ವೀರಾಜಪೇಟೆ: ವೀರಾಜಪೇಟೆಯ ಕಾವೇರಿ ಕಾಲೇಜಿನಲ್ಲಿ ಎನ್.ಎಸ್.ಎಸ್. ಹಾಗೂ ಐಕ್ಯೂಎಸಿ ಸಹಯೋಗದೊಂದಿಗೆ ವಿಶ್ವ ಪರಿಸರ ದಿನಾಚರಣೆಯನ್ನು ಆಚರಿಸಲಾಯಿತು.
ಕಾಲೇಜಿನ ಪ್ರಾಂಶುಪಾಲ ಪ್ರೊ. ಶಂಕರ ನಾರಾಯಣ ಬಿ.ಎನ್. ಅಧ್ಯಕ್ಷತೆ ವಹಿಸಿ ಮಾತನಾಡಿ, ಇರುವುದೊಂದೇ ಭೂಮಿ, ಅದನ್ನು ಉಳಿಸಿ ಸಂರಕ್ಷಿಸುವುದು ನಮ್ಮೆಲ್ಲರ ಹೊಣೆ ಎಂದು ಅಭಿಪ್ರಾಯಿಸಿದರು.
ಐಕ್ಯೂಎಸಿ ಸಂಚಾಲಕಿ ಕೆ.ಜಿ. ವೀಣಾ ವಿದ್ಯಾರ್ಥಿಗಳನ್ನು ಉದ್ದೇಶಿಸಿ ಮಾತನಾಡಿ, ಪರಿಸರವನ್ನು ಸಂರಕ್ಷಿಸುವುದು ನಮ್ಮೆಲ್ಲರ ಆದ್ಯ ಕರ್ತ್ಯವ್ಯವಾಗಿದೆ. ಆ ನಿಟ್ಟಿನಲ್ಲಿ ಜನರಲ್ಲಿ ಜಾಗೃತಿ ಮೂಡಿಸುವ ಕೆಲಸವನ್ನು ನಾವೆಲ್ಲರೂ ಮಾಡಬೇಕು ಎಂದರು.
ರಾಷ್ಟಿçÃಯ ಸೇವಾ ಯೋಜನಾಧಿಕಾರಿಗಳಾದ ನಾಗರಾಜು ಹೆಚ್.ವಿ. ಅವರು ಕಾರ್ಯಕ್ರಮ ನಿರೂಪಿಸಿ, ಸ್ವಾಗತಿಸಿದರು. ರಾಷ್ಟಿçÃಯ ಸಹ ಸೇವಾ ಯೋಜನಾಧಿಕಾರಿ ಕೌಶಲ್ಯ ಹಾಗೂ ಎನ್ಎಸ್ಎಸ್ ನಾಯಕ, ನಾಯಕಿಯರು, ವಿದ್ಯಾರ್ಥಿಗಳು, ಕಾಲೇಜಿನ ಅಧ್ಯಾಪಕ ವೃಂದದವರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಆಲೂರು-ಸಿದ್ದಾಪುರ ಸರಕಾರಿ ಪ್ರೌಢಶಾಲೆ ಮುಳ್ಳೂರು: ಪ್ರತಿಯೊಬ್ಬರೂ ಹಸಿರು ವಾತಾವರಣದಲ್ಲಿ ಆರೋಗ್ಯಕರ ಜೀವನ ನಡೆಸಬೇಕಾದರೆ ಮೊದಲು ಪರಿಸರವನ್ನು ಉಳಿಸಿಕೊಳ್ಳುವ ಅವಶ್ಯಕತೆ ಇದೆ ಎಂದು ಶಿರಂಗಾಲ ಸರಕಾರಿ ಪ.ಪೂ. ಕಾಲೇಜಿನ ಉಪನ್ಯಾಸಕ ಹಂಡ್ರAಗಿ ನಾಗರಾಜ್ ಅಭಿಪ್ರಾಯಪಟ್ಟರು.
ಆಲೂರು-ಸಿದ್ದಾಪುರ ಸರಕಾರಿ ಪ್ರೌಢಶಾಲೆಯ ರಾಷ್ಟಿçÃಯ ಸೇವಾ ಯೋಜನೆ ಘಟಕದ ವತಿಯಿಂದ ಹಮ್ಮಿಕೊಂಡಿದ್ದ ವಿಶ್ವ ಪರಿಸರ ದಿನಾಚರಣೆ ಕಾರ್ಯಕ್ರಮದಲ್ಲಿ ಪರಿಸರ ಮತ್ತು ರಾಷ್ಟಿçÃಯ ಸೇವಾ ಯೋಜನೆ ವಿಷಯದ ಕುರಿತು ಅವರು ಮಾತನಾಡಿದರು.
