ಮಡಿಕೇರಿ, ಜೂ. ೧೪: ಅದೃಷ್ಟವೆಂಬAತೆ ರಾಜ್ಯ ವಿಧಾನ ಪರಿಷತ್‌ನ ಸದಸ್ಯರಾಗುವ ಅವಕಾಶ ಲಭಿಸಿದ್ದ ಈ ಆರು ವರ್ಷಗಳ ಅಧಿಕಾರಾವಧಿಯಲ್ಲಿ ಸಾರ್ಥಕತೆಯ ಕೆಲಸ ನಿರ್ವಹಿಸಿರುವ ಆತ್ಮತೃಪ್ತಿ ಇರುವುದಾಗಿ ಇದೀಗ ನಿವೃತ್ತರಾಗುತ್ತಿರುವ ಎಂ.ಎಲ್.ಸಿ. ಶಾಂತೆಯAಡ ವೀಣಾ ಅಚ್ಚಯ್ಯ ಅವರು ಅಭಿಪ್ರಾಯ ವ್ಯಕ್ತಪಡಿಸಿದರು.
‘ಶಕ್ತಿ’ಗೆ ನೀಡಿದ ಸಂದರ್ಶನದಲ್ಲಿ ಅವರು ತಮ್ಮ ಅನುಭವಗಳು - ಕೆಲಸ ಕಾರ್ಯಗಳು ಜತೆಗೆ ಸಾರ್ವತ್ರಿಕವಾಗಿ ದೊರೆತ ಸ್ಪಂದನದ ಬಗ್ಗೆ ತಮ್ಮ ಮನದಾಳ ಬಿಚ್ಚಿಟ್ಟರು.
ಕಾಂಗ್ರೆಸ್ ಪಕ್ಷ, ಪಕ್ಷದ ವರಿಷ್ಠರು ನೀಡಿದ ಅವಕಾಶದ ಸದ್ಬಳಕೆ ಅಧಿಕಾರಕ್ಕೆ ಬಂದ ನಂತರ ರಾಜಕೀಯ ರಹಿತವಾಗಿ ಎಲ್ಲರಿಗೂ ಸ್ಪಂದಿಸಿ ಆದಷ್ಟು ಪ್ರಾಮಾಣಿಕ ರೀತಿಯಲ್ಲಿ ಕೆಲಸ ನಿರ್ವಹಿಸಿದ್ದೇನೆ. ಹಲವಷ್ಟು ಸಮಸ್ಯೆಗಳಿಗೆ ಪರಿಹಾರ ಸಿಕ್ಕಿದೆ.
(ಮೊದಲ ಪುಟದಿಂದ) ಇನ್ನು ಕೆಲವು ವಿಚಾರಗಳಿಗೆ ಸಂಬAಧಿಸಿದAತೆ ನಿರೀಕ್ಷೆಗಳು ಪ್ರಗತಿಯಲ್ಲಿವೆ. ಪಕ್ಷದ ರಾಜ್ಯ - ಜಿಲ್ಲೆಯ ಮುಖಂಡರ ಸಹಕಾರ, ಜಿಲ್ಲೆಯ ಇತರ ಜನಪ್ರತಿನಿಧಿಗಳ ಪೂರಕ ಸ್ಪಂದನ ಪರಿಷತ್‌ನಲ್ಲಿ ಎಲ್ಲಾ ಸಭಾಪತಿಗಳು - ಸದಸ್ಯರುಗಳು ತಮ್ಮೊಂದಿಗೆ ಉತ್ತಮ ಬಾಂಧವ್ಯದಿAದಿದ್ದು ಬೇಕು-ಬೇಡಿಕೆಗಳಿಗೆ ಕೈಜೋಡಿಸಿ ಸಹಕಾರ ನೀಡಿರುವುದನ್ನು ಸ್ಮರಿಸಿಕೊಳ್ಳುವುದಾಗಿ ವೀಣಾ ಹೇಳಿದರು.
ಜಿಲ್ಲೆಯಲ್ಲಿ ಕಾಂಗ್ರೆಸ್‌ನ ಶಾಸಕರುಗಳು ಇಲ್ಲದ ಸಂದರ್ಭದಲ್ಲಿ ತಮಗೆ ಈ ಅವಕಾಶ ಒಲಿದು ಬಂದಿತು - ಸದನದಲ್ಲಿ ಸಾಕಷ್ಟು ಅನುಭವ ದೊರೆತಿದೆ. ಕೊಡಗಿನ ಎಲ್ಲಾ ಜನರು ನಿರಂತರ ಸಂಪರ್ಕದಲ್ಲಿರುತ್ತಿದ್ದರು. ಎಲ್ಲೂ ಅಪಸ್ವರ ಬಾರದ ರೀತಿಯಲ್ಲಿ ಸಾಧ್ಯವಾದಷ್ಟು ಜನಪರವಾಗಿ ಕೆಲಸ ಮಾಡಿರುವ ತೃಪ್ತಿ ಇರುವುದಾಗಿ ಅವರು ನುಡಿದರು.
