ಗೋಣಿಕೊಪ್ಪಲು, ಜೂ. ೧೭: ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಹಿನ್ನೆಲೆಯಲ್ಲಿ ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್ ವಿಭಾಗದ ಪೊನ್ನಂಪೇಟೆ ಕಚೇರಿಯಲ್ಲಿ ಸಹಾಯಕ ಅಭಿಯಂತರ ಓಬಯ್ಯ ಅವರ ಮನೆ ಹಾಗೂ ಕಚೇರಿ ಮೇಲೆ ಎಸಿಬಿ ದಾಳಿ ನಡೆಸಿ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದೆ
ಮೂಲತಃ ಮೈಸೂರು ಜಿಲ್ಲೆಯ ಹುಣಸೂರು ತಾಲೂಕಿನಲ್ಲಿ ವಾಸವಿರುವ ಇಂಜಿನಿಯರ್ ಓಬಯ್ಯ ಕಳೆದ ಎಂಟು ವರ್ಷಗಳಿಂದ ಪೊನ್ನಂಪೇಟೆಯಲ್ಲಿ ಸಹಾಯಕ ಇಂಜಿನಿಯರ್ ಆಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಅಕ್ರಮ ಆಸ್ತಿ ಸಂಪಾದನೆ ಆರೋಪದ ಹಿನ್ನೆಲೆಯಲ್ಲಿ ಎಸಿಬಿ ಅಧಿಕಾರಿಗಳು ಇವರು ವಾಸವಿದ್ದ ಹುಣಸೂರು ಮನೆಗೆ ಮುಂಜಾನೆಯ ೫.೩೦ರ ವೇಳೆ ಎಸಿಬಿ ಮೈಸೂರು ವಿಭಾಗದ ಇನ್ಸ್ಪೆಕ್ಟರ್ ಚಿತ್ತರಂಜನ್ ತಂಡ ದಾಳಿ ನಡೆಸಿ ಇಂಜಿನಿಯರ್ ಓಬಯ್ಯ ಅವರನ್ನು ವಶಕ್ಕೆ ಪಡೆದಿದ್ದಾರೆ.
ನಂತರ ಮನೆಯಲ್ಲಿ ಶೋಧ ಕಾರ್ಯ ನಡೆಸಿದ ಎಸಿಬಿ ಅಧಿಕಾರಿಗಳು ಅಕ್ರಮ ಆಸ್ತಿಯ ಬಗ್ಗೆ ಹಲವು ದಾಖಲೆಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.
ಎಸಿಬಿ ಅಧಿಕಾರಿಗಳು ಹಾಗೂ ತಂಡ ಪೊನ್ನಂಪೇಟೆಯಲ್ಲಿರುವ ಜಿಲ್ಲಾ ಪಂಚಾಯಿತಿ ಇಂಜಿನಿಯರಿAಗ್ ವಿಭಾಗಕ್ಕೆ ಆಗಮಿಸಿ ಇವರು ಕರ್ತವ್ಯ ನಿರ್ವಹಿಸುತ್ತಿದ್ದ ಕಚೇರಿಯಲ್ಲಿ ಇವರಿಗೆ ಸಂಬAಧಿಸಿದ ಬೀರುಗಳನ್ನು ತೆರೆದು ಕಡತಗಳನ್ನು ಪರಿಶೀಲನೆ ನಡೆಸಿದರು.
ಬೆಳಿಗ್ಗೆ ಆರಂಭಗೊAಡ ತನಿಖೆಯು ಮಧ್ಯಾಹ್ನದವರೆಗೂ ನಡೆಯಿತು.
ಪೊನ್ನಂಪೇಟೆ ಪಂಚಾಯತ್‌ರಾಜ್ ಉಪವಿಭಾಗ ಸಹಾಯಕ ಅಭಿಯಂತರ ಓಬಯ್ಯ ಕಳೆದ ಒಂದು ವಾರದ ಹಿಂದೆ ಹುದ್ದೆಯಿಂದ ಬಡ್ತಿ ಪಡೆದು ಎಇಇ ಆಗಿದ್ದರು. ಆದರೆ ಸ್ಥಳ ನಿಗದಿಯಾಗಿರಲಿಲ್ಲ.
(ಮೊದಲ ಪುಟದಿಂದ) ಈ ಸಂಬAಧ ಓಬಯ್ಯ ಬೆಂಗಳೂರಿನ ಮುಖ್ಯ ಕಚೇರಿಗೆ ಗುರುವಾರ ತೆರಳಿ ಕೆಲಸ ಮುಗಿಸಿ ರಾತ್ರಿಯ ವೇಳೆ ಹುಣಸೂರಿನ ಮನೆಗೆ ಆಗಮಿಸಿದ್ದರು. ಪೊನ್ನಂಪೇಟೆ ಕಚೇರಿಯ ಮುಖ್ಯ ದ್ವಾರದ ಬಾಗಿಲನ್ನು ಮುಚ್ಚಿ ಕಡತ ಪರಿಶೀಲನೆ ನಡೆಸಲಾಯಿತು. ಕಚೇರಿಯ ಆವರಣದಲ್ಲಿ ಸಾರ್ವಜನಿಕರಿಗೆ ನಿರ್ಬಂಧ ಹೇರಲಾಗಿತ್ತು. ಸಂಜೆಯ ವೇಳೆ ಹಲವು ಕಡತಗಳೊಂದಿಗೆ ಅಧಿಕಾರಿಗಳು ತೆರಳಿದರು.
ತನಿಖೆ ಮುಗಿದ ನಂತರ ಹಿರಿಯ ಅಧಿಕಾರಿಗಳು ಮಾಹಿತಿ ಒದಗಿಸುವುದಾಗಿ ಎಸಿಬಿ ಇನ್ಸ್ಪೆಕ್ಟರ್ ಚಿತ್ತರಂಜನ್ ಮಾಹಿತಿ ಒದಗಿಸಿದರು.
- ಹೆಚ್.ಕೆ. ಜಗದೀಶ್