ಮಡಿಕೇರಿ, ಜೂ. ೧೪: ರಾಯಚೂರಿನ ಕೃಷಿ ವಿಶ್ವವಿದ್ಯಾಲಯದಲ್ಲಿ ಜರುಗಿದ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ "ಕೂರ್ಗ್ ರೆಜಿಮೆಂಟ್" ಕೃತಿಯ ಲೇಖಕ ಮೇ. ಡಾ. ಕುಶ್ವಂತ್ ಕೋಳಿಬೈಲು ಅವರಿಗೆ ಕರ್ನಾಟಕ ಸಾಹಿತ್ಯ ಅಕಾಡೆಮಿಯ ದತ್ತಿ ಪ್ರಶಸ್ತಿಯನ್ನು ಪ್ರದಾನ ಮಾಡಲಾಯಿತು.
ಡಾ. ಶಿವರಾಜ್ ಪಾಟೀಲರು ಅಧ್ಯಕ್ಷತೆ ವಹಿಸಿದ್ದ ಸಮಾರಂಭದಲ್ಲಿ ಶಾಸಕ ಎನ್. ರವಿಕುಮಾರ್, ಹಿರಿಯ ಸಾಹಿತಿ ಹೆಚ್.ಎಸ್. ಶಿವಪ್ರಕಾಶ್, ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಡಾ. ವಸಂತ್ ಕುಮಾರ್ ಭಾಗವಹಿಸಿದ್ದರು.