ಗೋಣಿಕೊಪ್ಪಲು, ಜೂ. ೧೪: ಪತಿ-ಪತ್ನಿಯರ ನಡುವೆ ಆರಂಭವಾದ ಕೌಟುಂಬಿಕ ಕಲಹವು ಅಂತಿಮವಾಗಿ ಪತ್ನಿಯ ಕೊಲೆಯಲ್ಲಿ ಅಂತ್ಯಕAಡ ಘಟನೆ ದ.ಕೊಡಗಿನ ಬಾಳೆಲೆ ಹೋಬಳಿಯ ನಿಟ್ಟೂರು ಗ್ರಾಮದಲ್ಲಿ ನಡೆದಿದೆ. ಪತಿಯ ಸಿಟ್ಟಿಗೆ ಪತ್ನಿ ಮುತ್ತಕ್ಕಿ (೪೫) ಮೃತಪಟ್ಟಿದ್ದಾಳೆ. ಕೊಲೆ ಆರೋಪಿ ಪತಿ ರಾಜು (೪೯) ಎಂಬಾತನನ್ನು ಪೊಲೀಸರು ಬಂಧಿಸಿದ್ದಾರೆ.
ಪತ್ನಿ ಹಾಗೂ ಮಕ್ಕಳೊಂದಿಗೆ ಜೀವನ ಸಾಗಿಸುತ್ತಿದ್ದ ಕಾರ್ಮಿಕ ರಾಜು ಸಣ್ಣ ಪುಟ್ಟ ವಿಚಾರದಲ್ಲಿ ತನ್ನ ಪತ್ನಿ ಮುತ್ತಕ್ಕಿಯೊಂದಿಗೆ ಆಗಿಂದ್ದಾಗೆ ಜಗಳವಾಡುತ್ತಿದ್ದ. ಇತ್ತೀಚಿನ ದಿನಗಳಲ್ಲಿ ಮನೆಯಲ್ಲಿ ಕಲಹವು ತಾರಕಕ್ಕೇರಿತ್ತು. ಪತ್ನಿ ಮುತ್ತಕ್ಕಿ ರಾಜುವಿನ ಮಾತನ್ನು ಆಲಿಸಲಿಲ್ಲ ಎಂಬ ಕಾರಣವನ್ನು ಮುಂದಿಟ್ಟುಕೊAಡು ಪತಿ ರಾಜು ಪತ್ನಿ ಮುತ್ತಕ್ಕಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿದ್ದಾನೆ. ಈ ವೇಳೆ ಪತ್ನಿಗೆ ಮಾರಣಾಂತಿಕ ಪೆಟ್ಟಾಗಿತ್ತು. ಮನೆಯಲ್ಲಿದ್ದ ಮಕ್ಕಳು ಅಕ್ಕಪಕ್ಕದವರ ಸಹಾಯ ಪಡೆದು ಮುತ್ತಕ್ಕಿಯನ್ನು ಆಸ್ಪತ್ರೆಗೆ ಸೇರಿಸುವ ಪ್ರಯತ್ನ ನಡೆಸಿದರು. ಈ ವೇಳೆ ಮಡಿಕೇರಿ ಆಸ್ಪತ್ರೆಗೆ ತೆರಳುವ ಸಂದರ್ಭ ರಸ್ತೆ ಮಧ್ಯದಲ್ಲಿ ಮುತ್ತಕ್ಕಿ ಮೃತಪಟ್ಟಿದ್ದಾಳೆ.
ವಿಷಯ ತಿಳಿದ ಗೋಣಿಕೊಪ್ಪ ವೃತ್ತ ನಿರೀಕ್ಷಕ ಗೋವಿಂದರಾಜು, ಪೊನ್ನಂಪೇಟೆ ಠಾಣಾಧಿಕಾರಿ ಕುಮಾರ್ ಹಾಗೂ ಸಿಬ್ಬಂದಿಗಳು ಮೃತಳ ಮನೆಗೆ ತೆರಳಿ ಪರಿಶೀಲನೆ ನಡೆಸಿದರು. ಈ ವೇಳೆ ಆರೋಪಿ ರಾಜು ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಪತ್ನಿಯ ಮೇಲೆ ಕತ್ತಿಯಿಂದ ಹಲ್ಲೆ ನಡೆಸಿರುವುದಾಗಿ ತಪ್ಪೊಪ್ಪಿಕೊಂಡಿದ್ದಾನೆ. ಕೊಲೆ ಮಾಡಿದ ಆರೋಪದ ಮೇರೆ ಪೊಲೀಸರು ಆತನನ್ನು ವಶಕ್ಕೆ ಪಡೆದು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ. ಡಿವೈಎಸ್ಪಿ ನಿರಂಜನರಾಜೇ ಅರಸ್ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.