ಶನಿವಾರಸಂತೆ, ಜೂ. ೧೪: ಸ್ಥಳೀಯ ಟೌನ್ ಫೀಡರ್ನಲ್ಲಿ ತುರ್ತು ಕೆಲಸ ಇರುವ ಕಾರಣ ತಾ. ೧೫ರಂದು (ಇಂದು) ಬೆಳಿಗ್ಗೆ ೯ ಗಂಟೆಯಿAದ ಸಂಜೆ ೬ ಗಂಟೆಯವರೆಗೆ ವಿದ್ಯುತ್ ವ್ಯತ್ಯಯವಾಗಲಿದೆ.
ಶನಿವಾರಸಂತೆ ಟೌನ್ ಫೀಡರ್ಗೆ ಒಳಪಡುವ ಗುಡುಗಳಲೆ, ಹೆಮ್ಮನೆ, ಬಿದರೂರು, ಕಿತ್ತೂರು ರಾಣಿ ಚೆನ್ನಮ್ಮ ವೃತ್ತ, ಗುಂಡೂರಾವ್ ಬಡಾವಣೆ, ತ್ಯಾಗರಾಜ ಕಾಲೋನಿ, ಚಿಕ್ಕಕೊಳತ್ತೂರು, ಮಾದ್ರೆ, ಶೆಟ್ಟಿಗನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ವಿದ್ಯುತ್ ಸರಬರಾಜು ಸ್ಥಗಿತಗೊಳ್ಳಲಿದೆ. ಸಾರ್ವಜನಿಕರು ಸಹಕರಿಸಬೇಕು ಎಂದು ಸೆಸ್ಕ್ನ ಕಿರಿಯ ಸಂಪರ್ಕಾಧಿಕಾರಿ ಹೇಮಂತ್ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.