*ಗೋಣಿಕೊಪ್ಪ, ಜೂ. ೧೪: ಚಾಮುಂಡೇಶ್ವರಿ ವಿದ್ಯುತ್ ಸರಬರಾಜು ನಿಗಮದ ಗೋಣಿಕೊಪ್ಪ ಉಪವಿಭಾಗದ ವ್ಯಾಪ್ತಿಯಲ್ಲಿ ೨೧ ಗ್ರಾಮ ಪಂಚಾಯಿಗಳಲ್ಲಿ ಪ್ರತಿ ಸೋಮವಾರ ವಿದ್ಯುತ್ ಶುಲ್ಕ ವಸೂಲಿ ಕೆಲಸಕ್ಕೆ ನಿಗಮದ ನೌಕರನನ್ನು ನಿಯೋಜಿಸಲಾಗಿದೆ ಎಂದು ಗೋಣಿಕೊಪ್ಪ ಸೆಸ್ಕಾಂ ಸಹಾಯಕ ಕಾರ್ಯ ನಿರ್ವಾಹಕ ಇಂಜಿನಿಯರ್ ನೀಲ್ ಶೆಟ್ಟಿ ತಿಳಿಸಿದ್ದಾರೆ.

ಗ್ರಾಹಕರು ತಮ್ಮ ವ್ಯಾಪ್ತಿಗೆ ಬರುವಂತಹ ಗ್ರಾಮ ಪಂಚಾಯಿತಿಯಲ್ಲಿ ವಿದ್ಯುತ್ ಬಿಲ್ಲನ್ನು ಪಾವತಿ ಮಾಡಲು ಈ ವ್ಯವಸ್ಥೆ ಮಾಡಲಾಗಿದೆ. ಕುಟ್ಟ ಗ್ರಾಮ ಪಂಚಾಯಿತಿಯಲ್ಲಿ ಪ್ರತಿ ಮಂಗಳವಾರ ಈ ಕಾರ್ಯ ನಡೆಯಲಿದೆ. ಗೋಣಿಕೊಪ್ಪ ಪಂಚಾಯಿತಿ ವ್ಯಾಪ್ತಿಯಲ್ಲಿ ಉಪ ವಿಭಾಗ ಇರುವುದರಿಂದ ಈ ಪಂಚಾಯಿತಿಯಲ್ಲಿ ಕಂದಾಯ ವಸೂಲಿ ಕಾರ್ಯ ನಡೆಯುವುದಿಲ್ಲ ಎಂದು ಮಾಹಿತಿ ನೀಡಿದ್ದಾರೆ.