(ವಿಶೇಷ ವರದಿ: ಹೆಚ್.ಕೆ. ಜಗದೀಶ್)

ಗೋಣಿಕೊಪ್ಪಲು, ಜೂ. ೧೬: ಗ್ರಾಮಗಳ ಅಭಿವೃದ್ಧಿಯನ್ನು ತ್ವರಿತಗತಿಯಲ್ಲಿ ಕಾರ್ಯಗತ ಗೊಳಿಸಲು ಸರ್ಕಾರ ಗ್ರಾಮಮಟ್ಟಕ್ಕೆ ಹೆಚ್ಚಿನ ಅಧಿಕಾರವನ್ನು ನೀಡಿದೆ. ಗ್ರಾಮ ಪಂಚಾಯಿತಿಯ ಮೂಲಕ ಅನೇಕ ಜನಪರ ಯೋಜನೆಗಳು, ಕಾಮಗಾರಿಗಳು ಸೇರಿದಂತೆ ಇನ್ನಿತರ ಕೆಲಸ ಕಾರ್ಯಗಳನ್ನು ಜನರಿಗೆ ತಲುಪಿಸುವ ಉದ್ದೇಶದಿಂದ ಗ್ರಾಮ ಪಂಚಾಯಿತಿಗೆ ಹೆಚ್ಚಿನ ಅಧಿಕಾರವನ್ನು ನೀಡಿದೆ. ಇತ್ತೀಚೆಗೆ ಸರ್ಕಾರದ ವಿವಿಧ ಯೋಜನೆಗಳ ಪ್ರಯೋಜನಗಳು ಕೂಡ ಗ್ರಾಮ ಮಟ್ಟದ ಪಂಚಾಯಿತಿಯಲ್ಲಿ ಸಿಗುವಂತೆ ನೋಡಿಕೊಂಡಿದೆ. ಪ್ರತಿ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಗಳನ್ನು ನೇಮಕಗೊಳಿಸಿ ಆ ಮೂಲಕ ಅಧ್ಯಕ್ಷರು ಹಾಗೂ ಪಿಡಿಓ ಆ ಗ್ರಾಮದ ಅಭಿವೃದ್ಧಿಯನ್ನು ಮಾಡುವ ಜವಾಬ್ದಾರಿ ಇವರ ಮೇಲಿದೆ.ವೀರಾಜಪೇಟೆ ಹಾಗೂ ಪೊನ್ನಂಪೇಟೆ ತಾಲೂಕಿನಲ್ಲಿ ಪ್ರಸ್ತುತ ೩೮ ಪಂಚಾಯಿತಿಗಳು ಕಾರ್ಯ ನಿರ್ವಹಿಸುತ್ತಿವೆ. ೧೮ ಪಂಚಾಯಿತಿಗಳಲ್ಲಿ ೯ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಿದ್ದಾರೆ. ಸಿದ್ದಾಪುರ, ಕಣ್ಣಂಗಾಲ, ಕಾಕೋಟುಪರಂಬು, ಆರ್ಜಿ, ಹಾತೂರು, ಗೋಣಿಕೊಪ್ಪ, ದೇವರಪುರ, ಕೆ. ಬಾಡಗ ಹಾಗೂ ಬಿಟ್ಟಂಗಾಲ ಪಂಚಾಯಿತಿಗಳಲ್ಲಿ ಪಂಚಾಯಿತಿ ಪಿಡಿಓಗಳಿಲ್ಲದೆ ತೊಂದರೆ ಅನುಭವಿಸುತ್ತಿದ್ದಾರೆ. ಈ ಪಂಚಾಯಿತಿಗಳಿಗೆ ಬೇರೆ ಪಂಚಾಯಿತಿಯಿAದ ಪ್ರಭಾರ ಪಿಡಿಓಗಳನ್ನು ಇಲಾಖೆಯು ಒದಗಿಸಿದೆ.

