ಕೂಡಿಗೆ, ಜೂ. ೧೬: ಕೂಡುಮಂಗಳೂರು ಗ್ರಾಮದಲ್ಲಿರುವ ಚೌಡಮ್ಮ ತಾಯಿಯ ದ್ವಿವಾರ್ಷಿಕ ಪೂಜೋತ್ಸವ ಕಾರ್ಯಕ್ರಮ ಶ್ರದ್ಧಾಭಕ್ತಿಯಿಂದ ನಡೆಯಿತು. ಪೂಜೋತ್ಸವದ ಅಂಗವಾಗಿ ಬೆಳಿಗ್ಗಿನಿಂದಲೂ ದೇವಾಲಯದ ಆವರಣದಲ್ಲಿ ಹೋಮ ಹವನ ಸೇರಿದಂತೆ ಪೂಜಾ ಕೈಂಕರ್ಯಗಳು ನಡೆದವು. ಆಗಮಿಸಿದ ಸಾವಿರಾರು ಭಕ್ತಾದಿಗಳಿಗೆ ಅನ್ನಸಂತರ್ಪಣೆ ನಡೆಯಿತು. ಪೂಜಾ ಕೈಂಕರ್ಯಗಳನ್ನು ದೇವಾಲಯದ ಅರ್ಚಕ ಕರಿಯಣ್ಣ ನೆರವೇರಿಸಿದರು. ಈ ಸಂದರ್ಭ ದೇವಾಲಯ ಸಮಿತಿಯ ಅಧ್ಯಕ್ಷ ವೆಂಕಟೇಶ್, ಕಾರ್ಯದರ್ಶಿ ಹರೀಶ್, ಪ್ರಮುಖರಾದ ಕೆ.ವಿ. ಸಣ್ಣಪ್ಪ, ಸುರೇಶ್, ಪುಟ್ಟರಾಜ, ಮಂಜುನಾಥ ಸೇರಿದಂತೆ ಸಮಿತಿಯ ಸದಸ್ಯರು ಹಾಗೂ ಸುತ್ತಮುತ್ತಲಿನ ಗ್ರಾಮಗಳ ಭಕ್ತಾದಿಗಳು ಭಾಗವಹಿಸಿದ್ದರು.