ಪೊನ್ನಂಪೇಟೆ, ಜೂ. ೧೫: ಪೊನ್ನಂಪೇಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸುಳುಗೋಡು ಗ್ರಾಮದ ಕಳ್ಳಿಚಂಡ ಆಶಿಕ್ ಅಪ್ಪಚ್ಚು ಎಂಬವರ ಮನೆಯಲ್ಲಿದ್ದ ಸುಮಾರು ೭.೬೦ ಲಕ್ಷ ಮೌಲ್ಯದ ಚಿನ್ನಾಭರಣಗಳು ಕಳ್ಳತನ ವಾಗಿರುವ ಪ್ರಕರಣ ನಡೆದಿದೆ. ತಾ.೧೧ ರಂದು ಆಶಿಕ್ ಅಪ್ಪಚ್ಚು ಅವರು ಕುಟುಂಬ ಸಮೇತ ಸಂಬAಧಿಕರ ಮದುವೆಗೆ ತೆರಳಿದ್ದರು. ಮದುವೆ ಮುಗಿಸಿಕೊಂಡು ಮನೆಗೆ ಬರುವಾಗ ಭಾನುವಾರ ತಡ ರಾತ್ರಿಯಾಗಿತ್ತು. ಸೋಮವಾರ ಬೆಳಿಗ್ಗೆ ಎದ್ದು ನೋಡುವಾಗ ಕಳೆದ ೧೦ ತಿಂಗಳಿನಿAದ ತಮ್ಮ ಲೈನ್ ಮನೆಯಲ್ಲಿ ವಾಸವಾಗಿದ್ದು, ಕೂಲಿ ಕೆಲಸ ಮಾಡಿಕೊಂಡಿದ್ದ ವಸಂತ ಮತ್ತು ರೇಣುಕಾ ಎಂಬ ದಂಪತಿ ತಾವು ವಾಸವಾಗಿದ್ದ ಮನೆಯಿಂದ ಪರಾರಿಯಾಗಿರುವುದು ಬೆಳಕಿಗೆ ಬಂದಿದೆ. ಅನುಮಾನಗೊಂಡ ಆಶಿಕ್ ಅಪ್ಪಚ್ಚು ಅವರು ತಮ್ಮ ಮನೆಯ ಬೀರುವಿನಲ್ಲಿ ಇಟ್ಟಿದ್ದ ಆಭರಣಗಳನ್ನು ಪರಿಶೀಲಿಸಿದಾಗ, ಅದರೊಳಗಿದ್ದ ಆಭರಣಗಳು ಕಾಣೆಯಾಗಿರುವ ಬಗ್ಗೆ ಗೊತ್ತಾಗಿದೆ. ಮನೆಯಲ್ಲಿ ಕೆಲಸಕ್ಕಿದ್ದ ದಂಪತಿ ಆಭರಣಗಳನ್ನು ದೋಚಿ ಪರಾರಿ ಯಾಗಿರುವುದಾಗಿ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

(ಮೊದಲ ಪುಟದಿಂದ) ಆಶಿಕ್ ಅಪ್ಪಚ್ಚು ಅವರ ಮನೆಯಲ್ಲಿದ್ದ ೬ ಚಿನ್ನದ ನಾಣ್ಯಗಳು, ೨ ವಜ್ರದ ಓಲೆ, ೧ ಚಿನ್ನದ ಉಂಗುರ, ೨ ಚಿನ್ನದ ಜುಮುಕಿ, ೧ ಜೊತೆ ಚಿನ್ನದ ಓಲೆ, ಒಂದು ೪ ಎಳೆ ಚಿನ್ನದ ಸರ, ೧ ಬ್ರಾಸ್ ಲೈಟ್ ಸೇರಿದಂತೆ ಒಟ್ಟು ೭.೬೦ ಲಕ್ಷ ಮೌಲ್ಯದ ಚಿನ್ನಾಭರಣಗಳು ಕಳ್ಳತನವಾಗಿರುವ ಬಗ್ಗೆ ಪೊನ್ನಂಪೇಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಲಾಗಿದೆ. ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಕಳ್ಳತನ ಮಾಡಿರುವ ದಂಪತಿಯ ಪತ್ತೆಗಾಗಿ ಬಲೆ ಬೀಸಿದ್ದು ತನಿಖೆ ಚುರುಕುಗೊಳಿಸಿದ್ದಾರೆ.

-ಚನ್ನನಾಯಕ