'ಮಡಿಕೇರಿ, ಜೂ. ೧೭:ರಾಜ್ಯ ರಾಜಧಾನಿ ಬೆಂಗಳೂರಿನಲ್ಲಿರುವ ಬೆಂಗಳೂರು ಕೊಡವ ಸಮಾಜಕ್ಕೂ ಈ ಬಾರಿ ಚುನಾವಣೆ ಎದುರಾಗಿದೆ. ಕೊಡವ ಸಮಾಜಗಳ ಪೈಕಿ ಪ್ರತಿಷ್ಠೆಯ ಸಂಸ್ಥೆಗಳಲ್ಲಿ ಒಂದಾಗಿರುವ ಬೆಂಗಳೂರು ಸಮಾಜದ ಮುಂದಿನ ಮೂರು ವರ್ಷಗಳ ಆಡಳಿತ ಮಂಡಳಿಗಾಗಿ ಚುನಾವಣೆ ಘೋಷಣೆಯಾಗಿದೆ. ಜೂನ್ ೨೬ರಂದು ಚುನಾವಣೆ ನಡೆಯಲಿದ್ದು, ಈಗಾಗಲೇ ನಾಮಪತ್ರ ಸಲ್ಲಿಕೆ ಪ್ರಕ್ರಿಯೆ ಮುಕ್ತಾಯಗೊಂಡಿದೆ. ನಾಮಪತ್ರ ಹಿಂಪಡೆಯಲು ತಾ. ೧೭ ಕೊನೆಯ ದಿನವಾಗಿದ್ದು, ಎಲ್ಲಾ ಪದಾಧಿಕಾರಿಗಳ ಸ್ಥಾನಕ್ಕೂ ಇದೀಗ ಚುನಾವಣೆ ಖಚಿತವಾಗಿದೆ. ಅಧ್ಯಕ್ಷ- ಉಪಾಧ್ಯಕ್ಷ (ಮಹಿಳಾ ಮೀಸಲು), ಕಾರ್ಯದರ್ಶಿ, ಜಂಟಿ ಕಾರ್ಯದರ್ಶಿ, ಖಜಾಂಚಿ ಹಾಗೂ ಜಂಟಿ ಖಜಾಂಚಿ ಸ್ಥಾನಗಳಿಗೆ ಎರಡು ಗುಂಪುಗಳ ಮೂಲಕ ತೀವ್ರ ಸ್ಪರ್ಧೆ ಏರ್ಪಟ್ಟಿದೆ. ನಾಮಪತ್ರ ಸಲ್ಲಿಸಿದ ಹಲವರು ತಮ್ಮ ಉಮೇದುವಾರಿಕೆಯನ್ನು ಹಿಂಪಡೆದಿದ್ದರೂ ಎಲ್ಲಾ ಪದಾಧಿಕಾರಿಗಳ ಸ್ಥಾನಕ್ಕೆ ಇದೀಗ ಎರಡು ಗುಂಪಿನ ಅಭ್ಯರ್ಥಿಗಳ

ಮಧ್ಯೆ ನೇರ ಸ್ಪರ್ಧೆ ಏರ್ಪಟ್ಟಿದೆ. ಈಗಾಗಲೇ ಬೆಂಗಳೂರು ವ್ಯಾಪ್ತಿಯಲ್ಲಿ ಕೊಡವ ಸಮಾಜದ ಸದಸ್ಯರುಗಳು ಹಾಗೂ ವಿವಿಧ ಕೊಡವ ಸಂಘಗಳಲ್ಲಿ ಚುನಾವಣಾ ಕಾವು ಆರಂಭವಾಗಿದ್ದು, ಬಿರುಸಿನ ಪ್ರಚಾರವೂ ಆರಂಭಗೊAಡಿದೆ.

