧಿಕಾರಿಗಳಿಗೆ ಅಧಿಕಾರಿಗಳಿಗೆ ಯೋಜನೆ ಪೂರ್ಣಗೊಳಿಸಲು ಆಗ್ರಹಿಸಿದ ಹಿನ್ನೆಲೆಯಲ್ಲಿ ಕರ್ನಾಟಕ ನೀರು ಸರಬರಾಜು ಮತ್ತು ಒಳಚರಂಡಿ ಯೋಜನೆ ಜಿಲ್ಲಾ ಕಾರ್ಯಪಾಲಕ ಅಭಿಯಂತರರಾದ ತಿಮ್ಮಪ್ಪ ಅವರ ನೇತೃತ್ವದಲ್ಲಿ ಮಾರ್ಚ್ ತಿಂಗಳಲ್ಲಿ ಕಾಮಗಾರಿ ಪ್ರದೇಶಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಲಾಗಿತ್ತು. ಕೊಡಗು ಜಿಲ್ಲಾಧಿಕಾರಿ ಡಾ. ಸತೀಶ್ ಅವರು ಜನವರಿಯಲ್ಲಿ ಶಕ್ತಿಯಲ್ಲಿ ಪ್ರಕಟಗೊಂಡ ವರದಿ ಆಧರಿಸಿ ಸಂಬAಧಿಸಿದ ಅಧಿಕಾರಿಗಳಿಗೆ ಕೂಡಲೇ ಕಾಮಗಾರಿಯನ್ನು ಪೂರ್ಣಗೊಳಿಸಲು ಕಟ್ಟುನಿಟ್ಟಿನ ಆದೇಶ ನೀಡಿದರೂ ಅದನ್ನು ಕೂಡ ಪಾಲಿಸುವಲ್ಲಿ ಮಂಡಳಿ ಅಧಿಕಾರಿಗಳು ವಿಫಲರಾಗಿದ್ದಾರೆ.

ಮಂಡಳಿ ಅಧಿಕಾರಿಗಳು ಎಚ್ಚೆತ್ತು ಕುಶಾಲನಗರದ ಬೃಹತ್ ಯೋಜನೆ ಯೊಂದನ್ನು ಪೂರ್ಣಗೊಳಿಸಿ ಸ್ವಚ್ಛ ಕುಶಾಲನಗರ ಹಾಗೂ ಸ್ವಚ್ಛ ಕಾವೇರಿ ನಿರ್ಮಾಣ ಮಾಡುವಲ್ಲಿ ಕೂಡಲೇ ಕಾರ್ಯತತ್ಪರರಾಗಬೇಕಾಗಿದೆ ಎನ್ನುವುದು ಕುಶಾಲ ನಗರದ ನಾಗರಿಕರ ಆಶಯವಾಗಿದೆ.

-ಚಂದ್ರಮೋಹನ್