ರಾಜ್ಯದ ಜನರ ಸ್ಮರಣೆ : ತಾವು ಎಂಎಲ್‌ಸಿಯಾದ ನಂತರ ೨೦೧೮ರಲ್ಲಿ ಕೊಡಗಿನಲ್ಲಿ ಸಂಭವಿಸಿದ ಪ್ರಾಕೃತಿಕ ದುರಂತ ಮರೆಯಲಾಗದ ಕಹಿ ಘಟನೆ. ಅದರಲ್ಲೂ ತಮ್ಮ ಊರಿನಲ್ಲಿ ಭಾರೀ ಅನಾಹುತ ಉಂಟಾಗಿತ್ತು. ಈ ಸಂದರ್ಭದಲ್ಲಿ ಇಡೀ ರಾಜ್ಯದ ಜನತೆ ಕೊಡಗಿನ ಬಗ್ಗೆ ತೋರಿದ ಕಾಳಜಿಯನ್ನು ಎಂದೂ ಮರೆಯುವುದಿಲ್ಲ ಎಂದು ಸ್ಮರಿಸಿದ ಅವರು ಸರಕಾರದ ಪ್ರತಿನಿಧಿಗಳು - ಅಧಿಕಾರಿಗಳ ಸ್ಪಂದನವನ್ನು ಉಲ್ಲೇಖಿಸಿದರು.
ತಾವು ಹಳ್ಳಿಯಿಂದಲೇ ಬಂದವರಾಗಿದ್ದು ಗ್ರಾಮೀಣ ಭಾಗದ ಸಮಸ್ಯೆಗಳ ಅರಿವಿದೆ. ಈ ನಿಟ್ಟಿನಲ್ಲಿ ಸಾಧ್ಯವಾದಷ್ಟು ಗ್ರಾಮೀಣ ಭಾಗಕ್ಕೆ ಸ್ಪಂದಿಸಲಾಗಿದೆ. ಆದರೆ ತಾವು ಕೇವಲ ಕೊಡಗಿಗೆ ಮಾತ್ರ ಸೀಮಿತವಾದ ಎಂಎಲ್‌ಸಿಯಾಗಿರಲಿಲ್ಲ. ರಾಜ್ಯದ ಇತರೆಡೆಯ ಶಾಸಕರು ನೀಡಿದ್ದ ಸಹಕಾರಕ್ಕೂ ಸ್ಪಂದಿಸಬೇಕಿತ್ತು. ಆದರೂ ಇವೆಲ್ಲವನ್ನೂ ಸರಿದೂಗಿಸಿಕೊಂಡು ಸಾಧ್ಯವಾದಷ್ಟು ಕೊಡಗಿನತ್ತಲೇ ಆಸಕ್ತಿ ತೋರಿರುವುದಾಗಿ ನುಡಿದರು.
ಕೊಡಗಿನಲ್ಲಿ ಇನ್ನೂ ಸಾಕಷ್ಟು ಸಮಸ್ಯೆಗಳಿವೆ. ಈ ಬಗ್ಗೆ ಮುಂದಿನವರು ಗಮನ ಹರಿಸಬೇಕು. ತಾವು ಅಧಿಕಾರ ಇಲ್ಲದಿದ್ದರೂ ಸದಾ ಜನಸೇವೆಗೆ ಬದ್ಧರಾಗಿರುವುದಾಗಿ ಹೇಳಿದ ವೀಣಾ ತಮ್ಮ ಅಧಿಕಾರಾವಧಿಯಲ್ಲಿ ಮೇಲ್ಮನೆಯ ಎಲ್ಲಾ ಸದಸ್ಯರು ಕೊಡಗಿನ ವಿಚಾರಕ್ಕೆ ಸ್ಪಂದಿಸಿದ್ದಾರೆ. ತಮ್ಮ ಜತೆಗಿದ್ದ ಕೊಡಗಿನ ಎಂ.ಎಲ್.ಸಿ. ಸುನಿಲ್ ಸುಬ್ರಮಣಿ ಅವರೂ ಎಲ್ಲದಕ್ಕೂ ದನಿಗೂಡಿಸಿದ್ದಾರೆ, ಪಕ್ಷಕ್ಕೂ ಬದ್ಧರಾಗಿ ಎಲ್ಲಾ ಜನತೆಗೂ ಸ್ಪಂದಿಸಿದ್ದೇನೆ. ಕೊಡಗು ಜನರು ನೀಡಿದ ಸಹಕಾರವೂ ಮರೆಯಲಾಗದು ಎಂದರು.
ಅಧಿಕಾರ ಇದ್ದಾಗ ಇದ್ದ ರೀತಿಯಲ್ಲಿಯೇ ಮುಂದೆಯೂ ಜನಸೇವೆಗೆ ಕಟಿಬದ್ಧರಾಗಿರುವುದಾಗಿ ತಿಳಿಸಿದ ಅವರು ೨೦೨೩ರ ವಿಧಾನಸಭಾ ಚುನಾವಣೆಗೆ ವೀರಾಜಪೇಟೆ ಕ್ಷೇತ್ರದಿಂದ ಸ್ಪರ್ಧಿಸುವ ಅಭಿಲಾಷೆ ಇದೆ. ಪಕ್ಷ-ವರಿಷ್ಠರು ಅವಕಾಶ ನೀಡಿದಲ್ಲಿ ಇದಕ್ಕೆ ಸಿದ್ಧವಿರುವುದಾಗಿಯೂ ಭವಿಷ್ಯದ ಕುರಿತು ಉಲ್ಲೇಖಿಸಿದರು.
ತಾವು ಹಿಂದಿನಿAದಲೂ ಕೊಡವ ಸೀರೆಯನ್ನೇ ಉಡುತ್ತಿದ್ದು ಇದಕ್ಕೆ ಎಲ್ಲರಿಂದಲೂ ಅಪಾರ ಗೌರವ ಸಿಗುತ್ತಿದ್ದುದು ತಮ್ಮ ವಿಶೇಷ ಅನುಭವವಾಗಿದೆ ಎಂದು ಅವರು ಅನಿಸಿಕೆ ವ್ಯಕ್ತಪಡಿಸಿದರು.