ಶನಿವಾರಸAತೆ, ಜೂ. ೧೬: ಸ್ಥಳೀಯ ನಾಡಕಚೇರಿಯ ಸಭಾಂಗಣದಲ್ಲಿ ಹೋಬಳಿ ವ್ಯಾಪ್ತಿಯ ಪೌತಿ ವಾರಸ ಖಾತೆ ಆಂದೋಲನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ೨೬ ಮಂದಿ ರೈತರು ಸಂಬAಧಪಟ್ಟ ದಾಖಲಾತಿಗಳೊಂದಿಗೆ ಪೌತಿ ಖಾತೆ ಕೋರಿ ಅರ್ಜಿ ಸಲ್ಲಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಸೋಮವಾರಪೇಟೆ ತಾಲೂಕು ತಹಶೀಲ್ದಾರ್ ಗೋವಿಂದ್ರಾಜ್ ಅವರು ರೈತರಿಂದ ಅರ್ಜಿ ಸ್ವೀಕರಿಸಿ ಸ್ಥಳದಲ್ಲೇ ನಿಯಮಾನುಸಾರ ಖಾತೆ ವರ್ಗಾವಣೆ ಮಾಡಲು ಆದೇಶಿಸಿದರು.
ನಂತರ ಅವರು ಮಾತನಾಡಿ, ಮುಂದಿನ ದಿನಗಳಲ್ಲೂ ಪೌತಿ ಖಾತೆ ಆಂದೋಲನ ನಡೆಯಲಿದೆ. ಯಾವುದೇ ಶುಲ್ಕ ಇರುವುದಿಲ್ಲ. ಹೋಬಳಿ ವ್ಯಾಪ್ತಿಯ ರೈತರು ಅಗತ್ಯ ದಾಖಲಾತಿಗಳ ಸಹಿತ ಅರ್ಜಿ ಸಲ್ಲಿಸಿ ಸರ್ಕಾರದ ಯೋಜನೆಯನ್ನು ಸದುಪಯೋಗಪಡಿಸಿಕೊಳ್ಳಿ ಎಂದರು.
ಕAದಾಯ ಇಲಾಖೆ ಉಪ ತಹಶೀಲ್ದಾರ್ ಬಿ.ಎನ್. ಶ್ರೀದೇವಿ, ಕಂದಾಯ ಪರಿವೀಕ್ಷಕ ಬಿ.ಆರ್. ಮಂಜುನಾಥ್, ತಾಲೂಕು ಕಚೇರಿಯ ಪಳಂಗಪ್ಪ, ಎಚ್.ಡಿ. ಸಂಧ್ಯಾ, ಗ್ರಾಮ ಲೆಕ್ಕಾಧಿಕಾರಿಗಳಾದ ರಜಾಕ್, ಸಂತೋಷ್, ವಿಶ್ವವಾಣಿ, ರುದ್ರಯ್ಯ ಹಾಗೂ ಗ್ರಾಮ ಸಹಾಯಕರು, ಸಿಬ್ಬಂದಿ ಹಾಜರಿದ್ದರು.