ರಾಷ್ಟಿçÃಯ ಸೇವಾ ಯೋಜನೆ ಘಟಕದಲ್ಲಿ ವಿದ್ಯಾರ್ಥಿಗಳು ತೊಡಗಿಸಿಕೊಂಡರೆ ಸಮಾಜ ಸೇವೆ, ಮಾನವೀಯ ಮೌಲ್ಯ, ಸಾಂಸ್ಕೃತಿಕ ಬೆಳವಣಿಗೆ, ವ್ಯಕ್ತಿತ್ವ ವಿಕಸನ, ಆತ್ಮ ವಿಶ್ವಾಸ, ಧೈರ್ಯ, ಸಂಕಲ್ಪ ಮನೋಭಾವನೆ, ಅರಣ್ಯ ಪರಿಸರ ಮುಂತಾದ ಮಹತ್ವದ ವಿಷಯಗಳನ್ನು ತಿಳಿದುಕೊಳ್ಳಲು ಸಾಧ್ಯವಾಗುತ್ತದೆ ಎಂದರು.
ಪ್ರೌಢಶಾಲಾ ಮುಖ್ಯ ಶಿಕ್ಷಕಿ ಶ್ರುತಿ ಪ್ರಾಸ್ತಾವಿಕವಾಗಿ ಮಾತನಾಡಿ, ವಿದ್ಯಾರ್ಥಿಗಳು ಪರಿಸರದ ಮಹತ್ವದ ಬಗ್ಗೆ ಅರಿವು ಹೊಂದಬೇಕಿದ್ದು, ಈ ನಿಟ್ಟಿನಲ್ಲಿ ವಿದ್ಯಾರ್ಥಿಗಳು ತಮ್ಮ ಮನೆಗಳಲ್ಲಿ ಗಿಡ ನೆಟ್ಟು ಅವುಗಳನ್ನು ನಿರ್ವಹಣೆ ಮಾಡುವುದರ ಜೊತೆಯಲ್ಲಿ ಅಕ್ಕಪಕ್ಕದ ಜನರಿಗೂ ಪರಿಸರದ ಮಹತ್ವದ ಬಗ್ಗೆ ಅರಿವು ಮೂಡಿಸುವಂತೆ ಸಲಹೆ ನೀಡಿದರು.
ಕಾರ್ಯಕ್ರಮದಲ್ಲಿ ಪ.ಪೂ. ಕಾಲೇಜಿನ ಪ್ರಾಂಶುಪಾಲ ಶಿವಕುಮಾರ್, ಹಿರಿಯ ಶಿಕ್ಷಕ ಮಲ್ಲೇಶ್, ಗ್ರಾ.ಪಂ. ಉಪಾಧ್ಯಕ್ಷೆ ದಮಯಂತಿ ಕರುಂಬಯ್ಯ, ಪ್ರೌಢಶಾಲೆಯ ರಾಷ್ಟಿçÃಯ ಸೇವಾ ಯೋಜನೆ ಘಟಕದ ಶಿಬಿರಾಧಿಕಾರಿ ಧರ್ಮಪ್ಪ, ಕಾಲೇಜು ಉಪನ್ಯಾಸಕರು, ಶಿಕ್ಷಕರು ಹಾಜರಿದ್ದರು.
ಮಾಂದಲಪಟ್ಟಿ ಕರಿಕೆ: ಮಾಂದಲ್ಪಟ್ಟಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಹುಲ್ಲು ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಮಡಿಕೇರಿ ವನ್ಯಜೀವಿ ವಿಭಾಗದ ಪುಷ್ಪಗಿರಿ ವನ್ಯಜೀವಿ ವಲಯ ಮತ್ತು ಪುತ್ತೂರು ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಾಂಪಾಡಿಯ ಸ್ಕೌಟ್ಸ್ ಗೈಡ್ಸ್ ತಂಡದ ಸಹಯೋಗದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಡಿಕೇರಿ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ನಾಯ್ಕ ಅವರು, ಪರಿಸರ ಸಂರಕ್ಷಣೆ ಯುವ ಜನತೆಯ ಜೀವನದ ಮುಖ್ಯ ಧ್ಯೇಯ ಆಗಬೇಕು. ಯುವ ಜನತೆ ಪಾರ್ಕ್, ಪ್ರಕೃತಿ ಸೌಂದರ್ಯ ಪ್ರದೇಶದಲ್ಲಿ ಕೇವಲ ಮೋಜು-ಮಸ್ತಿ ಮಾಡುವ ಆಯಾಮ ಬಿಟ್ಟು ಮುಂದಿನ ಪೀಳಿಗೆಗೆ ಸುಂದರ ಪರಿಸರ ಉಳಿಸಿ-ಬೆಳೆಸುವ ಕಡೆ ಗಮನಹರಿಸಬೇಕು ಎಂದು ಕರೆ ನೀಡಿದರು.
