ಮಡಿಕೇರಿ, ಜೂ. ೧೫: ಮಡಿಕೇರಿ ಸನಿಹದ ತಾಳತ್‌ಮನೆಯಲ್ಲಿ ಚಿರತೆ ಪ್ರತ್ಯಕ್ಷವಾಗಿದೆ. ಅಲ್ಲಿನ ದುರ್ಗಾಭಗವತಿ ದೇವಾಲಯ ಸನಿಹ ಇರುವ ಕಾಳನ ರವಿ ಅವರಿಗೆ ಸೇರಿದ ತೋಟದಲ್ಲಿ ಚಿರತೆ ಓಡಾಡಿಕೊಂಡಿದೆಯಲ್ಲದೆ, ನಿನ್ನೆ ರಾತ್ರಿ ರವಿ ಅವರ ಸಾಕು ನಾಯಿಯನ್ನು ಹೊತ್ತೊಯ್ದು ತಿಂದು ಹಾಕಿದೆ. ನಿನ್ನೆ ಮಧ್ಯಾಹ್ನ ಚಿರತೆಯನ್ನು ಗ್ರಾಮಸ್ಥರು ಕಂಡಿದ್ದು, ಭಯಭೀತರಾಗಿದ್ದಾರೆ.