ಮಡಿಕೇರಿ, ಜೂ ೧೭: ಸಾಹಿತ್ಯ ಪರಿಷತ್ತಿನ ನಡಿಗೆ ಹಳ್ಳಿಗಳ ಕಡೆಗೆ ಎಂದು ತೀರ್ಮಾನಿಸಿ, ಹೋಬಳಿ ಮಟ್ಟದಲ್ಲಿ ಕನ್ನಡ ಸಾಹಿತ್ಯ ಪರಿಷತ್ತನ್ನು ಬೇರುಮಟ್ಟದಿಂದ ಗಟ್ಟಿಯಾಗಿ ಕಟ್ಟುವ ಸಲುವಾಗಿ ಸೋಮವಾರಪೇಟೆ ಹೋಬಳಿಯ ಘಟಕವನ್ನು ಐಗೂರಿ ನಲ್ಲಿ ಪ್ರಾರಂಭಿಸಲಾಗಿದೆ ಎಂದು ಕೊಡಗು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಎಂ.ಪಿ.ಕೇಶವ ಕಾಮತ್ ನುಡಿದರು. ಸೋಮವಾರ ಪೇಟೆ ಹೋಬಳಿ ಐಗೂರು ಘಟಕದ ಕಸಾಪ ಸದಸ್ಯರ ಪೂರ್ವಭಾವಿ ಸಭೆಯನ್ನು ವಿ.ಎಸ್.ಎಸ್.ಎನ್.ಎಲ್ ಬ್ಯಾಂಕಿನ ಸಭಾಂಗಣದಲ್ಲಿ ನಡೆದ ಐಗೂರು ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಪ್ರಾಸ್ತಾವಿಕವಾಗಿ ಮಾತನಾಡುತ್ತಿದ್ದರು. ಮುಂದುವರೆದ ಅವರು ಸೋಮವಾರಪೇಟೆ ಹೋಬಳಿಯ ಗ್ರಾಮಗಳಾದ ಚೌಡ್ಲು, ಹಾನಗಲ್, ಕುಸುಬೂರು, ನಗರೂರು, ಮಾದಾಪುರ, ಸೂರ್ಲಬ್ಬಿ, ಗರ್ವಾಲೆ, ಕಿರಗಂದೂರು ಗ್ರಾಮಗಳ ಸದಸ್ಯರನ್ನು ಸೇರಿಸಿ ಈ ಘಟಕ ರಚಿಸಲಾಗಿದೆ ಎಂದರು. ಮುಖ್ಯ ಅತಿಥಿಗಳಾಗಿ ಭಾಗವಹಿಸಿದ ಕೊಡಗು ಜಿಲ್ಲಾ ಕಸಾಪದ ಪೂರ್ವಾಧ್ಯಕ್ಷ ಟಿ.ಪಿ. ರಮೇಶ್ ಮಾತನಾಡಿ, ಪರಿಷತ್ತು ಬಲಿಷ್ಠವಾಗ ಬೇಕಾದರೆ ಗ್ರಾಮ ಮಟ್ಟದಲ್ಲಿ ಸದಸ್ಯತ್ವ ಆಂದೋಲನ ನಡೆದು ಸದಸ್ಯತ್ವ ಹೆಚ್ಚಿಸಬೇಕು ಮತ್ತು ನಮ್ಮ ಹಿರಿಯರು ಮಾಡಿದ ಸಮಾಜ ಸೇವೆಗಳನ್ನು ಗುರುತಿಸಿ ಅವರ ಹೆಸರಿನಲ್ಲಿ ದತ್ತಿನಿಧಿಗಳನ್ನು ಸ್ಥಾಪಿಸ ಬೇಕು ಎಂದರು. ಮುಂದುವರೆದ ಅವರು ಪರಿಷತ್ತಿನ ಸಮಿತಿಗಳನ್ನು ರಚಿಸುವುದು ಜಿಲ್ಲಾಧ್ಯಕ್ಷರ ಅಧಿಕಾರವಾದರೂ ನಮ್ಮ ಜಿಲ್ಲೆಯಲ್ಲಿ ಸಮಿತಿಗಳನ್ನು ಸದಸ್ಯರ ಮುಖಾಂತರ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆ ಮಾಡುವ ಮೂಲಕ ರಚಿಸಲಾಗುತ್ತಿದೆ ಎಂದರು. ನಂತರ ನಡೆದ ಸಮಿತಿ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಐಗೂರಿನ ನಂಗಾರು ಕೀರ್ತಿ ಪ್ರಸಾದ್ ಅವರನ್ನು, ಗೌರವ ಕಾರ್ಯದರ್ಶಿ ಗಳಾಗಿ ಯೆಡವಾರೆ ಗ್ರಾಮದ ಡಿ.