ಪ್ರಸ್ತುತ ಸನ್ನಿವೇಶದಲ್ಲಿ ಒಂದು ಗ್ರಾಮ ಪಂಚಾಯಿತಿಯಲ್ಲಿ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕೆಲಸ ನಿರ್ವಹಿಸಲು ಸಮಯವು ಏನೇನೂ ಸಾಲದು. ಪ್ರತಿನಿತ್ಯ ಸರ್ಕಾರಿ ಕಾರ್ಯಕ್ರಮದ ಸಭೆಗಳು, ಮಹಾತ್ಮ ಗಾಂಧಿ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ ಅನುಷ್ಠಾನ, ಅಧಿಕಾರಿಗಳು

ಹಾಗೂ ಜನಪ್ರತಿನಿಧಿಗಳ ದಿಢೀರ್ ಸಭೆಗಳು ಸೇರಿದಂತೆ ಹತ್ತು ಹಲವು ಕಾರ್ಯಕ್ರಮಗಳು ನಿರಂತರವಾಗಿ ನಡೆಯುತ್ತಲೇ ಇದೆ. ಈ ಒತ್ತಡದ ನಡುವೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಒಂದು ಪಂಚಾಯಿತಿಯಲ್ಲಿ ಕೆಲಸ ನಿರ್ವಹಿಸುವುದರಲ್ಲಿಯೇ ಇರುವ ಸಮಯ ಕಳೆದು ಹೋಗುತ್ತಿವೆ. ಇವರಿಗೆ ಮತ್ತೊಂದು ಪಂಚಾಯಿತಿಯ ಜವಾಬ್ದಾರಿಯನ್ನು ವಹಿಸಿದ ವೇಳೆ ಎರಡು ಪಂಚಾಯಿತಿಗಳಲ್ಲಿಯೂ ಕೂಡ ಅಭಿವೃದ್ಧಿಗೆ ತೀವ್ರ ಹಿನ್ನಡೆಯಾಗುತ್ತಿದೆ. ಯಾವುದೇ ಕೆಲಸವನ್ನು ಪೂರ್ಣ ಪ್ರಮಾಣದಲ್ಲಿ ಮಾಡಲು ಅಭಿವೃದ್ಧಿ ಅಧಿಕಾರಿಗಳಿಗೆ ಸಾಧ್ಯವಾಗುತ್ತಿಲ್ಲ.

ಓರ್ವ ಪಂಚಾಯಿತಿ ಪಿಡಿಓಗೆ ಎರಡು ಪಂಚಾಯಿತಿಗಳ ಜವಾಬ್ದಾರಿ ನೀಡಿದಲ್ಲಿ ಸಾರ್ವಜನಿಕರು ಇವರಿಂದ ಏನನ್ನೂ ನಿರೀಕ್ಷೆ ಮಾಡಲು ಸಾಧ್ಯವಾಗುತ್ತಿಲ್ಲ. ದಿನಕ್ಕೊಂದು ಕಾರ್ಯಕ್ರಮ ಇರುವುದರಿಂದ ಜನರ ಬೇಡಿಕೆಗಳಿಗೆ ದಿನನಿತ್ಯ ಸ್ಪಂದಿಸಲು ಸಾಧ್ಯವಾಗುತ್ತಿಲ್ಲ. ಸರ್ಕಾರ ನಿಗದಿಪಡಿಸಿದ ಗುರಿ ಸಾಧಿಸಲು ಹಿನ್ನಡೆಯಾಗುತ್ತಿದೆ. ಮುಂದೆ ಮಳೆಗಾಲ ಆರಂಭವಾಗುತ್ತಿರುವ ಹಿನ್ನೆಲೆಯಲ್ಲಿ ಪ್ರಕೃತಿ ವಿಕೋಪದಂತಹ ಘಟನೆಗಳು ಸಂಭವಿಸಬಹುದಾದ ಅಪಾಯವಿದೆ. ಇದರಿಂದ ಎರಡು ಪಂಚಾಯಿತಿಗಳಿಗೆ ಓರ್ವ ಪಿಡಿಓಗಳಿಂದ ನ್ಯಾಯ ಒದಗಿಸಲು ಸಾಧ್ಯವಾಗುತ್ತಿಲ್ಲ. ಓರ್ವ ಪಿಡಿಓ ೨ ಪಂಚಾಯಿತಿಯ ಜವಾಬ್ದಾರಿ ವಹಿಸಿಕೊಂಡ ದಿನದಿಂದಲೂ ಅಂತಹ ಪಂಚಾಯಿತಿ ಗಳು ಅಭಿವೃದ್ಧಿಯಲ್ಲಿ ಹಿನ್ನಡೆ ಕಂಡಿವೆ.