ಪರಿಸರದ ಬಗ್ಗೆ ಸ್ಕೌಟ್ಸ್ ಗೈಡ್ಸ್ ತಂಡಕ್ಕೆ ಇರುವ ಧ್ಯೇಯ ಕೇವಲ ತರಬೇತಿಗೆ ಮಾತ್ರ ಸೀಮಿತ ಆಗಬಾರದು. ನಮ್ಮ ಜೀವನದಲ್ಲಿ ನಿತ್ಯ ಪಾಲಿಸಬೇಕು ಎಂದು ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಲಮೂಲಗಳು ಶೋಲಾ ಅರಣ್ಯದಿಂದ ಹುಟ್ಟುತ್ತವೆ. ಅಂತರ್ಜಲ ಮಟ್ಟ ಸಂರಕ್ಷಣೆಗೆ ಶೋಲಾ ಹುಲ್ಲುಗಾವಲು ಸಂರಕ್ಷಣೆ ಅತಿ ಮುಖ್ಯ. ಮಾಂದಲ್ಪಟ್ಟಿಯಲ್ಲಿ ಪುಷ್ಪಗಿರಿ ವನ್ಯಧಾಮದಲ್ಲಿ ಪ್ಲಾಸ್ಟಿಕ್ ನಿರ್ವಹಣೆಗೆ ಕೈಗೊಂಡ ನಿಯಮ ಮತ್ತು ಕಾನೂನು ಕ್ರಮಗಳ ಬಗ್ಗೆ ಉಪ ವಲಯ ಅರಣ್ಯಾಧಿಕಾರಿ ಶಶಿ ಪಿ.ಟಿ. ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಗೈಡ್ಸ್ ತಂಡದ ಸದಸ್ಯರಿಗೆ ಪರಿಸರ ದಿನಾಚರಣೆಯ ಧ್ಯೇಯ ವಾಕ್ಯವನ್ನು ಬೋಧಿಸಲಾಯಿತು. ನಂತರ ಬೋಲು ಗುಡ್ಡದ ಮೇಲೆ ಹುಲ್ಲಿನ ಗಿಡ ನೆಟ್ಟು ಮಾಂದಲ್ಪಟ್ಟಿ ರಸ್ತೆಯ ಬದಿಯಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಗೈಡ್ಸ್ನ ಅಧಿಕಾರಿ ಡಾ. ಪೊಡಿಯ, ಸಹಾಯಕ ಪ್ರಾಧ್ಯಾಪಕರುಗಳಾದ ತಿಮ್ಮಯ್ಯ ಹಾಗೂ ಮಂಜುಳಾ ದೇವಿ, ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಗಣೇಶ, ಅರಣ್ಯ ರಕ್ಷಕರಾದ ಮಂಜುನಾಥ ಮತ್ತು ಲೋಕೇಶ್, ಸಿಬ್ಬಂದಿಗಳು, ಪ್ರವಾಸಿಗರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.ಕರಿಕೆ: ಮಾಂದಲ್ಪಟ್ಟಿಯಲ್ಲಿ ವಿಶ್ವ ಪರಿಸರ ದಿನಾಚರಣೆ ಅಂಗವಾಗಿ ಸ್ವಚ್ಛತಾ ಕಾರ್ಯಕ್ರಮ ಹಾಗೂ ಹುಲ್ಲು ಗಿಡ ನೆಡುವ ಕಾರ್ಯಕ್ರಮ ನಡೆಯಿತು. ಮಡಿಕೇರಿ ವನ್ಯಜೀವಿ ವಿಭಾಗದ ಪುಷ್ಪಗಿರಿ ವನ್ಯಜೀವಿ ವಲಯ ಮತ್ತು ಪುತ್ತೂರು ತಾಲೂಕಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಾಂಪಾಡಿಯ ಸ್ಕೌಟ್ಸ್ ಗೈಡ್ಸ್ ತಂಡದ ಸಹಯೋಗದಲ್ಲಿ ನಡೆದ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಮಡಿಕೇರಿ ವನ್ಯಜೀವಿ ವಿಭಾಗದ ಸಹಾಯಕ ಅರಣ್ಯ ಸಂರಕ್ಷಣಾಧಿಕಾರಿ ಶ್ರೀನಿವಾಸ ನಾಯ್ಕ ಅವರು, ಪರಿಸರ ಸಂರಕ್ಷಣೆ ಯುವ ಜನತೆಯ ಜೀವನದ ಮುಖ್ಯ ಧ್ಯೇಯ ಆಗಬೇಕು. ಯುವ ಜನತೆ ಪಾರ್ಕ್, ಪ್ರಕೃತಿ ಸೌಂದರ್ಯ ಪ್ರದೇಶದಲ್ಲಿ ಕೇವಲ ಮೋಜು-ಮಸ್ತಿ ಮಾಡುವ ಆಯಾಮ ಬಿಟ್ಟು ಮುಂದಿನ ಪೀಳಿಗೆಗೆ ಸುಂದರ ಪರಿಸರ ಉಳಿಸಿ-ಬೆಳೆಸುವ ಕಡೆ ಗಮನಹರಿಸಬೇಕು ಎಂದು ಕರೆ ನೀಡಿದರು.