ವಿ.ವಿಶ್ವನಾಥ ರಾಜೆ ಅರಸ್ ಮತ್ತು ಮಾದಾಪುರ ಕುಂಬಾರ ಬಾಣೆಯ ಎಂ.ಟಿ. ಸರಳಕುಮಾರಿ ಹಾಗೂ ಕೋಶಾಧಿಕಾರಿಯಾಗಿ ಕಿರಗಂದೂರಿನ ಹೆಸರಿನಲ್ಲಿ ದತ್ತಿನಿಧಿಗಳನ್ನು ಸ್ಥಾಪಿಸ ಬೇಕು ಎಂದರು. ಮುಂದುವರೆದ ಅವರು ಪರಿಷತ್ತಿನ ಸಮಿತಿಗಳನ್ನು ರಚಿಸುವುದು ಜಿಲ್ಲಾಧ್ಯಕ್ಷರ ಅಧಿಕಾರವಾದರೂ ನಮ್ಮ ಜಿಲ್ಲೆಯಲ್ಲಿ ಸಮಿತಿಗಳನ್ನು ಸದಸ್ಯರ ಮುಖಾಂತರ ಪ್ರಜಾಪ್ರಭುತ್ವ ಮಾದರಿಯಲ್ಲಿ ಆಯ್ಕೆ ಮಾಡುವ ಮೂಲಕ ರಚಿಸಲಾಗುತ್ತಿದೆ ಎಂದರು. ನಂತರ ನಡೆದ ಸಮಿತಿ ಆಯ್ಕೆ ಪ್ರಕ್ರಿಯೆಯಲ್ಲಿ ಅಧ್ಯಕ್ಷರಾಗಿ ಐಗೂರಿನ ನಂಗಾರು ಕೀರ್ತಿ ಪ್ರಸಾದ್ ಅವರನ್ನು, ಗೌರವ ಕಾರ್ಯದರ್ಶಿ ಗಳಾಗಿ ಯೆಡವಾರೆ ಗ್ರಾಮದ ಡಿ.ವಿ.ವಿಶ್ವನಾಥ ರಾಜೆ ಅರಸ್ ಮತ್ತು ಮಾದಾಪುರ ಕುಂಬಾರ ಬಾಣೆಯ ಎಂ.ಟಿ. ಸರಳಕುಮಾರಿ ಹಾಗೂ ಕೋಶಾಧಿಕಾರಿಯಾಗಿ ಕಿರಗಂದೂರಿನ ಎಸ್. ಎಂ. ಬೆಳ್ಳಿಯಪ್ಪ ಅವರನ್ನು ಅವಿರೋಧವಾಗಿ ಆರಿಸಲಾಯಿತು.

ಉಳಿದಂತೆ ಸಹಕಾರ್ಯದರ್ಶಿ, ಸಂಘಟನಾ ಕಾರ್ಯದರ್ಶಿ ಹಾಗೂ ಇನ್ನಿತರ ಪದಾಧಿಕಾರಿಗಳನ್ನು ಉಳಿದ ಗ್ರಾಮಗಳಿಂದ ಆರಿಸುವಂತೆ ತೀರ್ಮಾನಿಸಲಾಯಿತು. ಕಾರ್ಯಕಾರಿ ಸಮಿತಿ ಸದಸ್ಯರು ಮತ್ತು ವಿಶೇಷ ಆಹ್ವಾನಿತರಾಗಿ ಯಡವಾರೆ ಗ್ರಾಮದ ಎಂ.ಎಲ್ ಉಮೇಶ್, ಕೆ.ವಿ. ಮಂಜುನಾಥ್, ಮಾದಾಪುರದ ಎಸ್.ಪಿ. ವಾಸುದೇವ್, ಐಗೂರಿನ ಹೆಚ್.ಬಿ. ಕೃಷ್ಣಪ್ಪ, ಕಿರಗಂದೂರು ಗ್ರಾಮದ ಕೆ.ಎಂ. ತಿಮ್ಮಯ್ಯ ಅವರನ್ನು ಆರಿಸಲಾಯಿತು. ವೇದಿಕೆಯಲ್ಲಿ ಕೊಡಗು ಕಸಾಪದ ಗೌರವ ಕಾರ್ಯದರ್ಶಿ ಎಸ್.ಐ. ಮುನೀರ್ ಅಹಮದ್ ಮತ್ತು ರೇವತಿ ರಮೇಶ್ ಉಪಸ್ಥಿತರಿದ್ದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಸೋಮವಾರಪೇಟೆ ತಾಲೂಕು ಕಸಾಪ ಅಧ್ಯಕ್ಷ ಎಸ್.ಡಿ. ವಿಜೇತ್ ವಹಿಸಿಕೊಂಡು ಮಾತನಾಡಿದರು. ಸೋಮವಾರಪೇಟೆ ತಾಲೂಕು ಕಸಾಪದ ಗೌರವ ಕಾರ್ಯದರ್ಶಿ ಜ್ಯೋತಿ ಅರುಣ್ ನಿರೂಪಿಸಿ ಸ್ವಾಗತಿಸಿದರು. ಗೌರವ ಕೋಶಾಧಿಕಾರಿ ಕೆ.ಪಿ. ದಿನೇಶ್ ವಂದಿಸಿದರು.