ಕ್ಷೇತ್ರದ ಹಿತದೃಷ್ಟಿಯಿಂದ ೩೮ ಪಂಚಾಯಿತಿಗಳಲ್ಲಿ ಸಮಗ್ರ ಅಭಿವೃದ್ಧಿ ಕಾಣಲು ಕ್ಷೇತ್ರದ ಶಾಸಕರು ಈ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಬೇಕಾಗಿದೆ. ಪಂಚಾಯಿತಿಗಳಲ್ಲಿ ಗ್ರೇಡ್-೨ ಅನುಭವಿ ಹಾಗೂ ಹಿರಿಯ ಕಾರ್ಯದರ್ಶಿಗಳಿಗೆ ತಾತ್ಕಾಲಿಕ ಜವಾಬ್ದಾರಿ ನೀಡಲು ಸಂಬAಧಿಸಿದ ಅಧಿಕಾರಿಗಳಿಗೆ ಕ್ಷೇತ್ರದ ಶಾಸಕರು ನಿರ್ದೇಶನ ನೀಡಬೇಕು, ಸರ್ಕಾರದ ವಿವಿಧ ಯೋಜನೆಗಳು ಸಕಾಲದಲ್ಲಿ ಜನತೆಗೆ ತಲುಪಲು ಹಾಗೂ ಇಂತಹ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ಶಾಸಕರು ಕಾರ್ಯೋನ್ಮುಖರಾಗಬೇಕಾಗಿದೆ.

ಸದಾ ಕೆಲಸದ ಒತ್ತಡಗಳು

೨೦೧೪ರಲ್ಲಿ ಗ್ರೇಡ್-೨ ಗ್ರಾಮ ಪಂಚಾಯಿತಿಗಳಿಗೆ ಅಭಿವೃದ್ಧಿ ಅಧಿಕಾರಿ ಹುದ್ದೆ ಖಾಲಿ ಇದ್ದಲ್ಲಿ ಗ್ರೇಡ್-೨ ಕಾರ್ಯದರ್ಶಿಗಳಿಗೆ ಅನುಭವಿ ಹಾಗೂ ಹಿರಿತನದ ಮಾನದಂಡದಲ್ಲಿ ಪಂಚಾಯಿತಿಗೆ ಅಭಿವೃದ್ಧಿ ಅಧಿಕಾರಿಗಳನ್ನಾಗಿ ನೇಮಕಗೊಳಿಸಿ ಪ್ರಭಾರ ಜವಾಬ್ದಾರಿ ನೀಡಲಾಗಿತ್ತು. ಇದರಿಂದ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳ ಕೊರತೆ ನೀಗಿತ್ತು. ಆದರೆ ೨೦೧೯ರಲ್ಲಿ ಸರ್ಕಾರ ಗ್ರೇಡ್-೨ ಕಾರ್ಯದರ್ಶಿಗಳಿಗೆ ಪ್ರಭಾರ ನೀಡಬಾರದೆಂದು ಆದೇಶ ಪ್ರಕಟವಾಯಿತು.

