ಗೋಣಿಕೊಪ್ಪ ವರದಿ, ಜೂ. ೧೬: ಸ್ವಾಮಿ ವಿವೇಕಾನಂದ ಯೂತ್ ಮೂವ್‌ಮೆಂಟ್, ಚಿತ್ತ ಸಂಜೀವಿನಿ ಚಾರಿಟೇಬಲ್ ಟ್ರಸ್ಟ್ ಹಾಗೂ ವಿವಿಧ ಸಂಘ-ಸAಸ್ಥೆಗಳ ಸಹಯೋಗದಲ್ಲಿ ತಾ. ೧೯ ರಂದು ಗೋಣಿಕೊಪ್ಪ ವೆಲ್‌ಕೇರ್ ಡಯಾಗ್ನೋಸ್ಟಿಕ್‌ನಲ್ಲಿ ಮಾನಸಿಕ ಆರೋಗ್ಯ ಉಚಿತ ತಪಾಸಣಾ ಶಿಬಿರ ಆಯೋಜಿಸಲಾಗಿದೆ.

ಬೆಳಿಗ್ಗೆ ೧೦ ಗಂಟೆಯಿAದ ಮಧ್ಯಾಹ್ನ ೧ ಗಂಟೆವರೆಗೆ ವೈದ್ಯರು ತಪಾಸಣೆ ನಡೆಸಲಿದ್ದಾರೆ. ಮನಸಿಕ ತೊಂದರೆ, ಬುದ್ಧಿ ಮಾಂದ್ಯತೆ, ಮೂರ್ಚೆ ರೋಗ, ನಿದ್ರಾಹೀನತೆ, ಮದ್ಯಪಾನ ಮತ್ತು ಇತರೆ ದುಶ್ಚಟಗಳು, ದೀರ್ಘಕಾಲದ ಮೈ, ಕೈ ನೋವು, ಮಕ್ಕಳಲ್ಲಿ ಹಠಮಾರಿತನ, ವಿದ್ಯಾಭ್ಯಾಸದಲ್ಲಿ ನಿರಾಸಕ್ತಿ ಸಮಸ್ಯೆ ಇರುವವರು ಪಾಲ್ಗೊಳ್ಳಬಹುದಾಗಿದೆ ಎಂದು ವಿವೇಕಾನಂದ ಯೂತ್‌ಮೂವ್‌ಮೆಂಟ್ ಪ್ರಕಟಣೆ ತಿಳಿಸಿದೆ.