(ಮೊದಲ ಪುಟದಿಂದ)

ಅಭ್ಯರ್ಥಿಗಳು

ಒAದು ಗುಂಪಿನಿAದ ಅಧ್ಯಕ್ಷ ಸ್ಥಾನಕ್ಕೆ ಕರವಟ್ಟಿರ ಪೆಮ್ಮಯ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಪಾಂಡAಡ ಕಮಲ ಮುತ್ತಪ್ಪ, ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಲೆ|| ಕ. ಚಿರಿಯಪಂಡ ವಿವೇಕ್ ಮುತ್ತಣ್ಣ, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಬೊಪ್ಪಂಡ ಮಹೇಶ್ ತಮ್ಮಯ್ಯ, ಖಜಾಂಚಿ ಸ್ಥಾನಕ್ಕೆ ಬಲ್ಯಮೀದೇರಿರ ಗಣೇಶ್ ಹಾಗೂ ಜಂಟಿ ಖಜಾಂಚಿ ಸ್ಥಾನಕ್ಕೆ ಪೊನ್ನಚೆಟ್ಟೀರ ಗಣಪತಿ ಸ್ಪರ್ಧೆ ಮಾಡಿದ್ದಾರೆ.

ಮತ್ತೊಂದು ಗುಂಪಿನಿAದ ಅಧ್ಯಕ್ಷ ಸ್ಥಾನಕ್ಕೆ ಚೆನ್ನಪಂಡ ಕೆ. ಸುಬ್ಬಯ್ಯ, ಉಪಾಧ್ಯಕ್ಷ ಸ್ಥಾನಕ್ಕೆ ಪೆಮ್ಮಂಡ ಸಾವಿತ್ರಿ ದೇವಯ್ಯ, ಗೌರವ ಕಾರ್ಯದರ್ಶಿ ಸ್ಥಾನಕ್ಕೆ ಮಾಚೆಟ್ಟಿರ ಎಂ. ಡಾಲು, ಜಂಟಿ ಕಾರ್ಯದರ್ಶಿ ಸ್ಥಾನಕ್ಕೆ ಕೋದಂಡ ಶಾನ್ ಕುಟ್ಟಪ್ಪ, ಖಜಾಂಚಿ ಸ್ಥಾನಕ್ಕೆ ಬಾಳೆಕುಟ್ಟಿರ ಪಿ. ನಂಜಪ್ಪ ಹಾಗೂ ಜಂಟಿ ಖಜಾಂಚಿ ಸ್ಥಾನಕ್ಕೆ ಮೂಡೇರ ಅರುಣ್ ತಮ್ಮಯ್ಯ ಸ್ಪರ್ಧಾ ಕಣದಲ್ಲಿದ್ದಾರೆ. ನಿರ್ದೇಶಕರ ಸ್ಥಾನಗಳಿಗೆ ಬೆಂಗಳೂರು ವ್ಯಾಪ್ತಿಯ ವಿವಿಧ ಕೊಡವ ಸಂಘಗಳ ಮೂಲಕ ಪ್ರತಿನಿಧಿಗಳ ಆಯ್ಕೆ ನಡೆಯಲಿದೆ.

೧೨,೩೯೮ ಮತದಾರರು

ಸಮಾಜದ ಸದಸ್ಯರ ಪೈಕಿ ೧೨,೩೯೮ ಮಂದಿ ಈ ಚುನಾವಣೆಗೆ ಮತದಾರರಾಗಿದ್ದಾರೆ. ಎರಡು ಗುಂಪುಗಳ ನಡುವಿನ ಪ್ರಬಲ ಪೈಪೋಟಿಯಿಂದಾಗಿ ಇದೀಗ ಬೆಂಗಳೂರು ಕೊಡವ ಸಮಾಜ ಗಮನ ಸೆಳೆಯುವಂತಾಗಿದೆ.

ಹಾಲಿ ಅಧ್ಯಕ್ಷ ಮುಕ್ಕಾಟಿರ ಟಿ. ನಾಣಯ್ಯ, ಉಪಾಧ್ಯಕ್ಷೆ ಮಲ್ಲೇಂಗಡ ಮೀರಾ ಜಲಜಕುಮಾರ್ ಅವರ ನೇತೃತ್ವದ ಆಡಳಿತ ಮಂಡಳಿಯ ಅಧಿಕಾರ ಮುಕ್ತಾಯಗೊಳ್ಳುತ್ತಿದೆ. ತಾ. ೨೫ರಂದು ಸಮಾಜದ ಮಹಾಸಭೆ ಹಾಗೂ ತಾ. ೨೬ರಂದು ಚುನಾವಣೆ ನಿಗದಿಯಾಗಿದೆ.