ಈ ಆದೇಶವು ಶೇ. ೧೦೦ ಅನುಷ್ಠಾನಗೊಳ್ಳಲಿಲ್ಲ. ಸರ್ಕಾರ ಆದೇಶವಿದ್ದರೂ ಗ್ರೇಡ್-೨ ಕಾರ್ಯದರ್ಶಿಗಳಿಗೆ ಪಂಚಾಯಿತಿಯ ಜವಾಬ್ದಾರಿ ನೀಡಿ ಅಭಿವೃದ್ಧಿಗೆ ಒತ್ತು ನೀಡಲಾಗಿತ್ತು. ಆಯಾಯ ಜಿಲ್ಲೆಯ ಜಿಲ್ಲಾ ಪಂಚಾಯಿತಿಯ ಕಾರ್ಯನಿರ್ವಹಣಾಧಿಕಾರಿಗಳು ಪಿಡಿಓಗಳ ಕೊರತೆ ನೀಗಿಸಲು ಅನುಭವಿ ಹಾಗೂ ಹಿರಿತನವಿರುವ ಗ್ರೇಡ್-೨ ಕಾರ್ಯದರ್ಶಿಗಳಿಗೆ ಪಂಚಾಯಿತಿಯ ಪ್ರಭಾರ ಜವಾಬ್ದಾರಿ ನೀಡಿ ಪಂಚಾಯಿತಿಯ ಅಭಿವೃದ್ಧಿಗೆ ಒತ್ತು ನೀಡಿದ್ದರು. ಆದರೆ ಕೊಡಗು ಜಿಲ್ಲೆಯ ವೀರಾಜಪೇಟೆ ತಾಲೂಕಿನಲ್ಲಿ ಇದೀಗ ೯ ಪಿಡಿಓಗಳಿಂದ ೧೮ ಪಂಚಾಯಿತಿಗಳನ್ನು ನಿರ್ವಹಿಸಬೇಕಾದ ಪ್ರಸಂಗ ಎದುರಾಗಿದೆ. ಇದರಿಂದ ಗ್ರಾಮದ ಅಭಿವೃದ್ಧಿಗಳಿಗೆ ಹಿನ್ನಡೆಯಾಗುತ್ತಿದೆ.

ಗ್ರೇಡ್ -೨ ಕಾರ್ಯದರ್ಶಿಗಳಿಗೆ ಜವಾಬ್ದಾರಿ

ವೀರಾಜಪೇಟೆ ತಾಲೂಕಿನಲ್ಲಿ ಬಹುತೇಕ ಪರಿಶಿಷ್ಟ ವರ್ಗದ ಜನಸಂಖ್ಯೆ ಹೆಚ್ಚಿರುವ ಕಾರಣ ಪಂಚಾಯಿತಿ ಮೂಲಕ ಇವರ ಕಾರ್ಯಕ್ರಮಗಳು ನಿಗದಿತ ಸಮಯದಲ್ಲಿ ಪೂರ್ಣ ಗೊಳಿಸಬೇಕಾಗಿದೆ. ಅಲ್ಲದೆ ಗ್ರಾಮ ಪಂಚಾಯಿತಿಯ ಅಭಿವೃದ್ಧಿಗೆ ಪೂರಕವಾಗಿರುವ ಎನ್.ಆರ್. ಇ.ಜಿ. ಕಾರ್ಯಕ್ರಮಗಳು ಅನುಷ್ಠಾನಗೊಳ್ಳಬೇಕಾದರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳು ಪೂರ್ಣ ಪ್ರಮಾಣದಲ್ಲಿ ತಮ್ಮ ಪಂಚಾಯಿತಿ ಯಲ್ಲಿ ತಮ್ಮನ್ನು ತೊಡಗಿಸಿ ಕೊಳ್ಳಬೇಕಾಗಿದೆ. ಈ ನಿಟ್ಟಿನಲ್ಲಿ ಅನುಭವಿ ಕಾರ್ಯದರ್ಶಿ ಗಳಿಗೆ ಪಂಚಾಯಿತಿಯ ಪ್ರಭಾರ ಪಿಡಿಓಗಳ ಜವಾಬ್ದಾರಿ ನೀಡಿದ್ದಲ್ಲಿ ಈ ಸಮಸ್ಯೆಗೆ ಪರಿಹಾರ ಕಾಣುವುದಲ್ಲದೆ ಆಯಾಯ ಪಂಚಾಯಿತಿಯಲ್ಲಿ ಪಿಡಿಓಗಳು ಪ್ರತಿನಿತ್ಯ ಜನರ ಕಷ್ಟಗಳಿಗೆ ಸ್ಪಂದಿಸಿದAತಾಗುತ್ತದೆ.