ಮಡಿಕೇರಿ, ಜೂ. ೧೫: ಇತ್ತೀಚೆಗೆ ಮನೆಯಲ್ಲಿ ಬೆಂಕಿ ಕಾಣಿಸಿಕೊಂಡು ಸಂಕಷ್ಟಕ್ಕೆ ಸಿಲುಕಿದ ಆಟೋ ಚಾಲಕ ಸುನಿಲ್ ಅವರಿಗೆ ಆಟೋ ಚಾಲಕರಿಂದ ಹಾಗೂ ಸಾರ್ವಜನಿಕರಿಂದ ಸಂಗ್ರಹಿಸಲಾದ ರೂ. ೪೧,೧೦೦ ನೆರವಿನ ಹಣವನ್ನು ಹಸ್ತಾಂತರಿಸಲಾಯಿತು.
ಆಟೋ ಚಾಲಕ-ಮಾಲೀಕರ ಸಂಘದ ಜಿಲ್ಲಾಧ್ಯಕ್ಷ ಡಿ.ಹೆಚ್. ಮೇದಪ್ಪ, ನಗರ ಅಧ್ಯಕ್ಷ ಅರುಣ್ ಕುಮಾರ್, ಉಪಾಧ್ಯಕ್ಷ ಎ. ಸಮದ್, ಪ್ರಧಾನ ಕಾರ್ಯದರ್ಶಿ ಬಾರನ ದಿನೇಶ್, ಸಹ ಕಾರ್ಯದರ್ಶಿ ಹೇಮರಾಜ್, ಖಜಾಂಚಿ ದಿನೇಶ್ ರೈ, ಸಹಖಜಾಂಚಿ ಭರತ್ ಕುಮಾರ್, ಸಂಘಟನಾ ಕಾರ್ಯದರ್ಶಿ ದೇವರಾಜ್ ನಿರ್ದೇಶಕರುಗಳಾದ ಸುಕುಮಾರ್, ರೋನಿ, ಜಿಲ್ಲಾ ಕಾರ್ಯದರ್ಶಿ ಟಿ.ಎಂ. ಪ್ರಸನ್ನ ಹಾಗೂ ಸಲಹೆಗಾರ ಡೆನ್ನಿ ಈ ಸಂದರ್ಭ ಹಾಜರಿದ್ದರು.