ಸುಂಟಿಕೊಪ್ಪ, ಜೂ. ೧೫: ಇಲ್ಲಿನ ಮಾದಾಪುರ ರಸ್ತೆಯ ಮಂಜು ನಾಥಯ್ಯ ಮೀನಾಕ್ಷಮ್ಮ ಕಲ್ಯಾಣ ಮಂಟಪದ ಸಭಾಂಗಣದಲ್ಲಿ ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದಿಂದ ಸುಂಟಿಕೊಪ್ಪ ಗ್ರಾಮದ ಜನತೆಗೆ ಭ್ರಷ್ಟಾಚಾರ ನಿಗ್ರಹದ ಬಗ್ಗೆ ಸಭೆ ನಡೆಸಲಾಯಿತು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಡಿವೈಸ್ಪಿ ಕೆ. ರಾಜೇಂದ್ರ ಯಾವುದೇ ಸರಕಾರಿ ನೌಕರರು ಕಚೇರಿಯಲ್ಲಿ ತಮ್ಮ ದಿನನಿತ್ಯ ಕೆಲಸಗಳನ್ನು ಮಾಡಿಕೊಡಲು ಅನಗತ್ಯ ವಿಳಂಬ ಮಾಡಿ ನಿರ್ಲಕ್ಷö್ಯತೆ ತೋರಿದಲ್ಲಿ ಅಥವಾ ಲಂಚ ಕೇಳಿದಲ್ಲಿ ಕೊಡಗು ಜಿಲ್ಲಾ ಭ್ರಷ್ಟಾಚಾರ ನಿಗ್ರಹ ದಳದ ಪೊಲೀಸ್ ಠಾಣೆಗೆ ದೂರು ನೀಡಬೇಕೆಂದು ತಿಳಿಸಿದರು.
ಈ ಸಭೆಯಲ್ಲಿ ನಿಗ್ರಹದಳದ ಇನ್ಸ್ಪೆಕ್ಟರ್ ಕುಮಾರ ಸಿಬ್ಬಂದಿಗಳಾದ ಲೋಹಿತ್, ಸಜಿನ್, ವಸಂತ ಹಾಗೂ ಆಟೋ ಚಾಲಕರ ಸಂಘದ ಪದಾಧಿಕಾರಿಗಳು, ವಾಹನ ಚಾಲಕರ ಸಂಘದ ಪದಾಧಿಕಾರಿಗಳು, ಸಾರ್ವಜನಿಕರು ಹಾಜರಿದ್ದರು.