ಪರಿಸರದ ಬಗ್ಗೆ ಸ್ಕೌಟ್ಸ್ ಗೈಡ್ಸ್ ತಂಡಕ್ಕೆ ಇರುವ ಧ್ಯೇಯ ಕೇವಲ ತರಬೇತಿಗೆ ಮಾತ್ರ ಸೀಮಿತ ಆಗಬಾರದು. ನಮ್ಮ ಜೀವನದಲ್ಲಿ ನಿತ್ಯ ಪಾಲಿಸಬೇಕು ಎಂದು ವಲಯ ಅರಣ್ಯಾಧಿಕಾರಿ ವಿಮಲ್ ಬಾಬು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಜಲಮೂಲಗಳು ಶೋಲಾ ಅರಣ್ಯದಿಂದ ಹುಟ್ಟುತ್ತವೆ. ಅಂತರ್ಜಲ ಮಟ್ಟ ಸಂರಕ್ಷಣೆಗೆ ಶೋಲಾ ಹುಲ್ಲುಗಾವಲು ಸಂರಕ್ಷಣೆ ಅತಿ ಮುಖ್ಯ. ಮಾಂದಲ್ಪಟ್ಟಿಯಲ್ಲಿ ಪುಷ್ಪಗಿರಿ ವನ್ಯಧಾಮದಲ್ಲಿ ಪ್ಲಾಸ್ಟಿಕ್ ನಿರ್ವಹಣೆಗೆ ಕೈಗೊಂಡ ನಿಯಮ ಮತ್ತು ಕಾನೂನು ಕ್ರಮಗಳ ಬಗ್ಗೆ ಉಪ ವಲಯ ಅರಣ್ಯಾಧಿಕಾರಿ ಶಶಿ ಪಿ.ಟಿ. ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಗೈಡ್ಸ್ ತಂಡದ ಸದಸ್ಯರಿಗೆ ಪರಿಸರ ದಿನಾಚರಣೆಯ ಧ್ಯೇಯ ವಾಕ್ಯವನ್ನು ಬೋಧಿಸಲಾಯಿತು. ನಂತರ ಬೋಲು ಗುಡ್ಡದ ಮೇಲೆ ಹುಲ್ಲಿನ ಗಿಡ ನೆಟ್ಟು ಮಾಂದಲ್ಪಟ್ಟಿ ರಸ್ತೆಯ ಬದಿಯಲ್ಲಿ ಸ್ವಚ್ಛತಾ ಕಾರ್ಯ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಸ್ಕೌಟ್ಸ್ ಗೈಡ್ಸ್ನ ಅಧಿಕಾರಿ ಡಾ. ಪೊಡಿಯ, ಸಹಾಯಕ ಪ್ರಾಧ್ಯಾಪಕರುಗಳಾದ ತಿಮ್ಮಯ್ಯ ಹಾಗೂ ಮಂಜುಳಾ ದೇವಿ, ಅರಣ್ಯ ಇಲಾಖೆಯ ಉಪವಲಯ ಅರಣ್ಯಾಧಿಕಾರಿ ಗಣೇಶ, ಅರಣ್ಯ ರಕ್ಷಕರಾದ ಮಂಜುನಾಥ ಮತ್ತು ಲೋಕೇಶ್, ಸಿಬ್ಬಂದಿಗಳು, ಪ್ರವಾಸಿಗರು ಮತ್ತು ಸಾರ್ವಜನಿಕರು ಭಾಗವಹಿಸಿದ್ದರು.